ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದ ವೈಷ್ಣವಿ ಗೌಡ: ಇವಾಗ ನೀವು ನಮ್ಮ ಸೀತೆ ಎಂದ ಫ್ಯಾನ್ಸ್!

Published : Dec 09, 2023, 02:45 AM IST

ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಫೋಟೋಗಳನ್ನ ಆಗಾಗ ಅಪ್ಲೋಡ್ ಮಾಡುತ್ತಿರುತ್ತಾರೆ. ರೀಲ್ಸ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿರುತ್ತಾರೆ. ಇದೀಗ ಅವರು ಸೀರೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

PREV
17
ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದ ವೈಷ್ಣವಿ ಗೌಡ: ಇವಾಗ ನೀವು ನಮ್ಮ ಸೀತೆ ಎಂದ ಫ್ಯಾನ್ಸ್!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಅವರ ಪಾತ್ರವು ಕೂಡಾ ಅಮೋಘವಾಗಿ ಮೂಡಿಬರುತ್ತಿದೆ.

27

ವೈಷ್ಣವಿ ಗೌಡ ಅವರನ್ನು ಅನೇಕ ಜನರು ಸಿನಿಮಾಗಳಲ್ಲಿ ನೋಡುವ ಅಪೇಕ್ಷೆಯನ್ನು ಹೊಂದಿದ್ದರು. ಆದರೆ ಸಿನಿಮಾ ಅಷ್ಟಾಗಿ ವೈಷ್ಣವಿ ಗೌಡ ಅವರನ್ನು ಅರಿಸಿಕೊಂಡು ಬಂದಿರಲಿಲ್ಲ. ಆದರೆ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಬಹಳ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

37

ಇದೀಗ ವೈಷ್ಣವಿ ಗೌಡ ಸೀರೆಯಲ್ಲಿ ಸಕ್ಕತ್ತಾಗಿ ಕಾಣಿಸುತ್ತಿದ್ದಾರೆ ಅವರ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಜೊತೆಗೆ ನೆಟ್ಟಿಗರು ಇವಾಗ ನೀವು ನಮ್ಮ ಸೀತೆ ತರಹನೇ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.

47

ಹೌದು! ವೈಷ್ಣವಿ ಗೌಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೀರೆಯಲ್ಲಿ ವೈಷ್ಣವಿ ಗೌಡ ಅವರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋಟೋಗೆ ಸಾಕಷ್ಟು, ಲೈಕ್ ಕಾಮೆಂಟ್ ಬರುತ್ತಿದೆ.

57

ಸೀರೆಯಲ್ಲಿ ಕಾಣಿಸುವ ಹಾಗೆ ಮುದ್ದಾಗಿ ಮಾಡರ್ನ್ ಡ್ರೆಸ್‌ನಲ್ಲಿ ವೈಷ್ಣವಿ ಕಾಣಿಸುವುದಿಲ್ಲ. ಇದೀಗ ಸೀರೆ ತೊಟ್ಟು, ಅದಕ್ಕೆ ತಕ್ಕ ಹಾಗೆಯೇ ಸಿಂಪಲ್ ಮೇಕಪ್ ಮಾಡಿಕೊಂಡು , ಅದಕ್ಕೆ ಅನುಗುಣವಾಗಿ ಸಿಂಪಲ್ ಆಭರಣಗಳನ್ನೂ ತೊಟ್ಟುಕೊಂಡು ಬಹಳ ಅದ್ಭುತವಾಗಿ ಕಾಣಿಸುತ್ತ ಇದ್ದಾರೆ. 

67

ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ ವೈಷ್ಣವಿ ಗೌಡ. ಇದೀಗ ಸೀತಾ ರಾಮ ಧಾರಾವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. 

77

ಸೀತಾ ರಾಮ ಧಾರಾವಾಹಿ ವೈಷ್ಣವಿ ಅವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿದೆ. ಈ ಧಾರವಾಹಿಯಲ್ಲಿ ಅವರ ಮುದ್ದು ಮುಖವನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಇದೀಗ ಸೀರೆಯಲ್ಲಿ ವೈಷ್ಣವಿ ಅವರನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ.

Read more Photos on
click me!

Recommended Stories