ಸದ್ಯ ಸೀರಿಯಲ್ ಬಿಟ್ಟ ಮೇಲೆ ನಟಿ ಸಂಜನಾ ಬುರ್ಲಿ ಸೋಶಿಯಲ್ ಮೀಡಿಯಾ, ಟ್ರಾವೆಲ್ ಎನ್ನುತ್ತಾ ಬ್ಯುಸಿಯಾಗಿದ್ದಾರೆ, ಜೊತೆಗೆ ತಮ್ಮ ಪ್ರತಿಯೊಂದು ಆಗು ಹೋಗುಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಟಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪಾತ್ರ, ಕೊನೆಯ ಕ್ಷಣ, ತೆರೆಮರೆಯ ದೃಶ್ಯಗಳನ್ನು ಹಂಚಿಕೊಂಡಿದ್ದರು.