ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚಿ ಗಿಲಿಗಿಲಿ ಚೆಲುವೆ ಪ್ರಿಯಾಂಕಾ; ಫೋಟೋ ವೈರಲ್

First Published | Dec 28, 2023, 5:00 PM IST

ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಮತ್ತು ಅಮಿತ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್. 

ಮಜಾ ಭಾರತಾ ಮತ್ತು ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದಲ್ಲಿ ಮಿಂಚಿರುವ ನಟಿ ಪ್ರಿಯಾಂಕಾ ಕಾಮತ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಅಮಿತ್ ನಾಯಕ್‌ ಮತ್ತು ಪ್ರಿಯಾಂಕಾ ಮಂಗಳೂರಿನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Tap to resize

ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಪ್ರಿಯಾಂಕಾ ಯುಟ್ಯೂಬ್ ಚಾನೆಲ್‌ ಕೂಡ ಆರಂಭಿಸಿದ್ದಾರೆ. ತಮ್ಮ ಮದುವೆ ಲೈವ್ ಪ್ರಸಾರ ಮಾಡಿದ್ದರು.

ಇದೇ ವರ್ಷ ಪುತ್ತೂರಿನಲ್ಲಿ ಪ್ರಿಯಾಂಕಾ ಕಾಮತ್ ಮತ್ತು ಅಮಿತ್ ನಾಯಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆರೋಗ್ಯ ಸಮಸ್ಯೆಗಳಿಂದ ಡಿಸೆಂಬರ್‌ನಲ್ಲಿ ಮದುವೆಯಾದರು.

ಪ್ರಿಯಾಂಕಾ ಕಾಮತ್ ಅನಾರೋಗ್ಯದಿಂದ ಬಳಲುತ್ತಿರುವ ಸಾಥ್ ಕೊಟ್ಟು ಪ್ರತಿಯೊಂದು ದಿನವೂ ಆಸ್ಪತ್ರೆಯಲ್ಲಿ ಇದ್ದು ನೋಡಿಕೊಂಡಿದ್ದರು ಅಮಿತ್. 

ಕೆಂಪು ಬಣ್ಣದ ಸೀರೆಗೆ ಹಸಿರು ಬಣ್ಣದ ಬ್ಲೌಸ್ ಮತ್ತು ದಾವಣಿ ಧರಿಸಿದ್ದಾರೆ. ರೇಶ್ಮೆ ಶೆಲ್ಯ ಮತ್ತು ಪಂಚೆಯಲ್ಲಿ ಅಮಿತ್ ಕಾಣಿಸಿಕೊಂಡಿದ್ದಾರೆ. ಲುಕ್ ಸಿಂಪಲ್ ಮತ್ತು ಎಲಿಗೆಂಟ್ ಆಗಿದೆ. 

Latest Videos

click me!