ಕುಚುಕು ಫ್ರೆಂಡ್ಸ್ ಜೊತೆ ಅಮೂಲ್ಯ, ವೈಷ್ಣವಿ… ನಿಮಗ್ಯಾವಾಗ ಮದ್ವೆ ಎಂದ ಫ್ಯಾನ್ಸ್

First Published | Aug 2, 2023, 2:59 PM IST

ಕನ್ನಡ ಚಿತ್ರ ರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿಯರಾದ ಅಮೂಲ್ಯ ಮತ್ತು ವೈಷ್ಣವಿ ಗೌಡ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಇವರು ಕಳೆದ 14 ವರ್ಷಗಳಿಂದ ಫ್ರೆಂಡ್ ಆಗಿದ್ದು, ಇಂದಿಗೂ ಇವರು ಜೊತೆಯಾಗಿ ಟ್ರಾವೆಲ್ ಮಾಡುತ್ತಾ, ಎಂಜಾಯ್ ಮಾಡ್ತಿದ್ದಾರೆ. 
 

ಮನೋರಂಜನಾ ಜಗತ್ತಿನಲ್ಲಿ ಅತ್ಯುತ್ತಮ ಫ್ರೆಂಡ್ಸ್ ಹುಡುಕುವುದು ಕಷ್ಟ. ಎಂಟರ್ಟೈನ್‌ಮೆಂಟ್ ಇಂಡಸ್ಟ್ರಿ (entertainment industry) ಪೈಪೋಟಿ ಮತ್ತು ಸ್ಪರ್ಧೆಯಿಂದ ತುಂಬಿದ್ದರೂ, ಕೆಲವು ನಟರು ನಿಜ ಜೀವನದಲ್ಲಿಯೂ ಇತರ ನಟರೊಂದಿಗೆ ಹೆಲ್ತಿ ರಿಲೇಶನ್ ಶಿಪ್ ಹೊಂದಿರೋದನ್ನು ನಾವು ನೋಡಬಹುದು. 
 

ಇಬ್ಬರು ನಟಿಯರು ಬೆಸ್ಟ್ ಫ್ರೆಂಡ್ಸ್ ಆಗೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ, ಆದರೆ ಕನ್ನಡದ ಈ ನಟಿಯರು ಅದಕ್ಕೆ ವಿರುದ್ಧ. ಇಬ್ಬರೂ ಜನಪ್ರಿಯ ನಟಿಯರು. ಒಬ್ಬರು ಕನ್ನಡ ಸಿನಿಮಾಗಳಲ್ಲಿ (Kannada Cinema) ಮಿಂಚಿದ್ರೆ, ಇನ್ನೊಬ್ರು ಸೀರಿಯಲ್ ಇಂಡಸ್ಟ್ರಿಯಲ್ಲಿ ಫೇಮಸ್. 
 

Tap to resize

ಈ ಬೆಸ್ಟ್ ಫ್ರೆಂಡ್ಸ್ ಇವರೇ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿ ಅಮೂಲ್ಯ (Amulya) ಮತ್ತು ಅಗ್ನಿಸಾಕ್ಷಿ ಸೀರಿಯಲ್ ಮೂಲಕ ರಾಜ್ಯದೆಲ್ಲೆಡೆ ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda). 
 

ವೈಷ್ಣವಿ ಗೌಡ ಮತ್ತು ಅಮೂಲ್ಯ ಕಳೆದ 14 ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್. ಕಾಲೇಜಿನಿಂದ ಇವರ ಫ್ರೆಂಡ್‌ಶಿಪ್ ಆರಂಭವಾಗಿದೆ. ಇವರದ್ದು ನಾಲ್ಕು ಜನರ ಗರ್ಲ್ಸ್ ಗ್ಯಾಂಗ್. ಇಂದಿಗೂ ಈ ನಾಲ್ವರು ಜನ ಫ್ರೀ ಟೈಮ್ ಸಿಕ್ಕಾಗಲೆಲ್ಲಾ ಟ್ರಾವೆಲ್ ಮಾಡುತ್ತಿರುತ್ತಾರೆ. 
 

ಇವರಿಬ್ಬರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡಿದವರು. ಕಾಲೇಜು ದಿನಗಳಿಂದಲೂ ಒಬ್ಬರನ್ನೊಬ್ಬರು ತಿಳಿದಿರುವ ನಟಿಯರ ನಡುವಿನ ಬಂಧವು ಪ್ರತಿ ವರ್ಷಗಳಲ್ಲಿ ಬಲವಾಗಿ ಮತ್ತು ಆಳವಾಗಿ ಬೆಳೆಯುತ್ತಿದೆ.
 

ಇತ್ತೀಚೆಗಷ್ಟೆ ಇಬ್ಬರು ನಟಿಯರು ತಮ್ಮ ಫ್ರೆಂಡ್ಸ್ ಗ್ಯಾಂಗ್ ಮತ್ತು ಫ್ಯಾಮಿಲಿ ಜೊತೆ ಚಿಕ್ಕಮಗಳೂರು ಟೂರ್ ಮಾಡಿ ಬಂದಿದ್ದಾರೆ. ಅಲ್ಲಿನ ಸುಂದರವಾದ ಫೋಟೊ ಮತ್ತು ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ. 
 

ಪ್ರೆಂಡ್ಸ್ ತಮ್ಮ ಗಂಡಂದಿರು ಮತ್ತು ಮಕ್ಕಳೊಂದಿಗೆ ಟ್ರಿಪ್ ಗೆ ಬಂದಿದ್ದು, ಕೇವಲ ವೈಷ್ಣವಿ ಗೌಡ ಮಾತ್ರ ಸಿಂಗಲ್ ಆಗಿ ಇರೋದ್ರಿಂದ, ಅಭಿಮಾನಿಗಳು, ಮೇಡಂ ನಿಮ್ಮ ಫ್ರೆಂಡ್ಸ್‌ಗೆ ಮಕ್ಕಳಾಗಿದೆ, ನಿಮ್ಮ ಮದುವೆ, ಮಕ್ಕಳು ಯಾವಾಗ ಎಂದು ಪ್ರಶ್ನಿಸಿದ್ದಾರೆ. 
 

ಇನ್ನು ಕರಿಯರ್ ವಿಷಯಕ್ಕೆ ಬರೋದಾದ್ರೆ ವೈಷ್ಣವಿ ಗೌಡ ಸದ್ಯ ಸೀತಾ ರಾಮ ಸೀರಿಯಲ್ ನಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿದೆ. ಇನ್ನು ಅಮೂಲ್ಯ ಸಿನಿಮಾದಿಂದ ಸಂಪೂರ್ಣವಾಗಿ ಬ್ರೇಕ್ ತೆಗೆದುಕೊಂಡು, ಗಂಡ, ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ. 
 

Latest Videos

click me!