ದಿಲೀಪ್ ಮತ್ತು ಖುಷಿ ಸೀರಿಯಲ್ ನಲ್ಲಿ ಮಾತ್ರವಲ್ಲದೇ, ಹೆಚ್ಚಾಗಿ ರಿಯಲ್ ಆಗಿಯೂ ಜೊತೆಯಾಗಿ ರೀಲ್ಸ್ ಮಾಡುತ್ತಾ, ಫೋಟೊ ಶೂಟ್ ಮಾಡಿಸುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ ದಿಲೀಪ್ ಫ್ಯಾಮಿಲಿ ಜೊತೆಗೂ ಖುಷಿ ಕಾಣಿಸಿಕೊಂಡಿದ್ದರು. ಜೊತೆಗೆ ಇಬ್ಬರು ಜೊತೆಯಾಗಿ ಸೇರಿ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದು, ಅದಕ್ಕೆ ದಿಲ್ ಖುಷ್ (Dilkush) ಅಂತ ಹೆಸರು ಕೂಡ ಇಟ್ಟಿದ್ದರು. ಕಿರುತೆರೆಯ ಈ ಜನಪ್ರಿಯ ಜೋಡಿ ಯಾವಾಗ್ಲೂ ಖುಷಿಯಾಗಿರಲಿ, ಜೊತೆಯಾಗಿರಲಿ ಅನ್ನೋದು ಅಭಿಮಾನಿಗಳ ಹಾರೈಕೆ.