ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅರುಣ್ ಸಾಗರ್; ಮತ್ತೊಂದು ಬಿಗ್ ಶಾಕ್

Published : Dec 25, 2022, 02:18 PM IST

ಬಿಗ್ ಬಾಸ್ ಮನೆಯಲ್ಲಿ ನಡೆಯಿತ್ತು ಡಬಲ್ ಎಲಿಮಿನೇಷನ್. ಅರುಣ್ ಸಾಗರ್‌ ಹೊರ ಬರುತ್ತಿದ್ದಂತೆ ನೆಟ್ಟಿಗರು ಶಾಕ್....

PREV
16
ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅರುಣ್ ಸಾಗರ್; ಮತ್ತೊಂದು ಬಿಗ್ ಶಾಕ್

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಅರುಣ್ ಸಾಗರ್ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀಸನ್ 9 ಬಿಗ್ ಬಾಸ್ ರಿಯಾಲಿಟಿ ಸೋನಲ್ಲಿ ಸ್ಪರ್ಧಿಸುತ್ತಿದ್ದು ಇಂದು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. 

26

ಬಿಗ್ ಬಾಸ್ ಮೊದಲ ಸೀಸನ್‌ನಲ್ಲಿ ಅರುಣ್ ಸಾಗರ್ ಸ್ಪರ್ಧಿಸಿದ್ದರು ಹೀಗಾಗಿ ಸೀಸನ್ 9ಕ್ಕೆ ಪ್ರವೀಣರ ಪಟ್ಟಿಯಲ್ಲಿ ದೊಡ್ಡ ಮನೆ ಪ್ರವೇಶಿಸಿದ್ದರು.

36

ಆಟ ಮಾತ್ರವಲ್ಲದೆ ಮನೋರಂಜನೆಯಲ್ಲೂ ಅರುಣ್ ಫಸ್ಟ್‌ ಇದ್ದು. ಅರುಣ್ ಕ್ರಿಯೇಟ್ ಮಾಡುತ್ತಿದ್ದ ವಿಭಿನ್ನ ವೇಷ ಭೂಷಣಗಳು ವೀಕ್ಷಕರ ಗಮನ ಸೆಳೆಯುತ್ತಿದ್ದರು. 

46

ಫಿನಾಲೆ ದಿನಕ್ಕೆ ಕೇವಲ 7 ದಿನಗಳು ಇರುವಾಗ ಮನೆಯಿಂದ ಅರುಣ್ ಸಾಗರ್ ಹೊರ ಬಂದಿದ್ದಾರೆ.ಈ ಸೀಸನ್‌ನಲ್ಲಿ ಅರುಣ್ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. 

56

ಕೆಲವು ದಿನಗಳ ಹಿಂದೆ ಮಗಳಿಗೆ ಹುಷಾರಿಲ್ಲ ಎಂದು ಅರುಣ್ ಸಾಗರ್ ಮನೆಯಿಂದ ಹೊರ ನಡೆದು ಆಪರೇಷನ್‌ ಮುಗಿಸಿಕೊಂಡು ಮತ್ತೆ ರೀ-ಎಂಟ್ರಿ ಆಗಿದ್ದರು.

66

 ಶನಿವಾರ ಅಮೂಲ್ಯ ಗೌಡ ಬಿಗ್ ಬಾಸ್‌ ಮೆನಯಿಂದ ಹೊರ ಬಂದಿದ್ದಾರೆ, ಭಾನುವಾರ ಅರುಣ್ ಸಾಗರ್ ಬಂದಿದ್ದಾರೆ. ಅರುಣ್  ಎಲಿಮಿನೇಟ್ ಆಗಿರುವುದು ವೀಕ್ಷಕರಿಗೆ ಕೊಂಚ ಬೇಸರವಾಗಿದೆ. 

Read more Photos on
click me!

Recommended Stories