ಸೀರೆಯಲ್ಲಿ ಗರ್ಭಿಣಿ ನೇಹಾ ಫೋಟೋಶೂಟ್; ಬೇಬಿ ಬಂಪ್ ನೋಡಿ ತಾಯಿ ಕಳೆ ಕಾಣಿಸ್ತಿದೆ ಎಂದ ಫ್ಯಾನ್ಸ್

First Published | Jun 25, 2024, 8:20 PM IST

ಕನ್ನಡ ಕಿರುತೆರೆಯ ಗೊಂಬೆ ಖ್ಯಾತಿಯ ನೇಹಾ ರಾಮಕೃಷ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಲಕ್ಷ್ಮೀ ಬಾರಮ್ಮಾ ಧಾರಾವಾಹಿ ಮೂಲಕ ಕನ್ನಡಿಗರ ಮನೆಯ ಗೊಂಬೆಯಾಗಿರುವ ನಟಿ ನೇಹಾ ರಾಮಕೃಷ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೂರು ವಾರಗಳ ಹಿಂದೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. 

ಬಾಲ್ಯದ ಗೆಳೆಯ ಚಂದನ್ ಗೌಡರನ್ನು ಮದುವೆಯಾಗಿರುವ ನೇಹಾ ಸದ್ಯ ಶೂಟಿಂಗ್‌ನಿಂದ ಬಿಡುವು ತೆಗೆದುಕೊಂಡಿದ್ದಾರೆ. ನೇಹಾ ಪತಿ ಚಂದನ್‌ ಗೌಡ ಕಲರ್ಸ್ ಕನ್ನಡ ವಾಹಿನಿಯ ಅಂತರಪಟ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Tap to resize

ತೋಟವೊಂದರಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ನೇಹಾ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇತ್ತ ಚಂದನ್ ಗೌಡ ತಮ್ಮ ಖಾತೆಯಲ್ಲಿ ಪತ್ನಿ ಜೊತೆ ಅದೇ ಸ್ಥಳದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

ನೇಹಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ನಿರಂತರವಾಗಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಸರಳವಾದ ಸೀರೆ ಧರಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋದಲ್ಲಿ ಅಮ್ಮನ ಕಳೆ ಕಾಣ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಈ ಸುಂದರ ಮತ್ತು ಆರಾಮದಾಯಕ ಸೀರೆ ಕಳುಹಿಸಿದ್ದಕ್ಕೆ ಧನ್ಯವಾದಗಳು. ಇದು ನನ್ನ ನೆಚ್ಚಿನ ಬಣ್ಣ. ಹಾಗಾಗಿ ಸೀರೆ ತುಂಬಾ ಇಷ್ಟವಾಯ್ತು. ಸೀರೆ ಡಿಸೈನ್ ತುಂಬಾ ವಿಶೇಷ ಮತ್ತು ವಿಭಿನ್ನವಾಗಿದೆ ಎಂದು ನೇಹಾ ಬರೆದುಕೊಂಡಿದ್ದಾರೆ.

ಕನ್ನಡ ಜೊತೆಯಲ್ಲಿ ತಮಿಳು, ತೆಲುಗು ಸೀರಿಯಲ್ ಗಳಲ್ಲಿಯೂ ನೇಹಾ ರಾಮಕೃಷ್ಣ ನಟಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಲಚ್ಚಿ ಧಾರಾವಾಹಿಯಲ್ಲಿ ನೇಹಾ ನಟಿಸಿದ್ದರು. ವಿಶ್ವ ಯೋಗ ದಿನದಂದು ವಿಶೇಷ ಆಸನಗಳನ್ನು ಮಾಡಿದ್ದ ನೇಹಾ ಫೋಟೋಗಳು ವೈರಲ್ ಆಗಿದ್ದವು.

ಕಲರ್ಸ್ ಕನ್ನಡದ ರಾಜಾ ರಾಣಿ (Raja Rani reality show)ರಿಯಾಲಿಟಿ ಶೋ ಮೊದಲ ಸೀಸನ್ ನಲ್ಲಿ ಪತಿ ಚಂದನ್ ಜೊತೆ ನೇಹಾ ಭಾಗವಹಿಸಿದ್ದರು. ಇಡೀ ಸೀಸನ್ ಅಭಿಮಾನಿಗಳನ್ನು ರಂಜಿಸಿದ್ದ ನೇಹಾ-ಚಂದನ್ ಶೋನ ವಿನ್ನರ್ ಆಗಿದ್ದರು.

ರಾಜಾ ರಾಣಿ ಶೋನಲ್ಲಿ ಮಗುವನ್ನು ದತ್ತು ಪಡೆದುಕೊಳ್ಳುವ ಬಗ್ಗೆ ನೇಹಾ ಮಾತನಾಡಿದ್ದರು. ಹಾಗೆಯೇ ಕೆಲ ವಾರಗಳ ಹಿಂದೆ ಹೆಣ್ಣು ಮಗುವಿನ ಜೊತೆಗಿನ ಫೋಟೋ ವೈರಲ್ ಆಗಿದ್ದವು. 

ಫೋಟೋ ನೋಡಿದ ಅಭಿಮಾನಿಗಳು ಮಗುವನ್ನು ದತ್ತು ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಆನಂತರ ಮೇ ಕೊನೆ ವಾರದಲ್ಲಿ ಅಂದ್ರೆ  ಮೂರು ತಿಂಗಳ ಗರ್ಭಿಣಿಯಾದ ನಂತರ ಗುಡ್‌ ನ್ಯೂಸ್‌ನ್ನು ಶೇರ್ ಮಾಡಿಕೊಂಡಿದ್ದರು. 

ನೇಹಾ ಬೇಬಿ ಬಂಪ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆರೋಗ್ಯವಾಗಿರುವಂತೆ ವಿಶ್ ಮಾಡಿದ್ದಾರೆ. ಈ ಸಮಯದಲ್ಲಿ ವಿಶ್ರಾಂತಿಯ ಅಗತ್ಯವಿದೆ ಎಂದು ಫ್ಯಾನ್ಸ್ ಸಲಹೆ ನೀಡಿದ್ದಾರೆ.

Latest Videos

click me!