ಲಕ್ಷ್ಮೀ ಬಾರಮ್ಮ ಸೀರಿಯಲ್: ಮತ್ತೊಬ್ಬ ಪಾತ್ರಧಾರಿಯೂ ಚೇಂಜ್, ಹೊಸ ನಟಿ ಎಂಟ್ರಿ!

Published : May 28, 2024, 01:03 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ತಾಯಿ ಕಾರುಣ್ಯ ಪಾತ್ರ ಬದಲಾಗಿದೆ. ಮೇಘನಾ ಬದಲಾಗಿ ಇದೀಗ ರೇಣುಕಾ ಸ್ನೇಹಾ ನಟಿಸುತ್ತಿದ್ದಾರೆ.   

PREV
17
ಲಕ್ಷ್ಮೀ ಬಾರಮ್ಮ ಸೀರಿಯಲ್: ಮತ್ತೊಬ್ಬ ಪಾತ್ರಧಾರಿಯೂ ಚೇಂಜ್, ಹೊಸ ನಟಿ ಎಂಟ್ರಿ!

ಸೀರಿಯಲ್‌ಗಳಲ್ಲಿ ಪಾತ್ರಧಾರಿಗಳ ಬದಲಾವಣೆ ಹೊಸ ವಿಷಯವೇ ಅಲ್ಲ, ಯಾಕೆಂದರೆ ಸೀರಿಯಲ್ (Serial) ಗಳಲ್ಲಿ ಈ ಬದಲಾವಣೆ ಈಗ ಸಾಮಾನ್ಯವಾಗಿದೆ. ಜನರು ಅದೇ ಪಾತ್ರವನ್ನು ಮೆಚ್ಚಿಕೊಂಡಿರುವ ಹೊತ್ತಿಗೆ, ಪಾತ್ರಧಾರಿಯನ್ನು ಇದ್ದಕ್ಕಿದ್ದಂತೆ ಬದಲಾಯಿಸುತ್ತಾರೆ. 
 

27

ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ನಲ್ಲಿ ಈ ಹಿಂದೆ ವೈಷ್ಣವ್ ತಂದೆಯ ಪಾತ್ರದಲ್ಲಿ ಸುರೇಶ್ ರೈ ನಟಿಸುತ್ತಿದ್ದರು, ಆ ಪಾತ್ರಕ್ಕೆ ಅವರು ಸೂಕ್ತವೂ ಆಗಿದ್ದರು, ಜನರು ಮೆಚ್ಚಿಕೊಂಡಿದ್ದರು, ಆದರೆ ಇದ್ದಕ್ಕಿದ್ದಂತೆ ಅವರ ಪಾತ್ರ ಬದಲಾವಣೆ ಮಾಡಲಾಯಿತು. ಈಗ ಕೀರ್ತಿ ತಾಯಿ ಪಾತ್ರದಲ್ಲೂ ಬದಲಾವಣೆಯಾಗಿದೆ. 
 

37

ಹೌದು ಈ ಹಿಂದೆ ಕೀರ್ತಿ ತಾಯಿ ಪಾತ್ರದಲ್ಲಿ ಮೇಘನಾ ಸೋಮಶೇಖರ್ (Meghana Somashekar) ನಟಿಸುತ್ತಿದ್ದರು. ಮೇಘನಾ ಅವರ ಸಿಟ್ಟು, ಮಗಳ ಮೇಲಿನ ಪ್ರೀತಿ, ಕಾವೇರಿ ಮೇಲಿನ ಕೋಪ ಎಲ್ಲವೂ ಜನರಿಗೆ ಇಷ್ಟವಾಗಿತ್ತು, ಪ್ರಮುಖ ಪಾತ್ರ ಅಲ್ಲದೇ ಇದ್ದರೂ ಕೀರ್ತಿ ತಾಯಿ ಪಾತ್ರಕ್ಕೆ ಜೀವ ತುಂಬಿದ್ದರು ಮೇಘನಾ. ಇದೀಗ ಅವರು ಸೀರಿಯಲ್ ತೊರೆದಿದ್ದಾರೆ. 
 

47

ಮೇಘನಾ ಅವರು ಯಾವ ಕಾರಣಕ್ಕೆ ಸೀರಿಯಲ್ ತೊರೆದಿದ್ದಾರೆ ಅನ್ನೋದು ತಿಳಿದಿಲ್ಲ. ಆದರೆ ಇದೀಗ ಅವರ ಜಾಗಕ್ಕೆ ರೇಣುಕಾ ಸ್ನೇಹಾ (Renuka Sneha) ಎಂಟ್ರಿಯಾಗಿದೆ. ಈಗಾಗಲೇ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದು ಆಗಿದೆ. 
 

57

ಕಿರುತೆರೆಗೆ ರೇಣುಕಾ ಸ್ನೇಹಾ ಹೊಸಬರೇನಲ್ಲ. ಈ ಹಿಂದೆ ಹಲವಾರು ಸೀರಿಯಲ್ ಗಳಲ್ಲಿ ರೇಣುಕಾ ಸ್ನೇಹಾ ನಟಿಸಿದ್ದರು. ವಿಷ್ಣುವರ್ಧರಿಂದ ಹಿಡಿದು, ರಕ್ಷಿತ್ ಶೆಟ್ಟಿವರೆಗೂ ಹಲವು ಸಿನಿಮಾಗಳಲ್ಲೂ ಇವರು ಬಣ್ಣ ಹಚ್ಚಿದ್ದರು. 
 

67

ರೇಣುಕಾ ಅವರು ಲಗ್ನಪತ್ರಿಕೆ, ಪರಿಣಿತಾ, ಪುಟ್ಟಗೌರಿ ಮದುವೆ, ಕುಲವಧು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಅಷ್ಟೇ ಅಲ್ಲದೇ ರಿಷಬ್ ಶೆಟ್ಟಿ, ಡಾ ವಿಷ್ಣುವರ್ಧನ್, ರಕ್ಷಿತ್ ಶೆಟ್ಟಿ ಯವರ ಜೊತೆ ಸ್ಕ್ರೀನ್ ಶೇರ್ ಕೂಡ ಮಾಡಿದ್ದಾರೆ. 
 

77

ಸೀರಿಯಲ್ ನ ಕಥೆಯಿಂದಲೇ ವೀಕ್ಷಕರು ಬೇಸರ ಹೊಂದಿದ್ದಾರೆ ಕಾರಣ, ಕಥೆಯನ್ನು ತುಂಬಾನೆ ಎಳೆಯುವ ರೀತಿ, ಪದೇ ಪದೇ ಲಕ್ಷ್ಮಿಗೆ ವೈಷ್ಣವ್ -ಕೀರ್ತಿ ಪ್ರೀತಿ ಗೊತ್ತಾಗೋದು, ಮತ್ತೆ ಅದು ಸುಳ್ಳು ಅಂತ ಮನೆಯವರು ನಂಬಿಸೋದು ಇದೇ ಆಗಿದೆ. ಇದರ ಮಧ್ಯೆ ಕಾರುಣ್ಯ ಪಾತ್ರಧಾರಿ ಬದಲಾವಣೆ ನೋಡಿ ಜನರು ಕಾರುಣ್ಯ ಪಾತ್ರಕ್ಕೆ ಮೇಘನಾ ಅವರೇ ಸರಿ ಇದ್ದರು, ಇವರು ಸರಿ ಕಾಣಿಸ್ತಿಲ್ಲ ಎಂದಿದ್ದಾರೆ.  ಅಷ್ಟೇ ಅಲ್ಲದೇ ಕೀರ್ತಿ ಪಾತ್ರಧಾರಿಯೂ ಈ ಮೊದಲು ಬದಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 
 

Read more Photos on
click me!

Recommended Stories