ಸ್ವಪ್ನ ಕೃಷ್ಣ ನಿರ್ದೇಶನದ ಹೊಸ ಸೀರಿಯಲ್ ‘ಅಂತರಪಟ’ ದ (Antarapata) ಮೊದಲ ಪ್ರೋಮೋ ಬಿಡುಗಡೆಯಾಗಿ ಕೆಲವು ಸಮಯದಲ್ಲೇ ಇದೀಗ ಎರಡನೇ ಪ್ರೋಮೋ ಬಿಡುಗಡೆಯಾಗಿದ್ದು, ನಾಯಕನ ಎಂಟ್ರಿಯ ಪ್ರೋಮೋ ಇದಾಗಿದೆ.
ಸೀರಿಯಲ್ ನಟಿ ನೇಹಾ ಗೌಡ ಅವರ ಪತಿ ಹೊಸ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಈಗ ಪ್ರೋಮೋ ಬಿಡುಗಡೆಯಾದ ಮೇಲೆ ಆ ಮಾತು ಸತ್ಯ ಅನ್ನೋದು ತಿಳಿದು ಬಂದಿದೆ. ನಾಯಕನಾಗಿ ಚಂದನ್ ಗೌಡ ಕಾಣಿಸಿಕೊಂಡಿದ್ದಾರೆ.
ಪ್ರೋಮೋದಲ್ಲಿ ಆಗರ್ಭ ಶ್ರೀಮಂತ ಸುಶಾಂತ್ ರಾಜ್ ಪ್ರಧಾನ್ ಪಾತ್ರದಲ್ಲಿ ಚಂದನ್ ಕಾಣಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿ, ತಲೇಲಿ ನೂರಾರು ಐಡಿಯಾ, ಲೈಫಲ್ಲಿ ಝೀರೋ ಕ್ಲಾರಿಟಿ ಇರೋ ನಾಯಕ ಸುಶಾಂತ್. ಇವನ ಜೀವನದಲ್ಲಿ ನಾಯಕಿ ಎಂಟ್ರಿ ಹೇಗಾಗುತ್ತೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ಜೀವನದಲ್ಲಿ ಏನಾಗಬೇಕೆಂದು ಬಯಸ್ತಿಯಾ? ಒಂದು ವಾರದಲ್ಲಿ ಡಿಸೈಡ್ ಮಾಡಿ ಹೇಳು ಎಂದು ಹೇಳುವ ಅಪ್ಪ… ಸಾವಿರ ಐಡಿಯಾ ಇದ್ದರೂ ಯಾವುದರಲ್ಲೂ ಕ್ಲಾರಿಟಿ ಇಲ್ಲದ ಮಗನ ಪಾತ್ರದಲ್ಲಿ ಚಂದನ್ ಮುದ್ದು, ಪೆದ್ದಾಗಿ ಕಾಣಿಸಿಕೊಂಡಿದ್ದಾರೆ.
ಜ್ಯುವೆಲ್ಲರಿಗಳನ್ನೆಲ್ಲಾ (jewellery)ನೋಡಿ ನಾನು ಸುಶಾಂತ್ ರಾಜ್ ಜ್ಯುವೆಲ್ಲರಿ ಸ್ಟಾರ್ಟ್ ಮಾಡಿದ್ರೆ ಹೇಗೆ ಎಂದು ಕೇಳ್ತಾನೆ. ಇದನ್ನು ಕೇಳಿದ ಅಕ್ಕ, ಭಾವ ಉದ್ದಾರ ಎಂದು ಹೇಳ್ತಾರೆ. ಅಂದ್ರೆ ಅವನು ಜೀವನದಲ್ಲಿ ಎಷ್ಟು ಕೇರ್ ಲೆಸ್ ಆಗಿದ್ದಾನೆ ಅನ್ನೋದನ್ನು ತಿಳಿಸುತ್ತೆ.
ಇನ್ನೊಬ್ರು ಥೇಟ್ ಹೀರೋ ತರಾನೆ ಇದ್ಯಾ ಸಿನಿಮಾ ಯಾಕೆ ಮಾಡಬಾರದು ಎನ್ನುತ್ತಾರೆ. ಆವಾಗ ಸುಶಾಂತ್ ಹೀರೋ ಆಗಿ ಇಮ್ಯಾಜಿನ್ ಮಾಡ್ತಾನೆ. ಮತ್ತೆ ಇನ್ನೊಬ್ರು ಬಂದು ಅದೊಂದು ಬೇಡ ಬೇರೆ ಏನ್ ಬೇಕಾದ್ರೂ ಮಾಡು ಅಂತಾರೆ. ಅದೂ ಕೂಡ ಫ್ಲಾಪ್.
ಮತ್ತೊಂದು ಕಡೆ ಫುಡ್ ಮಾಡೋದು ನೋಡಿ ಮಧ್ಯ ರಾತ್ರಿ ಹಸಿವಾಗೋರಿಗೆ ಸುಶಾಂತ್ ರಾಜ್ ನೈಟ್ ಕೆಫೆ ಅನ್ನೋದನ್ನು ಸ್ಟಾರ್ಟ್ ಮಾಡಿದ್ರೆ ಹೇಗೆ ಅಂತಾನೆ… ಸ್ವಲ್ಪ ಹೊತ್ತಾದ್ ಮೇಲೆ ದಿನಪೂರ್ತಿ ಕೆಲಸ ಮಾಡಿ ಟಯರ್ಡ್ ಆಗಿರುತ್ತೆ, ನೈಟ್ ಪಾರ್ಟಿ ಮಾಡ್ಬೇಕು. ಈ ಐಡಿಯಾನೂ ಬೇಡ ಅಂತಾನೆ.
ಒಂದೆಡೆ ಜೀವನದಲ್ಲಿ ಬಂದ ಕಷ್ಟಗಳನ್ನೆಲ್ಲಾ ಹಿಂದಿಕ್ಕಿ, ಸಾಧನೆ ಮಾಡುವ ನಾಯಕಿ. ಮತ್ತೊಂದೆಡೆ ಆಗರ್ಭ ಶ್ರೀಮಂತನಾದರೂ ಜೀವನದಲ್ಲಿ ಏನು ಮಾಡಬೇಕೆಂಬ ಕ್ಲಾರಿಟಿ ಇಲ್ಲದ ನಾಯಕ. ಇಬ್ಬರ ನಡುವೆ ಹೇಗೆ ಪ್ರೀತಿ ಬೆಳೆಯುತ್ತೆ ಕಾದು ನೋಡಬೇಕು.
ಕಲರ್ಸ್ ಕನ್ನಡದಲ್ಲಿ (Colors Kannada) ಯಾವ ಸೀರಿಯಲ್ ಮುಗಿಯಲಿದೆ ಗೊತ್ತಿಲ್ಲ. ಆದರೆ ಇದೀಗ ಈ ಹೊಸ ಸೀರಿಯಲ್ ಅಂತರಪಟ ಏಪ್ರಿಲ್ 24 ರಿಂದ ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ ಎಂದು ಪ್ರೋಮೋದಲ್ಲಿ ತಿಳಿಸಲಾಗಿದೆ. ಯಾವುದಕ್ಕೂ ಸೀರಿಯಲ್ ಅಭಿಮಾನಿಗಳು ಏಪ್ರಿಲ್ 24ರವರೆಗೆ ಕಾದು ನೋಡಬೇಕು.