ಕಾಸ್ಟಿಂಗ್ ಕೌಚ್‌ ವೀಡಿಯೊ ಲೀಕ್ ಆದ ನಟಿ ಶ್ರುತಿ ನಾರಾಯಣನ್‌ ಅವರ ಚಂದದ 10 ಫೋಟೊಗಳು!

ವೈರಲ್ ವಿಡಿಯೋ ನಂತರ ದಕ್ಷಿಣ ಭಾರತದ ನಟಿ ಶ್ರುತಿ ನಾರಾಯಣನ್ ಸೋಶಿಯಲ್‌ ಮೀಡಿಯಾಕ್ಕೆ ವಾಪಸಾಗಿದ್ದಾರೆ. ಹೊಸ ಫೋಟೋಗಳನ್ನು ಅವರು ಹಂಚಿಕೊಂಡಿದ್ದರೂ, ಕಾಮೆಂಟ್‌ ಸೆಕ್ಷನ್‌ಅನ್ನು ಸಂಪೂರ್ಣವಾಗಿ ಆಫ್‌ ಮಾಡಿದ್ದಾರೆ.ಇನ್ನು ಅವರ ವೈರಲ್‌ ವೀಡಿಯೊದ ತನಿಖೆ ಮುಂದುವರೆದಿದೆ.

Shruthi Narayanan Casting Couch Controversy and Career Highlights san

ದಕ್ಷಿಣ ಭಾರತದ ನಟಿ ಶ್ರುತಿ ನಾರಾಯಣನ್ ಸುದ್ದಿಯಲ್ಲಿದ್ದಾರೆ. ತಮಿಳು ಚಿತ್ರಗಳಲ್ಲಿ ಕೆಲಸ ಮಾಡುವ ನಟಿಯ ಕಾಸ್ಟಿಂಗ್ ಕೌಚ್ ವಿಡಿಯೋ ವೈರಲ್ ಆಗುತ್ತಿದೆ. ಈ ನಡುವೆ ಶ್ರುತಿ ನಾರಾಯಣನ್‌ ಸೋಶಿಯಲ್‌ ಮೀಡಿಯಾಕ್ಕೆ ವಾಪಸಾಗಿದ್ದಾರೆ.

ಕಾಸ್ಟಿಂಗ್‌ ಕೌಚ್ ವಿಡಿಯೋ ವಿವಾದದ ನಡುವೆಯೇ ಶ್ರುತಿ ನಾರಾಯಣನ್ ಸೋಶಿಯಲ್‌ ಮೀಡಿಯಾದಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ, ಫೋಟೋಗೆ ಯಾವುದೇ ಕ್ಯಾಪ್ಶನ್‌ ನೀಡಿಲ್ಲ. ಅವರು ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಯಾರೂ ಅವುಗಳ ಬಗ್ಗೆ ಕಾಮೆಂಟ್ ಮಾಡದಂತೆ ಅವರ ಕಾಮೆಂಟ್ ಸೆಕ್ಷನ್‌ಅನ್ನು ಲಾಕ್ ಮಾಡಿದ್ದಾರೆ.


ಹೊಸ ಚಿತ್ರಗಳಲ್ಲಿ, ಶ್ರುತಿ ನಾರಾಯಣನ್ ಅವರನ್ನು ಬಿಳಿ ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಕಾಣಬಹುದು. ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಶ್ರುತಿ ನಾರಾಯಣನ್ ಅವರ ಲೀಕ್‌ ಆದ ವೀಡಿಯೊವನ್ನು ತನಿಖೆ ಮಾಡಲಾಗುತ್ತಿದೆ. ಈ ವೀಡಿಯೊ ಅವರ ಖಾಸಗಿ ಆಡಿಷನ್‌ನದ್ದಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಅದನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.

ಆದರೆ ಶ್ರುತಿ ನಾರಾಯಣ್ ಅವರ ವೀಡಿಯೊ ವೈರಲ್‌ ಆದ ನಂತರ, ಕಾಸ್ಟಿಂಗ್ ಕೌಚ್ ವಿಷಯವು ಮತ್ತೊಮ್ಮೆ ಚಲನಚಿತ್ರೋದ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಉದಯೋನ್ಮುಖ ಕಲಾವಿದರನ್ನು ನಡೆಸಿಕೊಳ್ಳುವ ಬಗ್ಗೆ ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಶ್ರುತಿ ನಾರಾಯಣನ್ ತಮಿಳು ಸಿನಿಮಾ ಮತ್ತು ಟಿವಿ ಉದ್ಯಮದಲ್ಲಿ ಉದಯೋನ್ಮುಖ ನಟಿ. 24 ವರ್ಷದ ಅವರು ತಮ್ಮ ನಟನೆಯಿಂದ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದ್ದಾರೆ.

ಶ್ರುತಿ ನಾರಾಯಣನ್ ತಮ್ಮ ವೃತ್ತಿಜೀವನವನ್ನು ಟಿವಿಯೊಂದಿಗೆ ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಸ್ಟಾರ್ ವಿಜಯ್ ಅವರ 'ಸಿರಾಗಡಿಕ್ಕ ಆಸೈ' ಧಾರಾವಾಹಿಯಲ್ಲಿ ವಿದ್ಯಾ ಪಾತ್ರದಿಂದ ಅವರು ಮನ್ನಣೆ ಪಡೆದಿದ್ದಾರೆ.

ಟಿವಿಯ ಜೊತೆಗೆ, ಶ್ರುತಿ ನಾರಾಯಣನ್ OTT ಸಿರೀಸ್‌ನಲ್ಲಿಯೂ ಟಿಸಿದ್ದಾರೆ.  ಸಮಂತಾ ರುತ್ ಪ್ರಭು ಮತ್ತು ವರುಣ್ ಧವನ್ ಅಭಿನಯದ 'ಸಿಟಾಡೆಲ್: ಹನಿ ಬನ್ನಿ' ವೆಬ್ ಸರಣಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

'ಕಾರ್ತಿಗೈ ದೀಪಂ' (2022) ಮತ್ತು 'ಮಾರಿ' (2022) ನಂತಹ ಟಿವಿ ಕಾರ್ಯಕ್ರಮಗಳಲ್ಲಿ ಶ್ರುತಿ ನಾರಾಯಣನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಖ್ಯಾತ ಧಾರಾವಾಹಿ ನಟಿಯ 14 ನಿಮಿಷದ ಖಾಸಗಿ ವಿಡಿಯೋ ಯದ್ವಾ ತದ್ವಾ ವೈರಲ್! ಕಾಸ್ಟಿಂಗ್‌ ಕೌಚ್‌ಗೆ ಬಲಿಯಾದ್ರಾ?

ಶ್ರುತಿ ನಾರಾಯಣನ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು Instagram ನಲ್ಲಿ 46 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು  ಹೊಂದಿದ್ದಾರೆ.

ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಮಾಜಿ ಸೈನಿಕನ ಪತ್ನಿಯ ಸುಲಿಗೆ!

Latest Videos

vuukle one pixel image
click me!