ಹೆಂಡ್ತಿ-ಮಗು ಜೊತೆ ಕಿರುತೆರೆಯ ಸ್ಟಾರ್ ನಟ ಚಂದು ಗೌಡ… ಮುದ್ದಾದ ಫೋಟೊ ವೈರಲ್

First Published | Aug 21, 2024, 3:02 PM IST

ಕನ್ನಡ ಕಿರುತೆರೆಯ ಸ್ಟಾರ್ ನಟ ಚಂದು ಗೌಡ ಅವರ ಮುದ್ದಾದ ಫ್ಯಾಮಿಲಿ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೆಂಡ್ತಿ ಮತ್ತು ಮಗಳ ಜೊತೆ ಚಂದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಚಂದು ಪಾತ್ರದ ಮೂಲಕ ಕನ್ನಡದ ಮನೆ ಮನೆ ತಲುಪಿದ ನಟ ಹಾಗೂ ಮಾಡೆಲ್ ಆಗಿರುವ ಚಂದು ಗೌಡ, ಈಗಂತೂ ಕನ್ನಡದ ಜೊತೆಗೆ ತೆಲುಗಿನಲ್ಲೂ ಬ್ಯುಸಿಯಾಗಿರುವ ನಟ. 
 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಂದು ಗೌಡ (Chandu Gowda) ಫ್ಯಾಮಿಲಿ ಫೊಟೋ ವೈರಲ್ ಆಗ್ತಿದೆ. ಮುದ್ದಿನ ಹೆಂಡ್ತಿ ಶಾಲಿನಿ ಮತ್ತು ಮಗಳ ಜೊತೆಗಿನ ಫೋಟೊ ಇದಾಗಿದ್ದು, ವರಮಹಾಲಕ್ಷ್ಮಿ ಹಬ್ಬದ ಸಂದರ್ಭ ತೆಗೆಸಿಕೊಂಡಂತಹ ಈ ಫೋಟೊ ಇಂಟರ್ನೆಟ್ ನಲ್ಲಿ ಸದ್ದು ಮಾಡ್ತಿದೆ. 
 

Tap to resize

ಚಂದು ಗೌಡ ಲಕ್ಷ್ಮೀ ಬಾರಮ್ಮ ಧಾರಾವಾಹಿ (serial) ಮೂಲಕ ನಟನೆಗೆ ಎಂಟ್ರಿ ಕೊಟ್ಟರು, ನಂತ್ರ ನಟನೆಯಿಂದ ಗ್ಯಾಪ್ ತೆಗೆದುಕೊಂಡಿದ್ದ ನಟ 2020ರಲ್ಲಿ ತಮ್ಮ ನಾಲ್ಕು ವರ್ಷಗಳ ಪ್ರೀತಿ ಶಾಲಿನಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2022 ರಲ್ಲಿ ಅವರಿಗೆ ಹೆಣ್ಣುಮಗು ಜನಿಸಿತ್ತು. 
 

ಚಂದು ಗೌಡ ಮದುವೆ ಫೋಟೊ, ಸೀಮಂತ ಫೋಟೊ ಜೊತೆಗೆ ಮಗುವಿನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಇದೀಗ ಫ್ಯಾಮಿಲಿ ಜೊತೆಯಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 

ಚಂದು ಗೌಡ ಮತ್ತು ಶಾಲಿನಿಯವರದ್ದು ಲವ್ ಮ್ಯಾರೇಜ್. ಚಂದು ಮಾಡೆಲ್ (model) ಆಗಿ ಗುರುತಿಸಿಕೊಂಡಿದ್ದವರು, ಶಾಲಿನಿ ಕೂಡ ಫ್ಯಾಷನ್ ಇಂಡಷ್ಟ್ರಿಯಲ್ಲಿ ಕೆಲಸ ಮಾಡಿದವರೇ. ಇವರಿಬ್ಬರ ಜೋಡಿ ನೋಡಿ ಅಭಿಮಾನಿಗಳು ಮುದ್ದಾ ಜೋಡಿ, ಯಾವಾಗ್ಲೂ ಜೊತೆಯಾಗಿಯೇ ಇರಿ ಎಂದು ಸಹ ಹಾರೈಸಿದ್ದಾರೆ. 
 

ಚಂದು ಗೌಡ ಕನ್ನಡದಲ್ಲಿ ಕಥೆಯೊಂದು ಶುರುವಾಗಿದೆ (katheyondu shuruvagide) ಧಾರಾವಾಹಿಯಲ್ಲೂ ಸಹ ನಟಿಸಿದ್ದರು. ಆದರೆ ಈ ಧಾರಾವಾಹಿ ಬೇಗನೆ ಅಂತ್ಯ ಕಂಡಿತ್ತು. ಸದ್ಯ ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಇವರು ನಟಿಸುತ್ತಿದ್ದಾರೆ. 
 

ಚಂದು ಸ್ಯಾಂಡಲ್ ವುಡ್ ನಲ್ಲೂ (sandalwood) ಸಹ ಮಿಂಚಿದ್ದಾರೆ. ಈಗಾಗಲೇ ದ್ವಿಪಾತ್ರ, ಫ್ಲಾಟ್ #9, ಜಾಕ್‌ಪಾಟ್‌, ಕುಷ್ಕ, ಕೃಷ್ಣ ಗಾರ್ಮೆಂಟ್ಸ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಕೆಲವು ಕಾರ್ಯಕ್ರಮಗಳನ್ನು ನಿರೂಪಣೆ ಕೂಡ ಮಾಡಿದ್ದಾರೆ. 
 

Latest Videos

click me!