ಬಿಗ್ಬಾಸ್ 12ರ ಮಾಜಿ ಸ್ಪರ್ಧಿಗಳ ಸಮಾಗಮಕ್ಕೆ ಗೈರಾಗಿದ್ದಕ್ಕೆ ಕಾರಣ ತಿಳಿಸಿದ ನಟಿ ಗೌತಮಿ ಜಾಧವ್, ಈ ಬಾರಿಯ ಸೀಸನ್ 'ಒನ್ ಮ್ಯಾನ್ ಶೋ' ಆಗಿದೆ ಎಂದಿದ್ದಾರೆ. ಅಲ್ಲದೆ, 'ಗಿಲ್ಲಿ ನಟ' ಎಂದೇ ಖ್ಯಾತರಾದ ಸ್ಪರ್ಧಿಯೇ ಈ ಬಾರಿ ಗೆಲ್ಲುವುದು ಖಚಿತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಗ್ಬಾಸ್ 12 (Bigg Boss 12)ರಲ್ಲಿ ಇದಾಗಲೇ ಮಾಜಿ ಸ್ಪರ್ಧಿಗಳ ಎಂಟ್ರಿಯಾಗಿದೆ. ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿಯ ಸಲುವಾಗಿ ಇಂಥದ್ದೊಂದು ಈವೆಂಟ್ ಅನ್ನು ಬಿಗ್ಬಾಸ್ ಏರ್ಪಡಿಸಿದೆ. ಆದರೆ ಇದಕ್ಕೆ ಗೌತಮಿ ಜಾಧವ್ ಹೋಗಲಿಲ್ಲ.
27
ಗೌತಮಿ ಜಾಧವ್ ಹೋಗಿಲ್ಲವೇಕೆ?
ಇದೀಗ ಅದಕ್ಕೆ ಕಾರಣವನ್ನೂ ಹೇಳಿದ್ದಾರೆ ಸತ್ಯ ಸೀರಿಯಲ್ ಖ್ಯಾತಿಯ ಸತ್ಯಾ. ನಾನು ಊರಲ್ಲಿ ಇರಲಿಲ್ಲ, ನಿನ್ನೆ ಬಂದೆ. ಇಲ್ಲದಿದ್ದರೆ ನಾನೂ ಅಲ್ಲಿಗೆ ಹೋಗುತ್ತಿದ್ದೆ ಎಂದು ದೊಡ್ಮನೆಗೆ ಹೋಗದೇ ಇರುವ ಕಾರಣವನ್ನು ಹೇಳಿದ್ದಾರೆ.
37
ಬಿಗ್ಬಾಸ್ ವಿನ್ನರ್
ನನಗೆ ಈ ಬಾರಿಯ ಬಿಗ್ಬಾಸ್ ಫುಲ್ ನೋಡಲು ಆಗ್ತಿಲ್ಲ. ಅಲ್ಲೊಂದು ಇಲ್ಲೊಂದು ನೋಡ್ತಾ ಇದ್ದೇನೆ ಎಂದಿರೋ ಗೌತಮಿ ಜಾಧವ್ ಈ ಬಾರಿಯ ವಿನ್ನರ್ (Bigg Boss 12 Kannada winner) ಯಾರು ಎನ್ನುವುದನ್ನು ಹೇಳಿದ್ದು, ಇದನ್ನು ಸುದ್ದಿ ಸೈಕಲ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಬಿಗ್ಬಾಸ್ ಒನ್ ಮ್ಯಾನ್ ಷೋ ರೀತಿ ಆಗಿದೆ. ಅದೇ ಗಿಲ್ಲಿ ನಟ. ಆಫ್ಕೋರ್ಸ್ ಅವರೇ ಗೆಲ್ಲೋದು. ಎಲ್ಲಾ ಫ್ರೇಮ್ನಲ್ಲಿಯೂ ತುಂಬಾ ಎಂಟರ್ಟೇನ್ಮೆಂಟ್ ಮಾಡುತ್ತಿದ್ದಾರೆ ಎಂದು ಗೌತಮಿ ಹೇಳಿದ್ದಾರೆ.
57
ತುಂಬಾ ಚೆನ್ನಾಗಿ ಆಡ್ತಿದ್ದಾರೆ
ಗಿಲ್ಲಿ ನಟ (Bigg Boss Gilli Nata) ಅಲ್ಲೊಂದು ಇಲ್ಲೊಂದು ಕಡೆ ಕೆಲವರನ್ನು ಅಸಮಾಧಾನ ಮಾಡಿರುವುದು ಇದೆ. ಅದನ್ನು ಬಿಟ್ಟರೆ ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರೇ ಗೆಲ್ಲುವುದು ಎಂದು ಹೇಳಿದ್ದಾರೆ.
67
ಗೌತಮಿ ಬಗ್ಗೆ
ಗೌತಮಿ ಜಾಧವ್ (Gouthami Jadav) ʻಸತ್ಯʼ ಸೀರಿಯಲ್ ಮೂಲಕ ಫೇಮಸ್ ಆದವರು. ಟಾಮ್ ಬಾಯ್ ಲುಕ್‌ನಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದರು. ಆ ನಂತರ ದೊಡ್ಮನೆಗೆ ಗೌತಮಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು, ಸಖತ್ ಕೂಲ್ ಕಂಟೆಸ್ಟೆಂಟ್ ಅಂತಲೇ ಗಮನ ಸೆಳೆದಿದ್ದರು.
77
ಬಿಗ್ಬಾಸ್ ಬಗ್ಗೆ ನಟಿ
ಅಲ್ಲಿಯವರೆಗೆ ಗೌತಮಿ ಅವರನ್ನು ಸತ್ಯಾ ಸತ್ಯಾ ಎಂದೇ ಕರೆಯಲಾಗುತ್ತಿತ್ತು. ಈ ಬಗ್ಗೆ ಮಾತನಾಡಿದ್ದ ನಟಿ, ಈ ಹಿಂದೆ ನನ್ನನ್ನು ಪಾತ್ರವಾಗಿ ಗುರುತಿಸಿಸುತ್ತಿದ್ದರು. ಅದು ನನಗೆ ಖುಷಿಯಾಗುತ್ತಿತ್ತು. ಈಗ ನನ್ನನ್ನು ವ್ಯಕ್ತಿಯಾಗಿ ಗುರುತಿಸುತ್ತಿದ್ದಾರೆ” ಎಂದಿದ್ದರು.