ಬ್ರಹ್ಮಗಂಟು ನಾಯಕಿ ದೀಪಾ ಬೋಲ್ಡ್’ನೆಸ್ ಕಂಡು ವೀಕ್ಷಕರು ಶಾಕ್! ಏನಮ್ಮ ನಿನ್ನ ಅವತಾರ ಅಂತಿದ್ದಾರೆ ಜನ

First Published | Aug 21, 2024, 2:05 PM IST

ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿ ದೀಪಾ ಆಗಿ ನಟಿಸುತ್ತಿರುವ ನಟಿ ದಿಯಾ ಪಾಲಕ್ಕಲ್ ರಿಯಲ್ ಲೈಫಲ್ಲಿ ಸಖತ್ ಬೋಲ್ಡ್, ಸದ್ಯ ವೈರಲ್ ಆಗ್ತಿರೋ ಅವರ ವಿಡೀಯೋ ನೋಡಿ ಜನ ಶಾಖ್ ಆಗಿದ್ದಾರೆ. 
 

ಝೀಕನ್ನಡದಲ್ಲಿ ಇತ್ತೀಚೆಗೆ ಆರಂಭವಾದ ಬ್ರಹ್ಮಗಂಟು (Bramhagantu) ಧಾರಾವಾಹಿಯಲ್ಲಿ ನಾಯಕಿ ದೀಪಾ ಪಾತ್ರದ ಬಗ್ಗೆ ನಿಮಗೆ ಗೊತ್ತೇ ಇದೆ. ನೋಡಲು ಕಪ್ಪಾಗಿರುವ, ಕನ್ನಡಕ ಧರಿಸಿ, ಅಳುಮುಂಜಿ ಹಳ್ಳಿ ಗುಗ್ಗು ಆಗಿ, ಯಾವಾಗ್ಲೂ ಲಂಗ, ದಾವಣಿ ಧರಿಸಿ, ಎರಡು ಜಡೆ ಮಡಚಿ ಕಟ್ಟಿರುವ ಹುಡುಗಿ ದೀಪಾ. 
 

ಎಲ್ಲರಿಗೂ ಒಳಿತಾಗಬೇಕೆಂದು ತನ್ನೆಲ್ಲಾ ಕಷ್ಟಗಳನ್ನು ಮರೆಮಾಚಿ ನಗುನಗುತ್ತಾ ಬದುಕುವ ದೀಪಾ ಪಾತ್ರದಲ್ಲಿ ನಟಿಸುತ್ತಿರೋ ನಟಿ ದಿಯಾ ಪಾಲಕ್ಕಲ್ (Diya Palakkal). ತೆರೆಮೇಲೆ ದಿಯಾ ಎಷ್ಟು ಹಳ್ಳಿ ಹುಡುಗಿಯಾಗಿ ನಡೆಸುತ್ತಿದ್ದಾರೋ, ರಿಯಲ್ ಲೈಫಲ್ಲಿ ಇವರು ಸಖತ್ ಬೋಲ್ಡ್. 
 

Tap to resize

ಕಿನ್ನರಿ ಧಾರಾವಾಹಿಯಲ್ಲಿ ನಟಿ ಜ್ಯೋತಿ ರೈ ಮಗಳು ಹಾಗೂ ಬಾಲನಟಿಯಾಗಿ ನಟಿಸಿದ್ದ ದಿಯಾ ಪಾಲಕ್ಕಲ್, ಬಳಿಕ ಹಲವಾರು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ, ಜನಮನ ಗೆದ್ದಿದ್ದರು. ಇದೀಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 
 

ಕುಂದ ಕನ್ನಡದ ಸಿನಿಮಾವಾಗಿರುವ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿ ವೀಕ್ಷಕರ ಮೆಚ್ಚುಗೆಗೆ ಕೂಡಾ ಪಾತ್ರರಾಗಿದ್ದರು ದಿಯಾ. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. ಇದಲ್ಲದೇ ಜಾನಿ ಜಾನಿ ಯೆಸ್ ಪಪ್ಪ, ಜಾನ್ ಜಾನಿ ಜನಾರ್ಧನ್ ಸಿನಿಮಾಗಳಲ್ಲೂ ನಟಿಸಿದ್ದಾರೆ. 
 

ಇದೀಗ ದಿಯಾ ವಿಡಿಯೋ ವೈರಲ್ ಆಗುತ್ತಿದ್ದು, ರಿಯಲ್ ಲೈಫಲ್ಲಿ ನಟಿ ಇಷ್ಟೊಂದು ಬೋಲ್ಡ್ ಆಗಿದ್ದಾರಾ ಎಂದು ಜನ ಶಾಖ್ ಆಗಿದ್ದಾರೆ. ದಿಯಾ ನೀಲಿ ಬಣ್ಣದ ಶಾರ್ಟ್ ಡ್ರೆಸ್ ಧರಿಸಿ ಬೋಲ್ಡ್ ಆಗಿ ವಾಕ್ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಫ್ಯಾನ್ಸ್ ಅಯ್ಯಯ್ಯೋ ಇದೇನು ದೀಪಾ ಹೀಗೆ ಎಂದು ಕೇಳ್ತಿದ್ದಾರೆ. 
 

ಸೀರಿಯಲ್ ನಲ್ಲಿ ನಟನೆ ಮಾಡೋರು ನಿಜ ಜೀವನದಲ್ಲೂ ಹಾಗೇ ಇರಬೇಕು ಅಂತೇನೂ ಇಲ್ಲ. ಹಾಗೆಯೇ ಬ್ರಹ್ಮಗಂಟು ಧಾರಾವಾಹಿಯಲ್ಲಿ ಡೀಗ್ಲಾಮ್ ಪಾತ್ರದಲ್ಲಿ ನಟಿಸುತ್ತಿರುವ ದಿಯಾ, ನಿಜವಾಗಿ ನೋಡೋದಕ್ಕೆ ಸುಂದರಿ, ಜೊತೆಗೆ ತುಂಬಾನೆ ಸ್ಟೈಲಿಶ್ (Stylish). ಇವರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸ್ಟೈಲಿಶ್ ಲುಕ್ ಗಳನ್ನ ಕಾಣಬಹುದು. 
 

ಇನ್ನು ವೈರಲ್ ಆಗಿರುವ ವಿಡೀಯೋದಲ್ಲಿ ದಿಯಾರನ್ನು ನೋಡಿ ವೀಕ್ಷಕರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ, ಒಂದು ಸೀರಿಯಲ್ ನಲ್ಲಿ ನಟಿಸಿದ ಕೂಡ್ಲೇ, ಬಟ್ಟೆಗಳೆಲ್ಲಾ ಸಣ್ಣದಾಗ್ತಿವ, ಮೇಡಂ ಬಟ್ಟೆ ಚೆನ್ನಾಗಿ ಮಾಡ್ಕೊಳಿ, ಈ ರೀತಿ ಬಟ್ಟೆ ಹಾಕಿದ್ರೆ ಸೀರಿಯಲ್ ನೋಡೊದಕ್ಕೆ ಮನಸಾಗಲ್ಲ ಎಂದಿದ್ದಾರೆ. 
 

Latest Videos

click me!