ಶಾರ್ವರಿ ಪಾತ್ರಕ್ಕೆ ನೇತ್ರಾ ಗುಡ್ ಬೈ, ಸ್ವಪ್ನಾ ಎಂಟ್ರಿ... ಸೀರಿಯಲ್ ಪ್ರೇಮಿಗಳು ಫುಲ್ ಶಾಕ್!

First Published | May 25, 2024, 12:08 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಶಾರ್ವರಿ ಪಾತ್ರಕ್ಕೆ ನೇತ್ರಾ ಜಾಧವ್ ಗುಡ್ ಬೈ ಹೇಳಿದ್ದು, ಸ್ವಪ್ನಾ ದೀಕ್ಷಿತ್ ಎಂಟ್ರಿ ಕೊಟ್ಟಿದ್ದಾರೆ. 
 

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತುವಿನಲ್ಲಿ (Shreerastu Shubhamastu) ಶಾರ್ವರಿ ಪಾತ್ರದಲ್ಲಿ ಇಲ್ಲಿವರೆಗೆ ನೇತ್ರಾ ಜಾಧವ್ ಅವರು ಅದ್ಭುತವಾಗಿ ನಟಿಸುತ್ತಿದ್ದರು. ಅವರ ನಟನೆ, ಮಾತನಾಡುವ ಶೈಲಿ ಮತ್ತು ವಿಲನ್ ಪಾತ್ರಕ್ಕೆ ಸೂಟ್ ಆಗು ಆಂಗಿಕ ಭಾಷೆ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. 
 

ಆದರೆ ಇದೀಗ ನೇತ್ರಾ (Netra Jadhav) ಪಾತ್ರವನ್ನು ಇಷ್ಟಪಡುತ್ತಿದ್ದ ವೀಕ್ಷಕರಿಗೆ ಒಂದು ಸ್ಯಾಡ್ ನ್ಯೂಸ್ ಇದೆ. ಅದೇನೆಂದರೆ ನೇತ್ರಾ ಜಾಧವ್ ಶಾರ್ವರಿ ಪಾತ್ರಕ್ಕೆ ಗುಡ್ ಬೈ ಹೇಳಿದ್ದಾರೆ. ಕೆಲದಿನಗಳಿಂದ ನೇತ್ರಾ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಕಾಣಿಸುತ್ತಿರಲಿಲ್ಲ, ಇದೀಗ ಆ ಪಾತ್ರಕ್ಕೆ ಬೇರೊಬ್ಬ ನಟಿಯ ಎಂಟ್ರಿಯಾಗಿದೆ. 
 

Tap to resize

ಝೀ ವಾಹಿನಿಯಲ್ಲಿ ಇದೀಗ ಹೊಸ ಪ್ರೋಮೋ ರಿಲೀಸ್ ಮಾಡಿದ್ದು, ಸ್ವಪ್ನಾ ದೀಕ್ಷಿತ್ ಅವರು ಶಾರ್ವರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವಪ್ನಾ ಈ ಹಿಂದೆ ಕಮಲಿ ಸೀರಿಯಲ್‌ನಲ್ಲಿ ರಿಷಿ ಸರ್ ತಾಯಿಯ ಪಾತ್ರ ಮಾಡಿದ್ದರು. ಶಾರ್ವರಿ ಪಾತ್ರದಲ್ಲಿ ನೇತ್ರಾ ಅವರನ್ನು ಒಪ್ಪಿಕೊಂಡಿದ್ದ ವೀಕ್ಷಕರಿಗೆ ಇದರಿಂದ ಬೇಸರವಾಗಿದೆ. 

ತಮ್ಮ ಬೇಸರವನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿರುವ ವೀಕ್ಷಕರು  ಹೇ ಶಾರ್ವರಿ ಕ್ಯಾರೆಕ್ಟರ್ ಗೆ ಈ ಮುಖ ಖಂಡಿತಾ ಒಪ್ಪಲ್ಲ. ಆ ಗತ್ತು ಗಾಂಭೀರ್ಯ ಇಲ್ಲ. ಶಾರ್ವರಿ ಇವರಿಗೆ ಒಪ್ಪಿಗೆ ಆಗ್ತಿಲ್ಲ, ಅವರೇ ಚೆನ್ನಾಗಿದ್ರು, ಮಿಸ್ ಯೂ ಶಾರ್ವರಿ ಮೇಡಂ ಎಂದಿದ್ದಾರೆ. 

ಮತ್ತೊಬ್ರು ಹಳೆಯ ಶಾರ್ವರಿ ಅವರ ನಟನೆ ತುಂಬಾನೆ ಚೆನ್ನಾಗಿತ್ತು. ಅವರನ್ನು ಯಾಕೆ ಬದಲಾಯಿಸಿದ್ದೀರಿ, ಇವರು ಈ ಪಾತ್ರಕ್ಕೆ ಸೂಟ್ ಆಗೋದೇ ಇಲ್ಲ. ನೇತ್ರಾ ಅವರು ಫೇಶಿಯಲ್ ಎಕ್ಸ್ ಪ್ರೆಶನ್, ಮಾತುಗಳೇ ಚೆನ್ನಾಗಿತ್ತು, ಸ್ವಪ್ನಾ ಅವರು ತುಂಬಾನೆ ವಯಸ್ಸಾದಂತೆ ಕಾಣಿಸುತ್ತಾರೆ ಎಂದು ಕಾಮೆಂಟ್ ಮಾಡಿದಾರೆ. 
 

ಮತ್ತೊಬ್ಬರು ಡೈರೆಕ್ಟರ್ ಸರ್...... ಶಾರ್ವರಿ ಮೇಡಂನ ಚೇಂಜ್ ಮಾಡೋವಂಥದ್ದು ಏನಾಗಿತ್ತು ಇವಾಗ? ಜನರು ಒಂದು ಕ್ಯಾರೆಕ್ಟರಿಗೆ ಹೊಂದ್ಕೊಂಡ್ ಇರ್ತಾರೆ. ಅದರಲ್ಲಿ ವಿಲನ್ ಆಗಿ ರೋಲ್ ಮಾಡ್ತಾ ಇರೋ ಶಾರ್ವರಿ ಮೇಡಂ ನೀವು ಚೇಂಜ್ ಮಾಡಿದ್ರೆ ಹೇಗೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
 

ಶಾರ್ವರಿ ಪಾತ್ರಕ್ಕೆ ಜೀವ ತುಂಬಿದ್ದ ನೇತ್ರಾ ಜಾಧನ್ ಸದ್ಯ ತೆಲುಗು ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಹುಶಃ ಡೇಟ್ಸ್ ಕೊಡೋದು ಕಷ್ವವಾಗಿ ಕನ್ನಡ ಸೀರಿಯಲ್ಸ್‌ಗೆ ಬೈ ಹೇಳಿರಬಹುದು ಎನ್ನಲಾಗುತ್ತಿದೆ. 

ಎಲ್ಲರೆದುರು ಅತ್ಯಂತ ಒಳ್ಳೆಯವಳಂತೆ ನಟಿಸುವ ಶಾರ್ವರಿಯೇ ಮಾಧವನ ಮೊದಲ ಪತ್ನಿಯನ್ನು ಆ್ಯಕ್ಸಿಡೆಂಟ್ ಮಾಡಿಸಿ, ಕೊಲ್ಲಿಸಿದ್ದು ಅಂತ ಗೊತ್ತಾಗಿದೆ. ಗಂಡನೇ ಇವಳನ್ನು ಇದೀಗ ಆಟವಾಡಿಸುತ್ತಿದ್ದಾನೆ. 

ತೆಲುಗಿನ ಮಗುವ ಓಮಗುವ ಸೀರಿಯಲ್ ನಲ್ಲಿ ಚೇಚಾಲಮ್ಮ ಎನ್ನುವ ಡೀವೋಶನಲ್ ಕ್ಯಾರೆಕ್ಟರ್‌ನಲ್ಲಿ ನಟಿಸುತ್ತಿದ್ದಾರೆ. ಇದು ಮುಖ್ಯ ಪಾತ್ರವೂ ಹೌದು, ಹಾಗಾಗಿ ಅವರು ಸೀರಿಯಲ್ ಬಿಟ್ಟಿರುವ ಸಾಧ್ಯತೆ ಇದೆ.

Latest Videos

click me!