ನಿವೇದಿತಾ ಗೌಡ ಅತ್ಯಂತ ಚಿಕ್ಕ ಉಡುಪು ಇದೇನಾ.? ನೀನು ಬಾರ್ಬಿಡಾಲ್ ಅಲ್ಲ, ಪಾತರಗಿತ್ತಿ ಎಂದ ಫ್ಯಾನ್ಸ್!

First Published | Aug 20, 2024, 6:04 PM IST

ನಟಿ ನಿವೇದಿತಾ ಗೌಡ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತುಂಡುಡುಗೆಯಲ್ಲಿ ಕಾಣಿಸಿಕೊಂಡು 'ಬಟರ್‌ಫ್ಲೈ' ಎಂದು ಸ್ವತಃ ಬಣ್ಣಿಸಿಕೊಂಡಿದ್ದಾರೆ.

ರೀಲ್ಸ್ ರಾಣಿ ನಿವೇದಿತಾ ಗೌಡ ಮದುವೆಗೂ ಮೊದಲು ಕನ್ನಡದ ಬಾರ್ಬಿ ಡಾಲ್ ಎಂದೇ ಖ್ಯಾತಿಯಾಗಿದ್ದರು. ಆದರೆ, ಚಂದನ್ ಶೆಟ್ಟಿಯಿಂದಿಗೆ ಡಿವೋರ್ಸ್ ಪಡೆದ ನಂತರ ಸ್ಲೀವ್‌ಲೆಸ್ ಮಿನಿಸ್ಕರ್ಟ್, ಪಾತರಗಿತ್ತಿ (Butterfly) ಎಂದು ಹೇಳಿಕೊಂಡಿದ್ದಾಳೆ.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ರೀಲ್ಸ್ ಹಂಚಿಕೊಂಡಿರುವ ನಟಿ ನಿವೇದಿತಾ ಗೌಡ ಅವರಿಗೆ 1.80 ಲಕ್ಷ ಫಾಲೋವರ್ಸ್‌ಗಳಿದ್ದಾರೆ. ಅವರು ಯಾವುದೇ ಪೋಸ್ಟ್ ಹಂಚಿಕೊಂಡರೂ ಕ್ಷಣಾರ್ಧದಲ್ಲಿ ಸಾವಿರಾರು ಜನರು ವೀಕ್ಷಣೆ ಮಾಡಿ ಅವುಗಳಿಗೆ ಲೈಕ್ಸ್ ಹಾಗೂ ಕಾಮೆಂಟ್ ಮಾಡುತ್ತಾರೆ.

Tap to resize

ಈಗ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಿವೇದಿತಾ ತುಂಡುಡುಗೆಯನ್ನು ತೊಟ್ಟು ತುಂಬಾ ಹಾಟ್‌ ಆಗಿ ಕಾಣಿಸಿಕೊಂಡಿದ್ದು, ತಾನು 'ಬಟರ್‌ಪ್ಲೈ' ಎಂದು ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ. ಜೊತೆಗೆ ಇಂಗ್ಲೀಷ್ ಹಾಡಿನ ಹಿನ್ನೆಲೆ ಸಂಗೀತಕ್ಕೆ ಬಟರ್‌ಫ್ಲೈ ನಂತೆಯೇ ತನ್ನ ಮೈಮಾಟ ಪ್ರದರ್ಶನ ಮಾಡಿದ್ದಾರೆ.

ಅದೃಷ್ಟ ಖುಲಾಯಿಸಿದ ರೀಲ್ಸ್: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಲೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಜೊತೆ ಜೊತೆಗೆ, ಬಿಗ್ ಬಾಸ್ ಸ್ಪರ್ಧಿಯಾಗಿ, ರ್ಯಾಪರ್ ಚಂದನ್ ಶೆಟ್ಟಿಗೆ ಹೆಂಡತಿಯಾಗಿ, ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ, ಈಗೀಗ ಸಿನಿಮಾಗಳಲ್ಲಿಯೂ ನಟಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ನಿವೇದಿತಾ ಗೌಡ ಜೀವನದಲ್ಲಿ ಸಾಮಾಜಿಕ ಜಾಲತಾಣದ ರೀಲ್ಸ್‌ಗಳಿಂದ ಬಹಳಷ್ಟು ಗಳಿಸಿದ್ದಾಳೆ. ಇನ್ನು ಹಣ ಗಳಿಕೆಯಲ್ಲಿಯೂ ನಿವೇದಿತಾಗೆ ತುಂಬಾ ಅನುಕೂಲವಾಗಿದೆ. ಸ್ವತಂತ್ರವಾಗಿ ಜೀವನ ನಡೆಸಲು ತೊಂದರೆಯಾಗದಷ್ಟು ಹಣ ಗಳಿಕೆ ಇದೆ.

ಹಿಂದೂ ಸಂಪ್ರದಾಯ, ಕುಟುಂಬ ವ್ಯವಸ್ಥೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಿವೇದಿತಾ ಗೌಡ ತನ್ನ ಗಂಡ ಚಂದನ್‌ ಶೆಟ್ಟಿಗೆ ಡಿವೋರ್ಡ್ ಕೊಟ್ಟಿರುವುದು ಸಮಾಜದ ಎದುರಿಗೆ ಕೆಟ್ಟವಳಾಗಿ ಬಿಂಬಿತವಾಗುತ್ತಿದ್ದಾಳೆ. ಆದರೆ, ಸೆಲೆಬ್ರಿಟಿಗಳ ಜೀವನದಲ್ಲಿ ಇದೆಲ್ಲವೂ ಸರ್ವೇ ಸಾಮಾನ್ಯ ಎಂದುಕೊಂಡು ಮುಂದಿನ ಹೆಜ್ಜೆಗಳನ್ನಿಟ್ಟಿದ್ದಾಳೆ.

ಚಂದನ್ ಜೊತೆಗೆ ವಿಚ್ಛೇಧನ ಪಡೆದ ಮೇಲೆ ನಿವೇದಿತಾ ಹಲವು ಸಿನಿಮಾಗಳ ಕಥೆ ಕೇಲಳುತ್ತಿದ್ದಾರೆ. ಇದೇ ಗ್ಯಾಪ್‌ನಲ್ಲು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಇನ್ನು ಚಂದನ್ ಶೆಟ್ಟಿ ತನ್ನ ವಿಧ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದ ಕಡೆ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ತನ್ನ ಸ್ನೇಹಿತರ ಜೊತೆಗೂಡಿ ವಿವಿಧ ಕಾರ್ಯಗಳಲ್ಲಿ ಬ್ಯೂಸಿ ಆಗಿದ್ದಾರೆ.

ನಿವೇದಿತಾಳ ಇನ್‌ಸ್ಟಾಗ್ರಾಮ್ ಪೋಸ್‌ಗೆ 'ಮನೇಲಿರೋ ಮಗಳೇ ಅಂದ್ರೆ ಇಲ್ಲ ಅಪ್ಪ ಊರು ಗೌಡನ್ನ ನೋಡ್ಕೊಂಡು ನೀರು ತರ್ತೀನಿ ಅಂತಿದಳಂತೆ ಹಾಗೆ ಆಯ್ತು ಇದು ನಿನ್ನ ಭವಿಷ್ಯ ತುಂಬಾ ಚನಾಗಿರುತ್ತೆ ಬಿಡಮ್ಮ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಡಿವೋರ್ಸ್ ಆದಮೇಲೆ ನೀನು ತುಂಬಾ ಚೇಂಜ್ ಆಗಿದ್ದೀಯ ಎಂದಿದ್ದಾರೆ.

ಇನ್ನು ಕೆಲವರು ನಿವೇದಿತಾ ಗೌಡ ಅವರ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಹೆಚ್ಚಾಗಿ ಕೆಟ್ಟ ಕಾಮೆಂಟ್‌ಗಳೇ ಬರುತ್ತವೆ. ಆದ್ದರಿಂದ ಕಾಮೆಂಟ್‌ಗಳನ್ನು ಓದಲು ಬರುವ ನೆಟ್ಟಿಗರಿಗೆ ಉಚಿತವಾಗಿ ಚಿಕನ್ ಬಿರಿಯಾನಿ ಊಟದ ವ್ಯವಸ್ಥೆ ಮಾಡಿಸಲಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಅಸಲಿ ವಿಡಿಯೋ ವೀಕ್ಷಣೆಗೆ ಇಲ್ಲಿದೆ ಲಿಂಕ್: https://www.instagram.com/p/C-4tWkZJiLh/

Latest Videos

click me!