ಹಣಕ್ಕಾಗಿ ಮನುಷ್ಯತ್ವ ಮರೆತ ಸಂತೋಷ್ : ಇಂಥ ಮಗ ಯಾರಿಗೂ ಬೇಡಪ್ಪ ಅಂತ ಬೇಡ್ಕೊಂಡ ವೀಕ್ಷಕರು

First Published | Nov 23, 2024, 3:36 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹಣಕ್ಕಾಗಿ ಮನುಷ್ಯತ್ವವನ್ನು ಮರೆತು ವೆಂಕಿ ಮೇಲೆ ದಾಳಿ ಮಾಡಿದ ಸಂತೋಷ್ ನಂತಹ ಮಗ ಯಾರಿಗೂ ಬೇಡಪ್ಪ ಅಂತಿದ್ದಾರೆ ವೀಕ್ಷಕರು.
 

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸಂತೋಷ್’ನ ಅತಿಯಾದ ವರ್ತನೆಯಿಂದ ಈಗಾಗಲೇ ವೀಕ್ಷಕರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ. ಇದೀಗ ಮತ್ತೊಮ್ಮೆ ಈ ಸ್ವಾರ್ಥಿ ಸಂತೋಷ್, ಹಣಕ್ಕಾಗಿ ವೆಂಕಿ ಜೊತೆ ಜಗಳ ಮಾಡುವ ಮೂಲಕ, ಆತನನ್ನೆ ಮನೆ ಬಿಟ್ಟು ಹೊರಗೆ ಕಳುಹಿಸುವ ಯೋಚನೆ ಮಾಡಿದ್ದಾನೆ. 
 

ಶ್ರೀನಿವಾಸ್ ತನ್ನ ರಿಟೈರ್ ಮೆಂಟ್ ಹಣದ ಜೊತೆಗೆ ಮತ್ತಷ್ಟು ಹಣ ಸೇರಿಸಿ, ತಮ್ಮದೇ ಆದ ಕನಸಿನ ಮನೆ ಕಟ್ಟುವ ಯೋಚನೆಯಲ್ಲಿರ್ತಾರೆ, ಆದ್ರೆ ಅಪ್ಪನ ಬಳಿ ಹಣ ಇರೋದು ಗೊತ್ತಾಗಿ ಸಂತೋಷ್, ಮೋಸದಿಂದ ತನ್ನ ಹಣ ಯಾರೋ ಕದ್ದುಕೊಂಡು ಹೋಗಿದ್ದಾರೆ ಎನ್ನುತ್ತಾ, ಅಪ್ಪನಿಂದ ಐದು ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾನೆ. 
 

Tap to resize

ಇನ್ನೊಂದೆಡೆ ಹರೀಶ್ ಕೂಡ ಮತ್ಯಾವುದೋ ಉಪಾಯ ಮಾಡಿ ಅಪ್ಪನಿಂದ 5 ಲಕ್ಷ ಪಡೆದುಕೊಂಡರೆ, ಸಂತೋಷ್ ಹೇಳಿದ ಉಪಾಯದಿಂದ ಮಗಳು ಮಂಗಳ ಕೂಡ ತನ್ನ ಯಜಮಾನನ ಮೇಲೆ ಎಲ್ಲಾ ದೂರನ್ನು ಹಾಕಿ 5 ಲಕ್ಷ ಪಡ್ಕೋಳ್ತಾಳೆ. ಇನ್ನು ಉಳಿದ ಮೂರು ಮಕ್ಕಳಿಗೂ ಹಣ ಸಮಾನವಾಗಿ ಹಂಚಬೇಕು ಎಂದು ಬ್ಯಾಂಕ್ ನಿಂದ ಹಣ ತೆಗೆದುಕೊಂಡು ಬರ್ತಾರೆ ಶ್ರೀನಿವಾಸ್. 
 

ಅಪ್ಪ ವೆಂಕಿಗೆ ಹಣ ಕೊಡೋದನ್ನು ನೋಡಿ ಸಹಿಸದ ಸಂತೋಷ್, ಅವನು ನಮ್ಮ ಒಡ ಹುಟ್ಟಿದವನು ಅಲ್ವೇ ಅಲ್ಲ. ಅವನಿಗೆ ಯಾಕೆ ಹಣ ಕೊಡಬೇಕು. ಅದಕ್ಕೆ ನಾನು ಅವಕಾಶ ಕೊಡೋದಿಲ್ಲ, ಅವನಿಗೆ ಒಂದು ರೂಪಾಯಿ ಕೂಡ ಕೊಡಬಾರದು, ಅವನು ಇಲ್ಲೇ ಇದ್ರೆ ಆಸ್ತಿಯಲ್ಲೂ ಭಾಗ ಕೇಳುತ್ತಾನೆ ಎನ್ನುತ್ತಾ ಆತನನ್ನು ಮನೆಯಿಂದ ಆಚೆ ಕಳುಹಿಸಬೇಕು ಎಂದು ಜಗಳ ಮಾಡುತ್ತಾನೆ. 
 

ಸಂತೋಷನ ಈ ಕೆಟ್ಟ ವರ್ತನೆ ನೋಡಿ ಲಕ್ಷ್ಮೀ ಶ್ರೀನಿವಾಸರೂ ಶಾಕ್ ಆಗಿದ್ದಾರೆ. ಜೊತೆಗೆ ವೀಕ್ಷಕರು ಕೂಡ ಛೀ ಥೂ ಅನ್ನುತ್ತಿದ್ದಾರೆ. ಥೂ ಇಂಥ ಮಕ್ಕಳು ಬೇಕಾ, ವೆಂಕಿ ಅಂಥ ಒಬ್ಬ ಮಗ ಇದ್ರೆ ಸಾಕು, ಸಂತೋಷ್ ನಂತಹ ಮಗ ಯಾರಿಗೂ ಬೇಡಪ್ಪ ಎಂದು ಕೇಳಿಕೊಳ್ಳುತ್ತಿದ್ದಾರೆ ಜನ. 
 

ಅಷ್ಟೇ ಅಲ್ಲ ಕರ್ಮ ನಿನ್ನ ಯಾವತ್ತೂ ಬಿಡಲ್ಲ ಸಂತು, ನಿನ್ನ ಪಾಪದ ಕೊಡ ಇನ್ನೂ ತುಂಬಿಲ್ಲ, ಮುಂದೆ ಒಂದಿನ ನಿನಗೆ ನಿನ್ನ ತಪ್ಪಿನ ಅರಿವಾಗುತ್ತೆ ಎಂದಿದ್ದಾರೆ. ಇಂಥ ಕೆಟ್ಟ ಮಕ್ಕಳು ಯಾವ ತಂದೆ ತಾಯಿಗ್ ಬೇಡ, ಮಕ್ಕಳು ಇಲ್ಲದೆ ಇದ್ದರೂ ಪರವಾಗಿಲ್ಲ ಎನ್ನುತ್ತಿದ್ದಾರೆ. ವೆಂಕಿ ಅಣ್ಣನಾ ನೋಡಿ ಕಲೀರಿ, ಸಂತೋಷ, ಮಂಗಳಾ, ಹರೀಶ್ ಥು ಅಪ್ಪನಿಗೆ ಮೋಸ ಮಾಡ್ತೀರಾ ಎಂದು ಟೀಕಿಸಿದ್ದಾರೆ. 
 

ಮಾತು ಬರದಿದ್ದರೂ, ಕಿವಿ ಕೇಳದೇ ಇದ್ದರೂ, ಪ್ರೀತಿ ಗುಣದಲ್ಲಿ ಶ್ರೀಮಂತ ನಮ್ಮ ವೆಂಕಿ ಅಣ್ಣ. ಹಣ ಹಣ ಅಂತ ಸಾಯ್ತಾರೆ ಇವರು, ಎಂಥ ನಾಚಿ ಕೆಟ್ಟ ಮಕ್ಕಳು, ನಾಚಿಕೆ ಆಗಬೇಕು ಸಂತು ನಿನಗೆ. ಈ ಸಂತೋಷ್ ಮನೆಬಿಟ್ಟು ಹೋಗಬೇಕು ಆವಾಗ ಮನೆಯಲ್ಲಿ ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯ ಆಗುತ್ತೆ. ಅದೇ ರೀತಿ ಈ ರೀತಿ ಪೋಷಕರು ಸಹ ಇರಬಾರದು, ಸಂತು ಕೆನ್ನೆಗೆ ಎರಡು ಬಾರಿಸೋಕೆ ಆಗಲ್ವಾ ಅಂತಾನೂ ಕೇಳಿದ್ದಾರೆ. ಜೊತೆಗೆ ಈ ಸೀರಿಯಲ್ ನಿಲ್ಲಿಸಿ, ಇದರಿಂದ ಸಂತೋಷ್ ನಂತಹ ಮಕ್ಕಳು ಸಮಾಜದಲ್ಲಿ ಹುಟ್ಟಿಕೊಳ್ತಾರೆ ಅಂತಾನೂ ಹೇಳಿದ್ದಾರೆ. 
 

Latest Videos

click me!