ಪಿಂಕ್ ಲೆಹೆಂಗಾದಲ್ಲಿ ಮಿಂಚಿದ ಮೇಘಾ ಶೆಟ್ಟಿ: ಅಪ್ಸರೆ ನಿಮ್ಮಂದಕೆ ನಾಚಬಹುದು ಎಂದ ಫ್ಯಾನ್

Published : Apr 13, 2023, 06:10 PM IST

ಕಿರುತೆರೆ ಮತ್ತು ಹಿರಿತೆರೆ ಎರಡೂ ಕಡೆಗಳಲ್ಲೂ ಮಿಂಚುತ್ತಿರುವ ನಟಿ ಮೇಘಾ ಶೆಟ್ಟಿ, ಇದೀಗ ಹೊಸದೊಂದು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಈ ಫೋಟೋಗಳಲ್ಲಿ ಮೇಘಾ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. 

PREV
17
ಪಿಂಕ್ ಲೆಹೆಂಗಾದಲ್ಲಿ ಮಿಂಚಿದ ಮೇಘಾ ಶೆಟ್ಟಿ: ಅಪ್ಸರೆ ನಿಮ್ಮಂದಕೆ ನಾಚಬಹುದು ಎಂದ  ಫ್ಯಾನ್

ಅನು ಸಿರಿಮನೆ ಅನ್ನೋ ಹೆಸರಿನ ಮೂಲಕವೇ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ ನಟಿ ಮೇಘಾ ಶೆಟ್ಟಿ (Megha Shetty). ತಮ್ಮ ಮೊದಲ ಸೀರಿಯಲ್ ಜೊತೆಜೊತೆಯಲಿ ಮೂಲಕವೇ ಜನಮನ ಗೆದ್ದ ಈ ನಟಿ, ಅಷ್ಟರೊಳಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿಯಾಗಿದೆ. 

27

ಜೊತೆ ಜೊತೆಯಲಿ ಸೀರಿಯಲ್ (Jote Joteyali serial)ನಲ್ಲಿ ತನಗಿಂತ ಡಬಲ್ ವಯಸಿನ ವ್ಯಕ್ತಿಯನ್ನು ಮದುವೆಯಾಗುವ, ಮುಂದೆ ಬ್ಯುಸಿನೆಸ್ ಜವಾಬ್ಧಾರಿಯನ್ನು ಹೊರುವ ಪ್ರಬುದ್ಧ ನಾಯಕಿಯಾಗಿ ಮೇಘಾ ಶೆಟ್ಟಿ ಸೀರಿಯಲ್ ಉದ್ದಕ್ಕೂ ಅದ್ಭುತ ಅಭಿನಯದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 

37

ಸದಾ ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟಿವ್ ಆಗಿರುವ ನಟಿ ಮೇಘಾ ಶೆಟ್ಟಿ ಇದೀಗ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ನಸು ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟು ರಾಣಿಯಂತೆ ಮಿಂಚುತ್ತಿದ್ದಾರೆ ಮೇಘಾ. 

47

ಮೇಘಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ (instagram) ಫೋಟೋ ಶೂಟ್ ನ ಸೀರಿಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ, ನಟಿ ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಬ್ಯಾಕ್ ಗ್ರೌಂಡ್‌ ನಲ್ಲಿ ಪ್ಯಾಲೇಸ್ ಸೆಟ್ ಇದ್ದು, ಮೇಘಾ ಮಹಾರಾಣಿಯಂತೆ ಕಾಣಿಸುತ್ತಿದ್ದಾರೆ. 

57

ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ವಿನ್ಯಾಸದ ಲೆಹೆಂಗಾದಲ್ಲಿ ಮೇಘಾ ಮಿಂಚಿದರೆ, ಪ್ರಶಾಂತ್ ಮೇಕ್ ಓವರ್ ಹೇರ್ ಮತ್ತು ಮೇಕಪ್ ಮಾಡಿದ್ದಾರೆ. ರಾಜ್ ಡೈಮಂಡ್ ಜ್ಯುವೆಲ್ಲರಿಯಲ್ಲಿ ಲಕ್ಸುರಿ ಲುಕ್ ಪಡೆದಿದ್ದು, ಈ ಸುಂದರವಾದ ಫೋಟೋ ಶೂಟ್ ನ್ನು ಡಿವೈನ್ ಫೋಟೋಗ್ರಾಫಿಯವರು ಮಾಡಿದ್ದಾರೆ. 
 

67

ಇನ್ನು ಮೇಘಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡಿದ್ದು, ಹೆಚ್ಚಿನ ಜನರು ರಾಣಿಯಂತೆ ಕಾಣುತ್ತಿದ್ದೀರಿ ಎಂದ್ರೆ, ಇನ್ನೂ ಕೆಲವರು ಸ್ವರ್ಗ ಲೋಕದ ಅಪ್ಸರೆ ಹೇಗಿದ್ದಾರೋ ಗೊತ್ತಿಲ್ಲ, ಆದ್ರೆ ನಿಮ್ಮನ್ನ ನೋಡಿದ್ರೆ ಅಪ್ಸರೆ ಕೂಡ ನಾಚೋದು ಖಂಡಿತಾ ಎಂದು ಬರೆದುಕೊಂಡಿದ್ದಾರೆ. 

77

ಕೇವಲ ಇನ್ಸ್ಟಾಗ್ರಾಂನಲ್ಲೇ ಒಂದು ಮಿಲಿಯನ್ ಅಭಿಮಾನಿಗಳನ್ನು ಪಡೆದಿರುವ ಮೇಘಾ ಶೆಟ್ಟಿ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಇವರಿಗೆ, ಕನ್ನಡ ಸಿನಿಮಾದಿಂದ ಸಾಕಷ್ಟು ಆಫರ್ ಗಳು ಸಹ ಬರುತ್ತಿವೆ. ಸದ್ಯ ಜೊತೆಜೊತೆಯಲ್ಲಿ ನಟಿಸುತ್ತಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories