ಸೀತಾ ರಾಮ ಜೋಡಿಯ ರಿಯಲ್‌ ಲೈಫ್‌ ಮದುವೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಗುಸುಗುಸು

First Published May 25, 2024, 1:43 PM IST

ಜೀ ಕನ್ನಡ ಸೀರಿಯಲ್‌ ನಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ ನಲ್ಲಿ ಈಗ ಸೀತಾ ಮತ್ತು ರಾಮನ ಮದುವೆ ಮಾತುಕತೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ರೀಯಲ್ ಲೈಫಲ್ಲಿ ಈ ಜೋಡಿ ಮದ್ವೆಯಾದರೆ ಹೇಗಿರುತ್ತೆ ಎನ್ನುವ ಚರ್ಚೆ ಜೋರಾಗಿದೆ.  ಕಮೆಂಟ್ಸ್‌ಗಳು ಏನಿವೆ ನೀವೇ ನೋಡಿ

ಜೀ ಕನ್ನಡ ಸೀರಿಯಲ್‌ ನಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ ಪ್ರೇಕ್ಷಕರ ಮನ ಗೆದ್ದಿದೆ. ಈಗ ಸೀರಿಯಲ್‌ನಲ್ಲಿ ನಾಯಕ ಮತ್ತು ನಾಯಕಿಯ ಮದುವೆ ಮಾತುಕತೆ ನಡೆಯುತ್ತಿದೆ.  ಸೀತಾ ರಾಮ ರಿಯಲ್‌ ಲೈಫ್ ಜೋಡಿಯಾದ್ರೆ ಚಂದ ಅಂತ ಫ್ಯಾನ್ಸ್ ಬಯಸುತ್ತಿದ್ದಾರೆ.

ಇವರಿಬ್ಬರು ರಿಯಲ್‌ ಲೈಪ್‌ನಲ್ಲಿ ಮದುವೆಯಾದ್ರೂ ಸೂಪರ್‌ ಜೋಡಿ ಆಗಿರ್ತಾರೆ. ಕ್ಯೂಟ್‌ ಜೋಡಿ. ರಾಮ ಎಂಬ ಹೆಸರು ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಸೀರಿಯಲ್‌ ನಲ್ಲಿ ಮಾತ್ರವಲ್ಲ ರಿಯಲ್‌ ಆಗಿಯೂ ತುಂಬಾ ಚೆನ್ನಾಗಿದೆ ಈ ಜೋಡಿ.  ಮದುವೆ ಆಗೋಕು ಹಣೆಬರಹ ದಲ್ಲಿ ಹೆಸರು ಬರೆದಿರಬೇಕು... ಅಲ್ವಾ ಅಂತ ಮತ್ತೊಬ್ಬ ಅಭಿಮಾನಿ ಅಭಿಪ್ರಾಯ ಪಟ್ಟಿದ್ದಾರೆ. 

ಮತ್ತೊಬ್ಬ ಅಭಿಮಾನಿ ಕಮೆಂಟ್‌ ಮಾಡಿ, ಕೊಡುವ + ಗೌಡರು =ಕೊಗೌ ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಗಗನ್ ಕೊಡಗಿನವರು ಮತ್ತು ವೈಷ್ಣವಿ ಗೌಡ ಹೀಗಾಗಿ ಇವರಿಬ್ಬರು ಮದುವೆ ಯಾದರೆ ಚೆನ್ನ ಅಂದಿದ್ದಾರೆ.

ನಮಗೆಲ್ಲ ತುಂಬಾ ಸಂತೋಷ ಆಗುತ್ತೆ. ಮದುವೆ ಆಗುವ ಬಗ್ಗೆ ಅವರೇ ನಿರ್ಧರಿಸಬೇಕು. ಚೆನ್ನಾಗಿ ಇರುತ್ತೆ. ಸೂಪರ್‌ ಜೋಡಿ. ಮೇಡ್‌ ಫಾರ್ ಈಚ್ ಅದರ್‌ ಎಂದರೆಲ್ಲ ತರಹೇವಾರಿ ಕಮೆಂಟ್‌ ಬಂದಿದೆ.

ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್​​ ಅಭಿನಯದ ಈ ಸೀರಿಯಲ್‌ ಬಹಳ ಮೆಚ್ಚುಗೆ ಪಡೆದಿದೆ. ಈಗ ಈ ಧಾರವಾಹಿ ಮಲಯಾಳಂಗೆ ಡಬ್‌ ಆಗುತ್ತಿದೆ. 

Latest Videos

click me!