ಸರಿಗಮಪ ಲಿಟಲ್ ಚಾಂಪ್ಸ್ ಗ್ರ್ಗ್ಯಾಂಡ್ ಫಿನಾಲೆ :ಯಾರಾಗ್ತಾರೆ ವಿನ್ನರ್ ?

Published : Apr 14, 2023, 06:10 PM IST

ಸರಿಗಮಪ ಲಿಟಲ್ ಚಾಂಪ್ಸ್ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 15 ಮತ್ತು 16 ರಂದು  ಅಂತಿಮ ಸ್ಪರ್ಧೆಯ ನಡೆಯಲಿದೆ. ಅಗ್ರ ಆರು ಸ್ಪರ್ಧಿಗಳಾದ ಪ್ರಗತಿ ಬಿ ಬಡಗೀರ್, ತನುಶ್ರೀ, ಕುಶಿಕ್, ಶಿವಾನಿ, ರೇವಣ್ಣ ಸಿದ್ಧಿ ಮತ್ತು ಗುರುಪ್ರಸಾದ್ ನಡುವೆ ನಡೆಯಲಿದೆ.

PREV
17
ಸರಿಗಮಪ ಲಿಟಲ್ ಚಾಂಪ್ಸ್ ಗ್ರ್ಗ್ಯಾಂಡ್ ಫಿನಾಲೆ  :ಯಾರಾಗ್ತಾರೆ ವಿನ್ನರ್ ?

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಗ್ರಾಂಡ್ ಫಿನಾಲೆ ಹಂತ ತಲುಪಿದ್ದು, ಹಲವು ತಿಂಗಳ ಸಂಗೀತ ಸಮರಗಳ ಬಳಿಕ ಇದೀಗ ಅಧಿಕೃತವಾಗಿ ವಿನ್ನರ್ ಯಾರಾಗಲಿದ್ದಾರೆ ಅನ್ನೋದು ಇನ್ನೆರಡು ದಿನಗಳಲ್ಲಿ ತಿಳಿದು ಬರಲಿದೆ. 

27

ಸರಿಗಮಪ ಗ್ರಾಂಡ್ ಫಿನಾಲೆ ಏಪ್ರಿಲ್ 15 ಮತ್ತು 16 ರಂದು ಪ್ರಸಾರಗೊಳ್ಳಲಿದೆ. ಕಾರ್ಯಕ್ರಮ ಈಗಾಗಲೇ ಕೊಪ್ಪಳದಲ್ಲಿ ನಡೆದಿದ್ದು, ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಪ್ರಸಾರ ಮಾತ್ರ ಇನ್ನೆರಡು ದಿನ ನಡೆಯಲಿದೆ. 

37

ಪ್ರಗತಿ ಬಿ ಬಡಗೀರ್, ತನುಶ್ರೀ, ಕುಶಿಕ್, ಶಿವಾನಿ, ರೇವಣ್ಣ ಸಿದ್ಧಿ ಮತ್ತು ಗುರುಪ್ರಸಾದ್ ಈ ಆರು ಜನರು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಂಡ್ ಫಿನಾಲೆಯಲ್ಲಿ (Grand finale) ಈ ಆರು ಜನರ ನಡುವೆ ಸ್ಪರ್ಧೆ ನಡೆಯಲಿದ್ದು, ಯಾರು ವಿಜೇತರಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಈಗಾಗಲೇ ಪ್ರೇಕ್ಷಕರು ವಿಜೇತರನ್ನು ಗೆಸ್ ಮಾಡುತ್ತಿದ್ದಾರೆ.

47

ಸರಿಗಮಪ  ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಒಬ್ಬ ಮಹಾಗುರು, ಇಬ್ಬರು ಜಡ್ಜ್ ಮತ್ತು ಹಲವು ಸಂಗೀತ ದಿಗ್ಗಜರು ಮೆಂಟರ್ ಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿವರೆಗೂ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆ. 

57

ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾದ ಮಹಾಗುರು ಹಂಸಲೇಖ, ಇವರ ಜೊತೆ ಜಡ್ಜ್‌ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ಹಾಗೂ ನಿರೂಪಕಿ ಅನುಶ್ರೀ ಇರಲಿದ್ದು, ಟಾಪ್ 6 ಕಂಟೆಸ್ಟಂಟ್ ಗಳ (top 6 contestant) ಜೊತೆಗೆ, ಉಳಿದ ಮಕ್ಕಳು ಸಹ ಪ್ರೇಕ್ಷಕರಿಗೆ ಹಾಡಿನ ರಸದೌತಣ ನೀಡಲು ಸಜ್ಜಾಗಿದ್ದಾರೆ.

67

ಸರಿಗಮಪ ಲಿಟಲ್ ಚಾಂಪ್ಸ್ ಗ್ರ್ಗ್ಯಾಂಡ್ ಫಿನಾಲೆ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಸಂಜೆ 6.30 ಕ್ಕೆ ಪ್ರಸಾರವಾಗಲಿದೆ. ಆರು ಜನ ಸ್ಪರ್ಧಿಗಳು ಸಹ ಇಲ್ಲಿವರೆಗೆ ತಮ್ಮ ಅದ್ಭುತ ಗಾಯನದ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಸೆಮಿಫೈನಲ್ ನಲ್ಲೂ ಕಠಿಣ ಸ್ಪರ್ಧೆ ನೀಡಿದ್ದಾರೆ.
 

77

ಈಗಾಗಲೇ 18 ಸೀಸನ್ ಗಳನ್ನು ಮುಗಿಸಿರುವ ಸರಿಗಮಪ ಕರ್ನಾಟಕಕ್ಕೆ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಲವಾರು ಅದ್ಭುತ ಗಾಯಕರನ್ನು ಕೊಟ್ಟಿದೆ ಎಂದರೆ ತಪ್ಪಾಗಲಾರದು. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ರ ವಿನ್ನರ್ ಪಟ್ಟ ಯಾರ ಮುಡಿಗೇರಲಿದೆ ಕಾದು ನೋಡಬೇಕು… 

Read more Photos on
click me!

Recommended Stories