Seetha Rama Serial Climax Episode: ದೇಸಾಯಿ ಕುಟುಂಬಕ್ಕೆ ಎಲ್ಲ ಸತ್ಯ ಗೊತ್ತಾದ್ಮೇಲೆ ಭಾರ್ಗವಿ ಕಥೆ ಏನಾಗತ್ತೆ?

Published : May 30, 2025, 12:37 PM ISTUpdated : May 30, 2025, 12:41 PM IST

ಅನೇಕ ಜನರ ಮನಸ್ಸನ್ನು ಗೆದ್ದಿದ್ದ ʼಸೀತಾರಾಮʼ ಧಾರಾವಾಹಿ ಅಂತ್ಯವಾಗುವ ಸಮಯ ಬಂದಿದೆ. 2023ರಲ್ಲಿ ಆರಂಭವಾಗಿದ್ದ ಈ ಧಾರಾವಾಹಿಯು 489 ಎಪಿಸೋಡ್‌ಗಳನ್ನು ಪೂರೈಸಿದೆ. ಇಂದು ಮೇ 30ರಂದು ʼಸೀತಾರಾಮʼ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರ ಆಗುವುದು.

PREV
16
ಭಾರ್ಗವಿ ಏನು ಹೇಳಿದಳು?

ʼಸೀತಾರಾಮʼ ಧಾರಾವಾಹಿಯಲ್ಲಿ ಈಗ ಭಾರ್ಗವಿಯ ಸತ್ಯವೆಲ್ಲವೂ ಸೀತಾಗೆ ಗೊತ್ತಾಗಿದೆ. . ತನ್ನ ಸತ್ಯವನ್ನು ಪತ್ತೆ ಮಾಡಿರೋ ಸೀತಾಳನ್ನು ಭಾರ್ಗವಿ ಕಿಡ್ನ್ಯಾಪ್‌ ಮಾಡಿಸಿದ್ದಾಳೆ. “ಇಂದ್ರನನ್ನು ನಾನು ಇಷ್ಟಪಟ್ಟೆ. ಆದರೆ ಅವನು ವಾಣಿಯನ್ನು ಮದುವೆಯಾದ. ನನ್ನ ಇಂದ್ರ ನನಗೆ ಸಿಗಲೇ ಇಲ್ಲ. ನೀನು ಬಂದು ಕೂಡ ನನ್ನ ಜಾಗವನ್ನು ಕಿತ್ತುಕೊಂಡೆ. ಸಿಹಿಯನ್ನು ಕೊಲೆ ಮಾಡಿದ್ದು ನಾನೇ, ಇಂದ್ರ-ವಾಣಿಯನ್ನು ಕೊಂದಿದ್ದು ನಾನೇ” ಎಂದು ಭಾರ್ಗವಿಯು ಸೀತಾ ಮುಂದೆ ಹೇಳಿದ್ದಾಳೆ.

26
ರಾಮ್‌ ಪ್ರೀತಿ ನನಗೆ ಅಪಾಯ ಮಾಡೋಕೆ ಬಿಡಲ್ಲ

“ನನ್ನ ಗಂಡ ನನ್ನನ್ನು ತುಂಬ ಪ್ರೀತಿ ಮಾಡ್ತಾನೆ. ಅವನ ಪ್ರೀತಿಯೇ ನನ್ನ ಬದುಕಿಸುತ್ತದೆ. ನೀವು ತುಂಬ ತಪ್ಪು ಮಾಡಿದ್ದೀರಿ. ನಂಬಿದವರಿಗೆ ಮೋಸ ಮಾಡಿದ್ದೀರಿ” ಎಂದು ಭಾರ್ಗವಿಗೆ ಸೀತಾ ಬುದ್ಧಿ ಹೇಳಿದ್ದಾಳೆ.

36
ಸೀತಾ ಇದ್ದ ಜಾಗದಲ್ಲಿ ದೇಸಾಯಿ ಕುಟುಂಬ

ಇನ್ನೊಂದು ಕಡೆ ಸೀತಮ್ಮನನ್ನು ಕೊಲೆ ಮಾಡ್ತೀನಿ ಅಂತ ಭಾರ್ಗವಿ ಹೇಳಿದ್ದಳು ಅಂತ ಸುಬ್ಬಿ ಎಲ್ಲರಿಗೂ ತಿಳಿಸಿದ್ದಾಳೆ. ಭಾರ್ಗವಿ ಎಲ್ಲಿದ್ದಾಳೆ ಅಂತ ಹುಡುಕೋಣ ಅಂತ ಶ್ರೀರಾಮ್‌, ಅಶೋಕ್‌, ಮೇಘನಾ ಎಲ್ಲರೂ ಕಾರ್‌ ಹತ್ತಿ ಹೊರಟಿದ್ದಾರೆ. ಈಗಾಗಲೇ ಪ್ರೋಮೋದಲ್ಲಿ ತೋರಿಸಿರುವ ಹಾಗೆ ಭಾರ್ಗವಿ, ಸೀತಾ ಇರುವ ಜಾಗಕ್ಕೆ ಎಲ್ಲರೂ ಬಂದಿದ್ದಾರೆ. ಅಲ್ಲಿ ಒಂದಷ್ಟು ಮಾತುಕತೆ ನಡೆದಿದೆ.

46
ಭಾರ್ಗವಿ, ದೇಸಾಯಿ ಕುಟುಂಬದ ನಡುವೆ ಏನು ಮಾತುಕತೆ ಆಯ್ತು?

ಸೂರ್ಯಪ್ರಕಾಶ್: ನನ್ನ ಮಗ-ಸೊಸೆಯನ್ನು ಯಾಕೆ ಕೊಂದೆ?‌

ಭಾರ್ಗವಿ: ನನ್ನನ್ನು ಯಾಕೆ ಇಂದ್ರನಿಂದ ದೂರ ಮಾಡಿದ್ರಿ?

ಸೂರ್ಯಪ್ರಕಾಶ್:‌ ಇಂದ್ರನಿಗೆ ನಿನ್ನ ಮೇಲೆ ಲವ್‌ ಇರಲಿಲ್ಲ

ಭಾರ್ಗವಿ: ಅದಕ್ಕಾಗಿ ಈ ಅಯೋಗ್ಯನ ಜೊತೆ ನನ್ನ ಮದುವೆ ಮಾಡಿದ್ರಾ?

ಶ್ರೀರಾಮ್‌ ದೇಸಾಯಿ: ನೀವು ನನ್ನ ಸೀತಾಳನ್ನು ಕೊಲೆ ಮಾಡೋಕೆ ಟ್ರೈ ಮಾಡಿದ್ರಾ? ನನ್ನ ತಂದೆ-ತಾಯಿ, ನನ್ನ ಸಿಹಿಯನ್ನು ನೀವು ಕೊಂದ್ರಾ? ಯಾಕೆ ಹೀಗೆ ಮಾಡಿದ್ರಿ?

ಭಾರ್ಗವಿ: ನಿನ್ನ ನೋವಿನಲ್ಲಿ ನನಗೆ ನಿನ್ನ ತಾಯಿ ವಾಣಿ ಕಾಣಿಸ್ತಿದ್ಲು

ಶ್ರೀರಾಮ್‌ ದೇಸಾಯಿ: ನನ್ನ ಯಾಕೆ ಹಾಗೆ ಬಿಟ್ಟಿದ್ದೀರಾ?

ಭಾರ್ಗವಿ: ನಿನ್ನ ನೋವೆ ನನ್ನ ಗಾಯಕ್ಕೆ ಮುಲಾಮು

56
ಮುಂದೆ ಏನಾಗಬಹುದು?

ಬಹುಶಃ ಕೊನೆಯಲ್ಲಿ ಭಾರ್ಗವಿ ಜೈಲಿಗೆ ಹೋಗಬಹುದು. ಇನ್ನು ಸೀತಾ-ಶ್ರೀರಾಮ್‌ ದೇಸಾಯಿ ಸುಬ್ಬಿ ಜೊತೆ ಚೆನ್ನಾಗಿ ಬದುಕಬಹುದು. ಇದರ ಜೊತೆಗೆ ಸಿಹಿ ಕಡೆ ಅವರ ಜೊತೆಯಲ್ಲಿ ಆತ್ಮವಾಗಿ ಇರಬಹುದು.

66
ಹ್ಯಾಪಿ ಎಂಡಿಂಗ್‌ ಆದರೂ ಬೇಸರ!

ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಮುಖ್ಯಮಂತ್ರಿ ಚಂದ್ರು, ಮೇಘನಾ ಶಂಕರಪ್ಪ, ಅಶೋಕ್‌, ಜ್ಯೋತಿ ಕಿರಣ್‌ ನಟನೆಯ ಈ ಧಾರಾವಾಹಿ ಅಂತ್ಯ ಆಗ್ತಿದೆ. ಈ ಸೀರಿಯಲ್‌ ಮುಕ್ತಾಯ ಆಗ್ತಿರೋದು ಅನೇಕರಿಗೆ ಬೇಸರ ತಂದಿದೆ. 

Read more Photos on
click me!

Recommended Stories