ರಿಯಲ್‌ ಲೈಫ್‌ನಲ್ಲೂ ಸಖತ್ ಕ್ಲೋಸ್‌ ಸೀತಾ-ಸಿಹಿ, ಮುದ್ದಾದ ಫೋಟೋ ಶೇರ್ ಮಾಡಿದ ವೈಷ್ಣವಿ ಗೌಡ

Published : May 28, 2024, 02:45 PM ISTUpdated : May 28, 2024, 02:53 PM IST

ಸೀತಾರಾಮ ಸೀರಿಯಲ್‌ನ ಸೀತಾ ಹಾಗೂ ಸಿಹಿಯ ಬಾಂಡಿಂಗ್‌ ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ ಕೇವಲ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ ಲೈಫ್‌ನಲ್ಲಿಯೂ ವೈಷ್ಣವಿ ಗೌಡ ಹಾಗೂ ಸಿಹಿ ಉತ್ತಮ ಬಾಂಡಿಂಗ್ ಇಟ್ಟುಕೊಂಡಿದ್ದಾರೆ. ವೈಷ್ಣವಿ ಗೌಡ ಇತ್ತೀಚಿಗೆ ಇವರಿಬ್ಬರ ಸುಂದರವಾದ ಫೋಟೋಸ್ ಶೇರ್ ಮಾಡಿದ್ದಾರೆ.

PREV
19
ರಿಯಲ್‌ ಲೈಫ್‌ನಲ್ಲೂ ಸಖತ್ ಕ್ಲೋಸ್‌ ಸೀತಾ-ಸಿಹಿ, ಮುದ್ದಾದ ಫೋಟೋ ಶೇರ್ ಮಾಡಿದ ವೈಷ್ಣವಿ ಗೌಡ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾಗಿರುವ ಸಿಹಿ ನಟನೆಯನ್ನು  ಇಡೀ ಕರುನಾಡು ಮೆಚ್ಚಿಕೊಂಡಿದೆ. ಆಕೆಯ ಮುದ್ದಾದ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ.

29

ಸೀರಿಯಲ್‌ನಲ್ಲಂತೂ ಸೀತಾ ಹಾಗೂ ಸಿಹಿಯ ಬಾಂಡಿಂಗ್‌ ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ ಕೇವಲ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ ಲೈಫ್‌ನಲ್ಲಿಯೂ ವೈಷ್ಣವಿ ಗೌಡ ಹಾಗೂ ಸಿಹಿ ಉತ್ತಮ ಬಾಂಡಿಂಗ್ ಇಟ್ಟುಕೊಂಡಿದ್ದಾರೆ.

39

ಸೀರಿಯಲ್‌ ಸೆಟ್‌ನಲ್ಲಿ ತರಲೆ ಮಾಡುತ್ತಾ, ರೀಲ್ಸ್ ಮಾಡುತ್ತಾ ಸಮಯ ಕಳೆಯುತ್ತಾರೆ. ವೈಷ್ಣವಿ ಗೌಡ ಹಾಗೂ ರಿತು ಸಿಂಗ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವೀಡಿಯೋಗಳನ್ನು ಪೋಸ್ಟ್‌ ಮಾಡಿಕೊಳ್ಳುತ್ತಾರೆ.

49

ಸದ್ಯ ಸಿಹಿಯ ಮುದ್ದಿನ ಸೀತಮ್ಮ ಮತ್ತು ರಾಮನ ಮದುವೆ ಮಾತುಕತೆ ನಡೆಯುತ್ತಿದೆ. ಧಾರವಾಹಿಯಲ್ಲಿ ಈವರೆಗೆ ಸಿಹಿ ನಿಜವಾಗಲೂ ಯಾರ ಮಗಳು, ಸೀತನ ಮಗಳಾ? ಸೀತಾಗೆ ಮೊದಲು ಮದುವೆಯಾಗಿದೆಯಾ? ಆಕೆಯ ಜನ್ಮ ರಹಸ್ಯವೇನು ಎಂಬುದು ಈವರೆಗೆ ಬಹಿರಂಗವಾಗಿಲ್ಲ.

59

ಸೀತಾರಾಮ ಧಾರವಾಹಿ ವೀಕ್ಷಕರು ಕೂಡ ಸಿಹಿಯ ಜನ್ಮ ರಹಸ್ಯವೇನು? ರಾಮನಿಗೆ ಸಿಹಿಯ ಹುಟ್ಟಿನ ಗುಟ್ಟನ್ನು ಯಾವಾಗ ತಿಳಿಸುತ್ತಾಳೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಕೇಳುತ್ತಲೇ ಇದ್ದಾರೆ.

69

ಧಾರವಾಹಿಯಲ್ಲಿ ಸಿಹಿಗೆ ಅಪ್ಪನ ಪ್ರೀತಿ ಇಲ್ಲ. ತನ್ನ ತಂದೆ ಯಾರು ಎನ್ನೋದು ಗೊತ್ತಿಲ್ಲ, ಮನೆಯಲ್ಲಿ ಕೂಡ ಆರ್ಥಿಕ ಸಂಕಷ್ಟ ಇದೆ.  ಹೀಗಾಗಿ ರಾಮನಿಂದ ಅಪ್ಪನ ಪ್ರೀತಿಯನ್ನು ಬಯಸುತ್ತಿದ್ದಾಳೆ ಸಿಹಿ.

79

ಆದರೆ ನಿಜ ಜೀವನದಲ್ಲಿ ಕೂಡ ಸಿಹಿ ಪಾತ್ರದಲ್ಲಿರುವ ರಿತು ಸಿಂಗ್‌ ಗೆ ಅಪ್ಪನ ಪ್ರೀತಿ ಸಿಕ್ಕಿಲ್ಲವಂತೆ. ರಿತು ಸಿಂಗ್‌ ತುಂಬ ಚಿಕ್ಕವಳಿದ್ದಾಗಲೇ ಅವಳ ತಂದೆ ಮನೆ ಬಿಟ್ಟು ಹೋಗಿದ್ದಾರಂತೆ. ಈ ಹಿಂದೆ ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ ರಿತು ತಾಯಿ ಗೀತಾ ಅವರು ಈ ಬಗ್ಗೆ ಹೇಳಿಕೊಂಡಿದ್ದರು. 

89

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಶೋ ಮೂಲಕ ಪರಿಚಯವಾದ ನಿಜ ನಾಮಧೇಯ ರೀತು ಸಿಂಗ್. ಮೂಲತಃ ನೇಪಾಳದ ಪುಟ್ಟ ಪೋರಿ ಈಕೆ. ಈಕೆಯ ಫ್ಯಾಮಿಲಿ ಮೈಸೂರಿನಲ್ಲಿದ್ದರು. ಬಳಿಕ ಬೆಂಗಳೂರಿಗೆ ಶಿಫ್ಟ್ ಆದರು. 

99

ಇತ್ತೀಚಿಗೆ ವೈಷ್ಣವಿ ಗೌಡ ಶೇರ್ ಮಾಡ್ಕೊಂಡಿರೋ ಫೋಟೋದಲ್ಲಿ, ವೈಷ್ಣವಿ ಸ್ಕೈ ಬ್ಲೂ ಹಾಗೂ ರಿತು ಸಿಂಗ್‌ ಯೆಲ್ಲೋ ಸ್ಕರ್ಟ್‌ ಹಾಗೂ ಗ್ರೀನ್‌ ಟಾಪ್‌ನಲ್ಲಿ ಮಿಂಚಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories