ಬಿಗ್‌ಬಾಸ್‌ನಲ್ಲಿ ಕೈಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು! ಜಗಳದ ಕಿಚ್ಚು ಹೊತ್ತಿಕೊಳ್ಳಲು ಕ್ಯಾಪ್ಟನ್ ಫೇವರಿಸಂ ಕಾರಣನಾ?

Published : Oct 17, 2024, 01:32 AM ISTUpdated : Oct 17, 2024, 11:18 AM IST

ಬಿಗ್‌ಬಾಸ್‌ ಕನ್ನಡ 11ರ ಮೂರನೇ ವಾರದಲ್ಲಿ ನಾಮಿನೇಶನ್‌ ವಿಚಾರದಲ್ಲಿ ಜಗದೀಶ್, ಮಾನಸ, ಉಗ್ರಂ ಮಂಜು ಮತ್ತು ರಂಜಿತ್ ನಡುವೆ ದೊಡ್ಡ ಜಗಳ ನಡೆದಿದೆ. ಈ ಜಗಳದಲ್ಲಿ ವೈಯಕ್ತಿಕ ದಾಳಿಗಳು ಮತ್ತು ಅವಾಚ್ಯ ಪದಗಳ ಬಳಕೆಯೂ ಆಗಿದೆ.

PREV
113
ಬಿಗ್‌ಬಾಸ್‌ನಲ್ಲಿ ಕೈಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು! ಜಗಳದ ಕಿಚ್ಚು ಹೊತ್ತಿಕೊಳ್ಳಲು ಕ್ಯಾಪ್ಟನ್ ಫೇವರಿಸಂ ಕಾರಣನಾ?

ಬಿಗ್‌ಬಾಸ್‌ ಕನ್ನಡ 11 ನೇ ಸೀಸನ್‌ ನ ಮೂರನೇ ವಾರದಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ನೂಕಾಟ ತಳ್ಳಾಟ ನಡೆದಿದೆ. ನಾಮಿನೇಶನ್‌ ವಿಚಾರದಲ್ಲಿ ನಿಮಗೆ ಬೇಕಾದವರನ್ನು ಸೇವ್ ಮಾಡ್ತಿದ್ದೀರಾ ಎಂದು ಜಗದೀಶ್ ಕ್ಯಾಪ್ಟನ್ ಶಿಶಿರ್ ಅವರನ್ನು ಪ್ರಶ್ನೆ ಮಾಡಿದಾಗ ಮಾನಸ ಮಧ್ಯೆ ಪ್ರವೇಶ ಮಾಡಿದ್ದು,  ಇದು ಜಗದೀಶ್​ ಹಾಗೂ ಮಾನಸ ನಡುವೆ ದೊಡ್ಡ ಜಗಳಕ್ಕೆ ಕಾರಣವಾಯ್ತು

213

ಪ್ರತಿಯೊಬ್ಬರ ನಾಮಿನೇಷನ್ ಬಗ್ಗೆ ತಿಳಿಸುವಾಗ  ಜಗದೀಶ್   ಮೂಗು ತೂರಿಸುತ್ತಿದ್ದಾರೆಂದು ಮಾನಸ ಖ್ಯಾತೆ ತೆಗೆದರು. ನೀನ್ ಏನಯ್ಯಾ ಎಲ್ಲರ ವಿಚಾರಕ್ಕೂ ತಲೆ ಹಾಕ್ತೀಯಾ, ಬೇರೆಯವರ ವಿಚಾರದಲ್ಲೂ ಮಧ್ಯೆ ಪ್ರವೇಶಿಸೋದು ಯಾಕೆ ಎಂದರು. ಇದಕ್ಕೆ ಸಿಟ್ಟಾದ ಜಗದೀಶ್​ ಕೇಳೋಕೆ ನೀನ್ ಯಾರು ಎಂದಿದ್ದಾರೆ. ನೀನ್ಯಾರು ಮಾತನಾಡೋಕೆ ಬಾಯಿಮುಚ್ಚು ಎಂದು ಇಬ್ಬರೂ ವಾಗ್ವಾದ ನಡೆಸಿದರು.

313

ಕೊನೆಗೆ  ಬಿಗ್‌ಬಾಸ್‌ ಎಕಡ ಅಂತ ಪದ ಬಳಕೆ ಮಾಡಿದ್ದು, ಜಗಳ ವಿಕೋಪಕ್ಕೆ ಹೋಯ್ತು. ಈ ಒಂದು ಪದದಿಂದ ಬಿಗ್ ಬಾಸ್ ಮನೆಯಲ್ಲಿ ಮಾತಿನ ಮಾರಾಮಾರಿ ನಡೆದಿದೆ. ಎಕ್ಕಡ ಪದ ಬಳಕೆ ಮಾಡಿದ್ದರ ಬಗ್ಗೆ ಜಗದೀಶ್ ಬಂದು ಕ್ಯಾಮಾರ ಮುಂದೆ ಹೇಳುತ್ತಿರುವಾಗ,  ನಾಮಿನೇಟ್‌ ಆದವರೇ ಸುಮ್ಮನಿದ್ದಾರೆ. ನೀನ್ಯಾಕೆ ಮದ್ಯದಲ್ಲಿ ತೂರಿಸಿಕೊಂಡು ಬಂದೆ. ನಿಮ್ಮ ಮನೆಗೆ ಬಂದು ನಿಂತಿದ್ದೀನಾ? ಎಂದು ಮಾನಸ ಮತ್ತು ತ್ರಿವಿಕ್ರಮ್ ಪ್ರಶ್ನಿಸಿದ್ದಾರೆ.  
 

413

ಇದಾಗಿ ಉಗ್ರಂ ಮಂಜು ಹೆಣ್ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಹೇಳಿದಾಗ , ಜಗದೀಶ್ ಏ ಬಿಡಪ್ಪಾ ಎಲ್ಲಾ ಗೊತ್ತಿದೆ. ಹೋಗಲೇ ಬಾರಲೇ ಎಂದು ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ಎದೆಯೊಡ್ಡಿ ಮಂಜು ಮುಂದೆ ನಿಂತಾಗ ಎಲ್ಲರೂ ಒಂದಾಗಿ ಜಗದೀಶ್ ಮೇಲೆ ರೇಗಾಡಿದ್ದು, ಉಗ್ರಂ ಮಂಜು ಅವರು ಮೊದಲು ಜಗದೀಶ್ ಅವರನ್ನು ದೂಡಿದ್ದಾರೆ. ಈ ವೇಳೆ ಜಗಳ ಜೋರಾಗಿ ಜಗದೀಶ್ ಏ ಬಾರಲೇ ಬಾರಲೇ, ನೀನು ಫಿಲಂ ನಲ್ಲಿ ವಿಲನ್ ನನ್ನ ಜೀವನದಲ್ಲಿ ಅಲ್ಲ ಎಂದು ಉಗ್ರಂ ಮಂಜುಗೆ ಹೇಳಿದ್ದಾರೆ.
 

513

ಈ ವೇಳೆ ರಂಜಿತ್  ತನ್ನ ಎಡಗೈನಿಂದ ಜಗದೀಶ್‌ರನ್ನು ದೂಡಿದ್ದಾರೆ.  ಇದಾಗಿ  ಅವಾಚ್ಯ ಶಬ್ಧಗಳಿಂದ ಬೈಯ್ದಾಡಿಕೊಂಡಿದ್ದಾರೆ. ಬಳಿಕ ಉಗ್ರಂ ಮಂಜು ಬಳಿ ಬಂದ ಜಗದೀಶ್ ತನ್ನ ಮುಖದಿಂದ ಮಂಜು ಮುಖಕ್ಕೆ ಡಿಚ್ಚಿ ಹೊಡೆದಿದ್ದಾರೆ. ಇದಕ್ಕೆ ಕೋಪಗೊಂಡ ಮಂಜು ಬಾರೋ ಆಚೆ ಹೋದ ಮೇಲೆ ಸಿಗೋ ನೀನು ಕರ್ದಿದ್ದ ಜಾಗಕ್ಕೆ ನಾನು ಬರ್ತಿನಿ. ತೊಡೆ ತಟ್ಟಿ ಹೇಳ್ತಿನಿ ಮೀಸೆ ತಿರುಗಿಸಿ ಹೇಳ್ತಿನಿ ಎಂದು ಜಗದೀಶ್‌ ಗೆ ತೊಡೆ ತಟ್ಟಿ ಚಾಲೆಂಜ್ ಮಾಡಿದ್ದಾರೆ. ಲೇ ಮಂಜ ಇದೆಲ್ಲ ವರ್ಕ್ಔಟ್‌ ಆಗಲ್ಲ ಎಂದು ಜಗದೀಶ್ ಹೇಳುತ್ತಿದ್ದಂತೆಯೇ ಹಿಂದಿನಿಂದ ಬಂದ ರಂಜಿತ್ ತನ್ನ ಇಡೀ ದೇಹದಿಂದ ಜಗದೀಶ್ ಅವರನ್ನು ಬೇಕಂತಲೇ ತಳ್ಳಿದ್ದಾರೆ.

613

ಇದಾಗಿ ತ್ರಿವಿಕ್ರಮ್ ಬಳಿ ಮುಟ್ಟಲೇ ನನ್ನ ಮುಟ್ಟಲೇ ಎಂದು ಜಗದೀಶ್ ಹೇಳಿದ್ದು, ಆಯ್ತು ಮುಟ್ಟುತ್ತೀವಿ ಅದಕ್ಕೂ ಟೈಂ ಬರುತ್ತೆ. ಮುಟ್ಟುತ್ತೀವಿ ಇಲ್ಲಲ್ಲ. ಎಲ್ಲೂ ಮುಟ್ಟುತ್ತೀವಿ ಎಂದು ವಿಕ್ರಮ್ ಹೇಳಿದ್ದಾರೆ. ಮಂಜು ಮತ್ತು ವಿಕ್ರಮ್ ಸೇರಿ ಚಪ್ಪಲಿಗೆ ಬೆಲೆ ಇದೆ ನಿಂಗೆ ಬೆಲೆ ಇಲ್ಲ. ಹೆಣ್ಣು ಮಕ್ಕಳ ಬಗ್ಗೆ ಮಾತನಾಡುತ್ತಿದ್ದೀಯಲ್ಲಿ ಥೂ... ಎಂದೆಲ್ಲ ತುಂಬಾ ನೀಚವಾಗಿ ಬೈದಾಡಿಕೊಂಡಿದ್ದಾರೆ.
 

713

ಪರಿಸ್ಥಿತಿಯ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಬಿಗ್ಬಾಸ್‌ ಏರುಧ್ವನಿಯಲ್ಲಿ ಸೋಫಾದಲ್ಲಿ ಕುಳಿತುಕೊಳ್ಳುವಂತೆ ಎಚ್ಚರಿಕೆ ನೀಡಿದರು. ಆದರೆ ಜಗಳದ ಮಧ್ಯೆ ಅದನ್ನು ಸದಸ್ಯರು ಕೇಳಿಸಿಕೊಳ್ಳಲೇ ಇಲ್ಲ. ಕೊನೆಗೆ ಬಿಗ್‌ಬಾಸ್‌ ಸಾಕು...... ಎಂದು ಬೈದಾಗ ಎಲ್ಲರೂ ಸೋಫಾದ ಮೇಲೆ ಕುಳಿತುಕೊಂಡರು.  ಬಿಗ್‌ಬಾಸ್ ನ ಮುಂದಿನ ಆದೇಶದ ವರೆಗೂ ತುಟಿ ಪಿಟಿಕ್‌ ಅನ್ನುವಂತಿಲ್ಲ  ಅಲ್ಲಿವರೆಗೂ ಸೋಫಾದಲ್ಲಿ ಕುಳಿತಿರಿ ಎಂದ ಬಿಗ್‌ಬಾಸ್ ಬಳಿಕ ಮನೆ ಸದಸ್ಯರಿಗೆ  ಎಚ್ಚರಿಕೆ ನೀಡಿ, ಪ್ರತಿಯೊಬ್ಬರ ಅಭಿಪ್ರಾಯಕ್ಕೆ ಈ ಮನೆಯಲ್ಲಿ ಜಾಗವಿದೆ. ನೀವು ತಿಳಿದವರಾಗಿ ಎಲ್ಲಿ ಏನನ್ನು ಮಾಡಬೇಕೆಂದು ಯೋಚಿಸಬೇಕು. ದೈಹಿಕವಾಗಿ ನಿಮ್ಮ ನಿಮ್ಮ ಚೌಕಟ್ಟಿನ ಅರಿವು ನಿಮಗಿರಲಿ  ವಿಶ್ರಮಿಸುವಂತೆ ಹೇಳಿದರು. 

813

ಇದಾದ ನಂತರ ಮಾನಸ-ಜಗದೀಶ್ ಜಗಳವಾಡುತ್ತಿರುವಾಗ ನೀವ್ಯಾಕೆ ಹೋದ್ರಿ ಅವಶ್ಯಕತೆ ಇರ್ಲಿಲ್ಲ ಎಂದು ಚೈತ್ರಾ ಕುಂದಾಪುರ ಜಿಮ್ ಏರಿಯಾದಲ್ಲಿ ತ್ರಿವಿಕ್ರಮ್‌ ಗೆ ಕೇಳುತ್ತಾರೆ. ಇದಕ್ಕೆ ತ್ರಿವಿಕ್ರಮ್  ಅವಶ್ಯಕತೆ ಇರ್ಲಿಲ್ಲ ನಾನು ಮಾನಸಾಳನ್ನು ತಡೆಯಲು ಹೋಗಿದ್ದು, ಬಾ ಯಾಕೆ ಮಾತಾಡ್ತೀಯಾ ಅಂತ. ಅದಕ್ಕೆ ಚೈತ್ರಾ ಬೇಡ ಬಿಡಿ, ನಾನು ಹೇಳ್ಲಾ ಯಾರು ವಿಲನ್ ಅವರೇ ವಿಲನ್ ಆಗ್ತಾರೆ ನೀವ್ಯಾಕೆ ತಡೆಯೋಕೆ ಹೋಗ್ತೀರಾ? ಆ ಮನುಷ್ಯ ನಿಜವಾಗಲೂ ಹೊಡೆದಾಡುವ  ಮೈಡ್ ಸೆಟ್‌ ನಲ್ಲಿ ಇರುವವರಲ್ಲ.  ನಿಮ್ಮ ಕೈನಲ್ಲಿ ಹೊಡೆಸಬೇಕು ಅನ್ನೋದೆ ಅವರ ಪ್ಲಾನ್ ಇರುವಾಗ  ಯಾಕೆ ಅಂದರು. ಈ ವೇಳೆ ಅಲ್ಲೇ ಇದ್ದ ರಂಜಿತ್ ಹಾಗೇಂತ ನಾವು ಸುಮ್ಮನೆ ನಿಂತುಕೊಳ್ಳೋಕೆ ಆಗಲ್ಲ. ಎಂದರು ಅದಕ್ಕೆ ಚೈತ್ರಾ ಹೌದು ಸುಮ್ಮನೆ ನಿಂತು ಕೊಳ್ಳಬಾರದೆಂದು ನನಗೂ ಅರ್ಥ ಆಗಿದೆ ಎಂದರು. 

913

ಇದಾದ ಬಳಿಕ ಕ್ಯಾಮಾರಾ ಮುಂದೆ ಜಗದೀಶ್ ನನ್ನ ಬಾಯಲ್ಲಿ ಅಸಂವಿಧಾನಿಕ ಪದಗಳು ಬಂದಿಲ್ಲ. ಬಾಯಿಮುಚ್ಚು ಅಂದಾಗ ನಾನು ಕೂಡ ಬಾಯಿಮುಚ್ಚು ಅಂದಿದ್ದೇನೆ. ಆಕೆಯ ಬಾಯಿಯಲ್ಲಿ ಬಂದಿದ್ದು, ನೀನು ಬಗ್‌ಬಾಸ್ ಎಕ್ಕಡ ತಿಂದು ಅವರಿಗೆ ಮೇಸ ಮಾಡ್ತಿ ಅಂತ. ಆಮೇಲೆ ಎಕ್ಕಡ ತಿನ್ನು ಅನ್ನುವ ಪದ ಬಳಸಲು ಹಕ್ಕು ಯಾರಿಗೆ ಕೊಟ್ರು ಮಾನಸ ಅನ್ನೋ ಆಕೆಗೆ. ಬಿಗ್‌ಬಾಸ್‌ ಎಕ್ಕಡ ತಿಂದು ಅವರಿಗೆ ದ್ರೋಹ ಮಾಡುವ ಹೆಂಗಸಿಗೆ ಯಾವ ಮರ್ಯಾದೆ ಕೊಡಬೇಕು ನಾವು. ಮಂಜ ನನ್ನ ಮೇಲೆ ಇಮೀಡಿಯಟ್‌ ಅಟ್ಯಾಕ್ ಮಾಡಿದ್ದು, ನನ್ನ ಮೇಲೆ ಚಪ್ಪಲಿ ಬಿಸಾಕಿದ್ದಾನೆ. ಇವತ್ತು ಕೂಡ ನನ್ನ ಮೇಲೆ ಚಪ್ಪಲಿ ಬಿಸಾಕಿದ. ರೆಕಾರ್ಡ್ ತೆಗೆದು ನೋಡಿ ಗೊತ್ತಾಗುತ್ತೆ. 
 

1013

ಮೂರನೇ ಟೈಂ ಅಟ್ಯಾಕ್ ಮಾಡಿದವನು ವಿಕ್ರಂ. ನಾನು ಜೋಬಲ್ಲಿ ಕೈ ಇಟ್ಟದ್ದೆ ನಾನಂತೂ ತೆಗಿಲಿಲ್ಲ. ನನಗೆ ನಿಯಮಗಳ ಬಗ್ಗೆ ಜ್ಞಾನ ಇದೆ.  ನಾನು ವಿಕ್ರಂ ಮತ್ತು ಮಂಜು ಹತ್ರ ಮಾತನಾಡುತ್ತಿರಬೇಕಾದರೆ ಹಿಂದೆಯಿಂದ ಬಂದು ಮ್ಯಾನ್ ಹ್ಯಾಂಡಲಿಂಗ್ ಮಾಡಿದ್ದು ರಂಜಿತ್. ಒಂದಷ್ಟು ಜನ ಈ ಜಗಳ ನೋಡಿ ಎಂಕರೇಜ್ ಮಾಡ್ತಾರೆ. ಒಂದಷ್ಟು ಜನ ಮೌನವಾಗಿರ್ತಾರೆ. ಇನ್ನೊಂದಷ್ಟು ಜನ ಮೈಮೇಲೆ ಬೀಳ್ತಾರೆ.  ಮಾನಸ ನೀನು ಬಾಯಿ ಮುಚ್ಚಲೇ ಅಂತೆಲ್ಲ ಹೇಳಿದ್ದಾಳೆ. ಓರ್ವ ಹೆಂಗಸಿಕೆ ಮಾತ್ರನಾ ಮರ್ಯಾದೆ ಇರೋದು ?  ಗಂಡಸಿಗೆ  ಇಲ್ವಾ ನಾವೇನು ಬಿಟ್ಟಿ ಬಿದ್ದೀದ್ದೀವಾ? ಮನೆಯಲ್ಲಿ ಗಂಡನ ಜೊತೆಗೆ ಮಾತನಾಡಲಿ ನನಗೇನು ಆಗಬೇಕು. ಮನೆಯಲ್ಲಿ ಮಾತನಾಡಿದಾಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದರೆ, 20-30 ಕೋಟಿ ಜನ ನೋಡ್ತಾರೆ. ತುಪುಕ್ ಅಂತ ಜನ ಉಗಿಯಲ್ವಾ? ಇದೆಲ್ಲ ಆಗುತ್ತಿರುವುದು ಕ್ಯಾಪ್ಟನ್ ಅನ್ನೋ ಶಕುನಿಯಿಂದ ಎಂದಿದ್ದಾರೆ ಜಗದೀಶ್.

1113

 ಇದಾದ ನಂತರ ಮತ್ತೆ ನಾಯಿ ಬಾಲ ಡೊಂಕು ಎನ್ನುವಂತೆ ಮಂಜು, ಜಗದೀಶ್ ಅವರನ್ನು ಇದ್ದಲೆಲ್ಲಾ ಹೋಗಿ ಕೆಣಕಿದ್ದಾರೆ. ಮಾತು ಮಾತಲ್ಲೂ ಕೆಣಕಿದ್ದು, ಮತ್ತೆ ಜಗಳ ಶುರುವಾಗಿದೆ. ಕ್ಯಾಪ್ಟನ್ ಶಿಶಿರ್​ನನ್ನು ಜಗದೀಶ್ ಶಕುನಿ ಎಂದು ಬೈಯ್ದಿದ್ದಾರೆ. ಇವನು ಮನೆಯ ಕ್ಯಾಪ್ಟನ್​ ಅಲ್ಲ ಮನೆಹಾಳ ಎಂದೆಲ್ಲಾ ಬೈಯ್ದಿದ್ದಾರೆ. ಇನ್ನು ಮಂಜು  ಹೊರಗಡೆ  ಸೋಫಾದಲ್ಲಿದ್ದ ಜಗದೀಶ್ ರನ್ನು ಕೆಣಕಿ ಅಣಕಿಸಿದ್ದಾರೆ.  ಈ ವೇಳೆ ಮಂಜಾ, ಅತೀ ಮಾಡಿಕೊಳ್ಳಬೇಡ ನಾನು ಕೂಡ ನಿನ್ನ ತರ ಆಡಿದರೆ ಕಥೆ ಬೇರೆ ಆಗುತ್ತೆ. ನನ್ನ ತಾಳ್ಮೆ ಚೆಕ್‌ ಮಾಡಬೇಡ. ಇಲ್ಲಿವರೆಗೆ ತಡೆದುಕೊಂಡಿದ್ದೇನೆ ಎಂದರು. ಆದರು ಮಂಜು ತನ್ನ ಕೋತಿ ಆಟ ಮುಂದುವರೆಸಿದ್ದಾರೆ. ಅಲ್ಲಿಂದ ಮುಂದೆ ಮತ್ತೆ ಜಗಳ ಜೋರಾಗಿದೆ ಲಿಮಿಟ್‌ ಕ್ರಾಸ್ ಮಾಡಬೇಡ ನೀನು ವಿಲನ್ ಫಿಲಂ ನಲ್ಲಿ , ನಿನ್ನಂತವನನ್ನು ರಿಯಲ್ ಲೈಫ್ ನಲ್ಲಿ ಬೇಜಾನ್ ಜನ ನೋಡಿದ್ದೇನೆ ಎಂದು ಮತ್ತೆ ಜಗಳ ಆಡಿಕೊಂಡರು.

1213

ಇನ್ನು ಮನೆಯಲ್ಲಿ ಧನು ಮತ್ತು ಸುರೇಶ್ ಅವರು ಶಿಶಿರ್ ನಾಮಿನೇಶನ್ ನಲ್ಲಿ ಎಡವಿದ್ದಾರೆ ಎಂದು ಮಾತನಾಡಿಕೊಂಡರು.  ಉಳಿದವರೆಲ್ಲರೂ ಸರಿಯಾಗಿ ಆಡಿದ್ಧಾರಾ? ಮೋಕ್ಷಿತಾ ಏನು ಆಟ ಆಡಿದ್ದಾಳೆ. ಮಾನಸ ಏನು ಮಾಡಿದ್ದಾಳೆ. ಅವರು ಶಿಶಿರ್ ಕಣ್ಣಿಗೆ ಕಾಣಿಸಲಿಲ್ಲ ನಾವು ಕಾಣಿಸಿದೆವು. ರಂಜಿತ್ ಏನು ಆಟ ಆಡಿದ್ದಾನೆ. ರೀಸನ್ ಕೊಡುವಾಗ ಕರೆಕ್ಟ್ ಕೊಡಬೇಕು ಎಂದು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
 

1313

ಇಷ್ಟೆಲ್ಲ ಜಗಳದ ಮಧ್ಯೆ ಶಿಶರ್ ಕೊಟ್ಟಿರುವ ರೀಸನ್ ಯಾವುದೂ ಇಷ್ಟ ಆಗಿಲ್ಲ ಎಂದು ಅನುಷಾ, ಹಂಸಾ ಮತ್ತು ಚೈತ್ರಾ ಮಾತನಾಡಿಕೊಂಡಿದ್ದಾರೆ.  ಅವರು ಫೇವರಿಸಂ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಮಾತನಾಡಿದ್ರೆ ಒಪ್ಪಿಕೊಳ್ಳುವುದು ಕೂಡ ಇಲ್ಲ. ಜಗದೀಶ್ ಅವರು  ಒಂದೊಂದು ಸಲ ಕರೆಕ್ಟ್ ಆಗಿ ಮಾತನಾಡುತ್ತಾರೆ ಎಂದು ಅಭಿಪ್ರಾಯ ಹಂಚಿಕೊಂಡರು
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories