ಸ್ಯಾಟಿನ್ ಡ್ರೆಸ್ ಧರಿಸಿ ಸಖತ್ ಸ್ಟೈಲಿಶ್ ಪೋಸ್ ಕೊಟ್ಟ ಮೇಘನಾ… ಮಿಸ್ ಯು ಸುಂದರಿ ಅಂತಿದ್ದಾರೆ ಫ್ಯಾನ್ಸ್

Published : Sep 16, 2024, 02:41 PM ISTUpdated : Sep 16, 2024, 03:01 PM IST

ಸೀತಾ ರಾಮ ಧಾರವಾಹಿಯಲ್ಲಿ ಸೀತಾ ಗೆಳತಿ ಹಾಗೂ ಅಶೋಕ್ ಪತ್ನಿಯಾಗಿ ತುಂಬಾನೆ ಬಬ್ಲಿಯಾಗಿ ನಟಿಸುತ್ತಾ ವೀಕ್ಷಕರ ಮನಗೆದ್ದ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ.   

PREV
17
ಸ್ಯಾಟಿನ್ ಡ್ರೆಸ್ ಧರಿಸಿ ಸಖತ್ ಸ್ಟೈಲಿಶ್ ಪೋಸ್ ಕೊಟ್ಟ ಮೇಘನಾ… ಮಿಸ್ ಯು ಸುಂದರಿ ಅಂತಿದ್ದಾರೆ ಫ್ಯಾನ್ಸ್

ಮೇಘನಾ ಶಂಕರಪ್ಪ (Meghana Shankarappa) ಅಂದ್ರೆ ಯಾರಪ್ಪ ಅದು ಅಂತಾ ನೀವೂ ಕೇಳದೇ ಇರಲಾರಿರಿ, ಯಾಕಂದ್ರೆ ಇವರು ಫೇಮಸ್ ಆಗಿದ್ದೆ ಸೀತಾ ರಾಮ ಧಾರವಾಹಿಯ ಪ್ರಿಯಾ ಪಾತ್ರದ ಮೂಲಕ. ಪ್ರಿಯಾ ಬಬ್ಲಿ ಕ್ಯಾರೆಕ್ಟರ್ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು, ಸದಾ ಖುಷ್ ಖುಶಿಯಾಗಿ, ಎಲ್ಲರನ್ನೂ ನಗಿಸುತ್ತಾ, ತಿನ್ನುತ್ತಲೇ ಇರುವಂತಹ ಪಾತ್ರ ಪ್ರಿಯಾಳದ್ದು. 
 

27

ಅದರಲ್ಲೂ ಪ್ರಿಯಾ ಮತ್ತು ಅಶೋಕ್ (Priya and Ashok) ಜೋಡಿಯಂತೂ ಒಂದು ಟೈಮಲ್ಲಿ ಸೀತಾ ಮತ್ತು ರಾಮ ಜೋಡಿಗಿಂತಲೂ ಹೆಚ್ಚು ಜನಪ್ರಿಯತೆ ಪಡೆದಿತ್ತು. ಪ್ರಿಯಾ -ಅಶೋಕ್ ಜೋಡಿಯ ತುಂಟಾಟ, ಮಾತು , ಪ್ರೀತಿಯನ್ನು ನೋಡೊದಕ್ಕಾಗಿಯೇ ಸೀರಿಯಲ್ ನೋಡುತ್ತಿದ್ದರು. ಇದೀಗ ಕಥೆಯಲ್ಲಿ ಟ್ವಿಸ್ಟ್ ಬಂದಿದ್ದು, ಪ್ರಿಯಾಗೆ ಕ್ಯಾನ್ಸರ್ ಇರೋದು ಗೊತ್ತಾಗಿದೆ. 
 

37

ಸೀರಿಯಲ್ ವಿಷ್ಯ ಬಿಟ್ರೆ ಪ್ರಿಯಾ ಡೆಕೆಡಿಯಲ್ಲೂ (DKD) ಸಹ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ತೀರ್ಪೂಗಾರರಿಂದ, ಅದರಲ್ಲೂ ಶಿವರಾಜ್ ಕುಮಾರ್ ಅವರಿಂದಲೇ ಭೇಷ್ ಅನಿಸಿಕೊಂಡಿದ್ದರು, ನಟಿ. ಸದ್ಯಕ್ಕೆ ನಟಿಗೆ ಆರೋಗ್ಯ ಸಮಸ್ಯೆಯುಂಟಾಗಿ, ಸೀರಿಯಲ್ ಮತ್ತು ಡಿಕೆಡಿ ಎರಡರಿಂದಲೂ ಬ್ರೇಕ್ ತೆಗೆದುಕೊಂಡಿದ್ದರು. 
 

47

ಮೇಘನಾ ಆದಷ್ಟು ಬೇಗ ಸೀರಿಯಲ್ ಗೂ ಡಿಕೆಡಿ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದೆಲ್ಲದರ ನಡುವೆ ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಖತ್ ಸ್ಟೈಲಿಶ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸುದ್ದಿಯಲ್ಲಿದ್ದಾರೆ ಮೇಘನಾ. ಇವರ ಸ್ಟೈಲಿಶ್ ಲುಕ್, ಸ್ಟೈಲ್, ಡ್ರೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

57

ಗ್ರೇ ಬಣ್ಣದ ಸ್ಯಾಟಿನ್ ಪ್ಯಾಂಟ್ ಮತ್ತು ಟ್ಯೂಬ್ ಟಾಪ್ ಧರಿಸಿರುವ ಮೇಘನಾ, ಅದರ ಮೇಲೆ ಗ್ರೇ ಬಣ್ಣದ ನೆಟ್ಟೆಡ್ ಓವರ್ ಕೋಟ್ ಧರಿಸಿದ್ದಾರೆ. ಇದಕ್ಕೆ ಮ್ಯಾಚ್ ಆಗುವ ಸಿಲ್ವರ್ ನೆಕ್ಲೆಸ್ ಮತ್ತು ಸಿಲ್ವರ್ ಇಯರಿಂಗ್ಸ್ ಧರಿಸಿದ್ದು, ತುಂಬಾನೆ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. 
 

67

ಮೇಘಾ ಶಂಕರಪ್ಪ ಫೋಟೊಗೆ ನಾನಾ ರೀತಿಯ ಕಾಮೆಂಟ್ ಗಳು ಬಂದಿದ್ದು, ಹಾಟ್, ಬಾರ್ಬಿ ಡಾಲ್, ತುಂಬಾನೆ ಚೆನ್ನಾಗಿ ಕಾಣಿಸ್ತಿದ್ದೀರಿ, ನೀವು ಮೇಘನಾ ರಾಜ್ ಸೇಮ್ ಇದೀರಾ, ಟ್ವಿನ್ಸ್ ಥರ ಕಾಣಿಸ್ತೀರಿ, ಸ್ಟನ್ನಿಂಗ್ (stunning), ಕಿಲ್ಲಿಂಗ್, ಕ್ಯೂಟ್, ನಿಮ್ಮ ಲುಕ್ ಗೆ ಗಂಡ ಮಕ್ಳ ಗುಂಡಿಗೆ ಸದ್ದು ಮಾಡೋದು ನಿಂತೋಯ್ತು ಎಂದು ಕಾಮೆಂಟ್ ಮಾಡ್ತಿದ್ದಾರೆ. 
 

77

ಇನ್ನು ಹೆಚ್ಚಿನ ಜನರು ಮೇಡಂ ನಿಮ್ಮನ್ನ ನಾವು ಡಿಕೆಟಿ, ಸೀತಾ ರಾಮ ಧಾರಾವಾಹಿಯಲ್ಲಿ (Sita Rama serial) ತುಂಬಾನೆ ಮಿಸ್ ಮಾಡ್ಕೊಳ್ತಿದ್ದೀವಿ, ಆದಷ್ಟು ಬೇಗ ಬನ್ನಿ ಎಂದು ಕೇಳಿ ಕೊಂಡಿದ್ದಾರೆ. ತಮ್ಮ ಮುದ್ದು ಮುದ್ದು ಮಾತಿನಿಂದಲೇ ಮನ ಗೆದ್ದ ನಟಿ ಮತ್ತೆ ಯಾವ್ಯಾಗ ಸೀರಿಯಲ್ ಗೆ ಹಿಂದಿರುತ್ತಾರೆ? ಅಥವಾ ಡಿಕೆಡಿಗೆ ಮತ್ತೆ ಬರ್ತಾರ? ಅನ್ನೋದನ್ನ ಕಾದು ನೋಡಬೇಕು. 
 

Read more Photos on
click me!

Recommended Stories