Megha Shenoy Honeymoon : ಅಮೃತಧಾರೆ ನಟಿ ಮೇಘಾ ಶೆಣೈ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಹನಿಮೂನ್ ಮೂಡಲ್ಲಿದ್ದಾರೆ. ಪತಿ ಭರತ್ ಸಿಂಗ್ ಜೊತೆ ಬಾಲಿಗೆ ತೆರಳಿದ್ದು, ಅಲ್ಲಿನ ಸುಂದರ ಪ್ರಕೃತಿಯ ನಡುವೆ ಎಂಜಾಯ್ ಮಾಡ್ತಿದ್ದಾರೆ.
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಮೇಘಾ ಶೆಣೈ ಇತ್ತೀಚೆಗಷ್ಟೇ ತಮ್ಮ ಬಾಲ್ಯದ ಗೆಳೆಯ ಭರತ್ ಸಿಂಗ್ ಜೊತೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಪತಿ ಜೊತೆ ಹನಿಮೂನ್ ಗಾಗಿ ವಿದೇಶಕ್ಕೆ ಹಾರಿದ್ದಾರೆ ಚೆಲುವೆ.
28
ಭರತ್ ಸಿಂಗ್ ಜೊತೆ ಅದ್ದೂರಿ ವಿವಾಹ
ಮೇಘಾ ಶೆಣೈ ಮತ್ತು ಭರತ್ ಸಿಂಗ್ ವಿವಾಹವು ನವಂಬರ್ 10ರಂದು ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದೀಗ ಪತಿ ಜೊತೆಗೆ ಬಾಲಿಗೆ ಹಾರಿದ್ದು, ಅಲ್ಲಿನ ಬೀಚ್, ಸುಂದರ ಪ್ರಕೃತಿಯ ನಡುವೆ ನಟಿ ಪತಿ ಜೊತೆ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ.
38
ಪತಿ ಕುರಿತು ಏನು ಹೇಳಿದ್ರು ನಟಿ
ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳ ಜೊತೆಗೆ ನಟಿ ‘ನನ್ನ ಬಾಲ್ಯದ ಗೆಳತಿಯನ್ನು ಮದುವೆಯಾಗಿದ್ದೇನೆ... ಆದರೂ ಬಾಲಿ ಪ್ರವಾಸ ಬೆಸ್ಟ್ ಫ್ರೆಂಡ್ಸ್ ಟ್ರಿಪ್ ನಂತೆ ಭಾಸವಾಗುತ್ತಿದೆ... ಪ್ರಕೃತಿಯನ್ನು ಎಕ್ಸ್ ಪ್ಲೋರ್ ಮಾಡೋದು, ನೀರಿನ ಸಾಹಸಗಳನ್ನು ಬೆನ್ನಟ್ಟುವುದು ಮತ್ತು ನಾವು ಎಂದಿಗೂ ಮರೆಯಲಾಗದ ನೆನಪುಗಳನ್ನು ಸೃಷ್ಟಿಸುತ್ತಿದ್ದೇವೆ ಎಂದಿದ್ದಾರೆ ಮೇಘಾ ಶೆಣೈ. .
ಭರತ್ ಸಿಂಗ್ ಯಾರು? ಅವರ ಉದ್ಯೋಗದ ಬಗ್ಗೆ ಮಾಹಿತಿ ಇಲ್ಲ. ಆದರೆ ಇವರು ಉತ್ತರ ಭಾರತದ ಮೂಲದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಮೇಘಾ ಶೆಣೈ ಮತ್ತು ಭರತ್ ಸಿಂಗ್ ಬಾಲ್ಯದ ಸ್ನೇಹಿತರಾಗಿದ್ದು, ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ.
58
ಫೋಟೋಸ್ ವೈರಲ್
ಮೇಘಾ ಶೆಣೈ, ಮದುವೆಯ ವಿಡಿಯೋ, ಹಳದಿ ಸಮಾರಂಭದ ಫೋಟೊಗಳು,ನಿಶ್ಚಿತಾರ್ಥ ಹಾಗೂ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಟಿಗೆ ಮದುವೆಯ ಶುಭಾಶಯಗಳನ್ನೂ ಸಹ ಜನ ತಿಳಿಸಿದ್ದರು.
68
ನಟಿಯಾಗಿ ಎಂಟ್ರಿ ಕೊಟ್ಟದ್ದು ಯಾವಾಗ?
‘ಸುಂದರಿ' ಧಾರಾವಾಹಿಯ ಮೂಲಕ ನಟನೆ ಜರ್ನಿ ಶುರು ಮಾಡಿದ ಮೇಘಾ ಬಳಿಕ 'ಬ್ರಾಹ್ಮಿನ್ಸ್ ಕೆಫೆ', .ಜನುಮದ ಜೋಡಿ' ಧಾರಾವಾಹಿಯಲ್ಲಿ ಅಭಿನಯಿಸಿದರು. ನಂತ್ರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವೇರಿ' ಧಾರಾವಾಹಿಯಲ್ಲಿ ವಿಲನ್ ಆಗಿ ಸದ್ದು ಮಾಡಿದರು.
78
ಮೇಘಾ ಶೆಣೈ ನಟಿಸಿದ ಪ್ರಮುಖ ಧಾರಾವಾಹಿಗಳು
ಇದಲ್ಲದೇ 'ಮಹಾದೇವಿ' ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ, 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ, 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿ ಆಗಿ ಕಾಣಿಸಿಕೊಂಡಿದ್ದರು. ನಂತರ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ಅಮೃತಧಾರೆಯಲ್ಲಿ ಸುಧಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
88
ಅಮೃತಧಾರೆಗೆ ರೀ ಎಂಟ್ರಿ ಕೊಡ್ತಾರ?
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಸೀರಿಯಲ್ 5 ವರ್ಷಗಳ ಲೀಪ್ ತೆಗೆದುಕೊಂಡಿದೆ. ಹೊಸ ಅಧ್ಯಾಯ ಆರಂಭವಾದ ಬಳಿಕವಂತೂ ಸುಧಾ ಪಾತ್ರವನ್ನು ತೋರಿಸಿಯೇ ಇಲ್ಲ. ಇದೀಗ ಸುಧಾ ಪಾತ್ರಧಾರಿ ಮೇಘಾ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. ಹಾಗಾಗಿ ಮತ್ತೆ ಇವರು ಸೀರಿಯಲ್ ಗೆ ರೀ ಎಂಟ್ರಿ ಕೊಡ್ತಾರ? ಇಲ್ವಾ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡಿದೆ.