ಮಮ್ಮಿ ಆದ್ರೂ ಡುಮ್ಮಿ ಆಗಿಲ್ವಲ್ಲ?; 'ಕೆಂಡಸಂಪಿಗೆ' ಸಾಧನಾ ಫಿಟ್ನೆಸ್‌ ನೋಡಿ ಕಾಲೆಳೆದ ನೆಟ್ಟಿಗರು!

First Published | Sep 16, 2024, 11:18 AM IST

ಬ್ಲಾಕ್ ಸೀರೆಯಲ್ಲಿ ಮಿಂಚುತ್ತಿರುವ ಅಮೃತಾ ಫೋಟೋ ವೈರಲ್. ವೇಟ್‌ಲಾಸ್‌ ಬಗ್ಗೆ ಶುರುವಾಯ್ತು ಜನರಿಗೆ ಚಿಂತೆ.....

ಮಿಸ್ಟರ್ ಆಂಡ್ ಮಿಸೆಸ್‌ ರಂಗೇಗೌಡ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಅಮೃತಾ ರಾಮಮೂರ್ತಿ ಈಗ ಸಖಡ್ ಬೇಡಿಕೆಯ ನಟಿ.

ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸಾಧನಾ ಅನ್ನೋ ವಿಲನ್ ಪಾತ್ರದಲ್ಲಿ ಅಮೃತಾ ಮಿಂಚುತ್ತಿದ್ದಾರೆ.

Tap to resize

 ವಿಲನ್‌ಗಳು ಇಷ್ಟೋಂದು ಬ್ಯೂಟಿಫುಲ್ ಆಗಿ ಇರಬಹುದು ಅನ್ನೋದನ್ನು ಅಮೃತಾ ಪ್ರೂವ್ ಮಾಡುತ್ತಿದ್ದಾರೆ. ತಮ್ಮ ಪಾತ್ರದ ಲುಕ್‌ಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಅಮೃತಾ ಕಪ್ಪು ಬಣ್ಣದ ಡಿಸೈನರ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಸಿಂಪಲ್‌ ಲುಕ್‌ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಪವಿತ್ರಾ ಕಲ್ಮತ್‌ ಅಮೃತಾಗೆ ಮೇಕಪ್ ಮಾಡಿದ್ದಾರೆ, ಈ ಸೀರೆಯನ್ನು ಅನ್ವಿತಿ ಫ್ಯಾಷನ್ ಡಿಸೈನ್ ಮಾಡಿದ್ದಾರೆ ಹಾಗೂ ಡೈಮಾ ಫೋಟೋಗ್ರಾಫಿ ಕ್ಲಿಕ್ ಮಾಡಿದ್ದಾರೆ. 

ಏನ್ ಮೇಡಂ ನೀವು ಮಮ್ಮಿ ಆದ್ರೂ ಡುಮ್ಮಿ ಆಗಿಲ್ಲ...ನೀವು ಇಷ್ಟೋಂದು ಸಣ್ಣ ಇದ್ರೆ ನಮಗೆ ತುಂಬಾ ಕಾನ್ಶಿಯಸ್ ಆಗುತ್ತೆ ದಯವಿಟ್ಟು ಸ್ವಲ್ಪ ದಪ್ಪ ಆಗಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!