ಸೀರಿಯಲ್ ಬಿಟ್ಟಿದ್ದೇ ತಡ ಸಖತ್ ಸ್ಟೈಲಿಶ್ ಆಗಿದ್ದಾರೆ ಕೆಂಡ ಸಂಪಿಗೆಯ ಸುಮನಾ

Published : Jun 25, 2024, 05:48 PM IST

ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ಈ ಹಿಂದೆ ಸುಮನಾ ಆಗಿ ನಟಿಸುತ್ತಿದ್ದ ನಟಿ ಕಾವ್ಯ ಶೈವ ಫೋಟೋ ಶೂಟ್ ಮಾಡಿಸುವ ಮೂಲಕ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.   

PREV
16
ಸೀರಿಯಲ್ ಬಿಟ್ಟಿದ್ದೇ ತಡ ಸಖತ್ ಸ್ಟೈಲಿಶ್ ಆಗಿದ್ದಾರೆ ಕೆಂಡ ಸಂಪಿಗೆಯ ಸುಮನಾ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರಕ್ಕೆ ಈ ಹಿಂದೆ ಜೀವ ತುಂಬಿ ನಟಿಸಿದ್ದ ನಟಿ ಕಾವ್ಯ ಶೈವ (Kavya Shaiva). ಜನ ಇವರ ಪಾತ್ರವನ್ನು ಮೆಚ್ಚಿಕೊಂಡಿದ್ದರು, ಆದರೆ ನಟಿಯ ದಿಢೀರ್ ಬದಲಾವಣೆಯಿಂದ ವೀಕ್ಷಕರು ನೊಂದಿದ್ದರು. 
 

26

ಗ್ರಾಮವೊಂದರ ಹುಡುಗಿ, ರಾಜಕೀಯದಲ್ಲಿ ಮಿಂಚಲು ರೆಡಿಯಾಗಲಿರುವ ವ್ಯಕ್ತಿಯನ್ನು ಮದುವೆಯಾಗಿ, ಅವರ ಮನೆಯಲ್ಲಿ ಅನುಭವಿಸುವ ನೋವು, ತಮ್ಮನ ಸಾವಿನ ಪ್ರತಿಕಾರ ಇವೆಲ್ಲವನ್ನೂ ಕಾವ್ಯ ಅದ್ಭುತವಾಗಿ ನಿರ್ವಹಿಸಿದ್ದರು. 
 

36

ಕೆಂಡಸಂಪಿಗೆ (Kendasampige) ಸೀರಿಯಲ್ ಗೆ ಈಗಾಗಲೇ ಹೊಸ ನಟಿಯ ಆಗಮನವಾಗಿ ತಿಂಗಳುಗಳೇ ಕಳೆದಿದೆ. ಆದರೆ ಜನರು ಇಂದಿಗೂ ಹಳೆಯ ಸುಮನಾಳನ್ನು ಮಿಸ್ ಮಾಡಿಕೊಳ್ತಿದ್ದಾರೆ. ಸೀರಿಯಲ್ ಇಂಟ್ರೆಸ್ಟಿಂಗ್ ನಲ್ಲಿರೋವಾಗ್ಲೇ ಅರ್ಧದಲ್ಲಿ ಬಿಡೋದಕ್ಕೆ ಕಾರಣ ಏನು ಅನ್ನೋದು ಸರಿಯಾಗಿ ತಿಳಿದಿಲ್ಲವಾದ್ರೂ, ನಿರ್ಮಾಪಕರೊಂದಿಗಿನ ವೈಮನಸ್ಸಿನಿಂದ ನಟಿ ಸೀರಿಯಲ್ ಬಿಟ್ಟಿದ್ದಾರೆ ಎನ್ನಲಾಗಿತ್ತು. 
 

46

ಅದೇನೇ ಇರಲಿ ಕಾವ್ಯ ಶೈವ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತ ಇರೋದಂತೂ ನಿಜಾ. ಅಲ್ಲದೇ ಜನ ಮೇಡಂ ನೀವು ಹೋದ ಮೇಲೆ ಕೆಂಡಸಂಪಿಗೆ ನೋಡೋಕೆ ಮನಸ್ಸು ಬರುತ್ತಿಲ್ಲ. ಮತ್ತೆ ಕೆಂಡಸಂಪಿಗೆಗೆ ಬನ್ನಿ ಎಂದೆಲ್ಲಾ ಜನ ಕಾಮೆಂಟ್ ಮಾಡ್ತಿದ್ದಾರೆ. 
 

56

ಇನ್ನು ಸೀರಿಯಲ್ ಬಿಟ್ಟಮೇಲೆ ನಟಿ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿದ್ದು, ಒಂದಲ್ಲ ಒಂದು ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಸಖತ್ ಸ್ಟೈಲಿಶ್ ಆಗಿರೋ ಫೋಟೋ ಶೂಟ್ ಮಾಡಿಸಿದ್ದು, ಕಾವ್ಯ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

66

ಗ್ರೇ ಬಣ್ಣದ ಲಂಗ ಮತ್ತು ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದು,  ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ Let’s look at the moon together and call it a date ? ಎಂದು ಕ್ಯಾಪ್ಶನ್ ಬೇರೆ ಹಾಕಿದ್ದಾರೆ. ನಟಿಯ ಫೋಟೋ ನೋಡಿ ಅಭಿಮಾನಿಗಳು ಬ್ಯೂಟಿಫುಲ್, ಚೆಲುವೆ, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories