ಬಿಗ್‌ಬಾಸ್ OTT ಶುರುವಾದ 2ನೇ ದಿನಕ್ಕೆ ವಿನ್ನರ್ ಹೆಸರು ಹೊರ ಬಂತು!

First Published | Jun 24, 2024, 4:51 PM IST

ಬಿಗ್‌ಬಾಸ್ OTT ಸೀಸನ್ ಆರಂಭವಾಗಿ ಒಂದು ವಾರ ಸಹ ಪೂರ್ಣವಾಗಿಲ್ಲ. ಅದಾಗಲೇ ಸೀಸನ್-3ರ ವಿನ್ನರ್ ಇವರೇ ಎಂದು ಹರಿದಾಡುತ್ತಿದೆ.

ಬಿಗ್‌ಬಾಸ್ ಓಟಿಟಿಯ ಮೂರನೇ ಸೀಸನ್ ಅದ್ದೂರಿಯಾಗಿ ಆರಂಭವಾಗಿದ್ದು, 16 ಸ್ಪರ್ಧಿಗಳು ಈ ಬಾರಿ ದೊಡ್ಡಮನೆಯನ್ನು ಸೇರಿದ್ದಾರೆ. ಶೋ ಆರಂಭವಾದ ಎರಡನೇ ದಿನಕ್ಕೆ ಶೋ ಬಗ್ಗೆ ಅಚ್ಚರಿಯ ಮಾಹಿತಿ ಹೊರ ಬಂದಿದೆ.

ಬಾಲಿವುಡ್ ಎವರ್‌ಗ್ರೀನ್ ಸ್ಟಾರ್ ಅನಿಲ್ ಕಪೂರ್ ಬಿಗ್‌ಬಾಸ್ ಓಟಿಟಿ  3ರ ನಿರೂಪಣೆಯನ್ನು ಮಾಡುತ್ತಿದ್ದಾರೆ. ಅನಿಲ್ ಕಪೂರ್ ಎಲ್ಲಾ ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ವೀಕ್ಷಕರಿಗೆ ಪರಿಚಯಿಸಿ ಬಿಗ್ ಮನೆಯೊಳಗೆ ಕಳುಹಿಸಿದ್ದಾರೆ.

Tap to resize

ಈ ಮೊದಲು ಬಾಲಿವುಡ್ ಭಾಯಿಜಾನ್‌ ಸಲ್ಮಾನ್ ಖಾನ್ ಓಟಿಟಿ ಸೀಸನ್ ನಿರೂಪಣೆ ಮಾಡಿದ್ದರು. ಆದ್ರೀಗ ಈ ಬಾರಿ ಅನಿಲ್ ಕಪೂರ್ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ತಮ್ಮ ಹೆಗಲ್ಮೇಲೆ ತೆಗೆದುಕೊಂಡಿದ್ದಾರೆ.

ಬಿಗ್‌ಬಾಸ್ ಓಟಿಟಿ ಮೂರನೇ ಸೀಸನ್ ಆರಂಭವಾಗುತ್ತಿದ್ದಂತೆ ಶೋ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರ ಬಂದಿದೆ. ಶೋ ಆರಂಭವಾದ ಎರಡನೇ ದಿನಕ್ಕೆ ವಿನ್ನರ್ ಯಾರು ಎಂಬ ಮಾಹಿತಿ ಹೊರ ಬಂದಿದೆ. ಯಾರು ಆ ವಿನ್ನರ್ ಗೊತ್ತಾ? 

ರಿಯಾಲಿಟಿ ಶೋ ಆರಂಭವಾದ ಎರಡನೇ ದಿನಕ್ಕೆ ಅಭಿಮಾನಿಗಳು ವಿನ್ನರ್ ಯಾರಾಗ್ತಾರೆ ಎಂಬುದನ್ನು ಅಂದಾಜಿಸಿದ್ದಾರೆ. ಹಾಗಾಗಿ ತಮ್ಮ ನೆಚ್ಚಿನ ಸ್ಪರ್ಧಿಯ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಇವರೇ ಗೆಲ್ತಾರೆ ಎಂದು ಹೇಳುತ್ತಿದ್ದಾರೆ.

16 ಸ್ಪರ್ಧಿಗಳ ಪೈಕಿ Rapper ನಾವೇದ್ ಶೇಖ್ ಸಹ ಒಬ್ಬರಾಗಿದ್ದಾರೆ. ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡುತ್ತಲೇ ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗುವಲ್ಲಿ ನಾವೇದ್ ಶೇಖರ್ ಯಶಸ್ವಿಯಾಗಿದ್ದಾರೆ. ಮೊದಲ ಎರಡು ದಿನದಲ್ಲಿಯೇ ವೀಕ್ಷಕರನ್ನು ಇಂಪ್ರೆಸ್ ಮಾಡುವಲ್ಲಿ ನಾವೇದ್ ಶೇಕ್ ಸಕ್ಸಸ್ ಆಗಿದ್ದಾರೆ. ಹಾಗಾಗಿ ಅಭಿಮಾನಿಗಳು ನಾವೇದ್ ಈ ಬಾರಿಯ ವಿನ್ನರ್ ಎಂದು ಹೇಳುತ್ತಿದ್ದಾರೆ.

ದಿಲ್ಲಿ ವಡಾಪಾವ್ ಗರ್ಲ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್, ಇಬ್ಬರ ಹೆಂಡ್ತಿಯರ ಜೊತೆ ಬಂದಿರೋ ಅರ್ಮಾನ್ ಮಲೀಕ್, ಸನಾ ಮಕ್ಬುಲ್ ಖಾನ್, ರಣ್‌ವೀರ್ ಶೋರೆ, ನೀರಜ್ ಗೋಯೆತ್, ಶಿವಾನಿ ಕುಮಾರಿ, ವಿಶಾಲ್ ಪಾಂಡೆ ಸೇರಿದಂತೆ ಒಟ್ಟು 16 ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿದ್ದಾರೆ.

Latest Videos

click me!