ಶಿವ್ ಠಾಕರೆ ಮತ್ತು ಡೈಸಿ ಶಾ ಡೇಟಿಂಗ್ ಮಾಡುತ್ತಿದ್ದಾರಾ? ಯಾಕೀ ಗಾಸಿಪ್?

First Published | Aug 1, 2023, 5:43 PM IST

ಶಿವ್ ಠಾಕರೆ (Shiv Thakare) ಮತ್ತು ನಟಿ ಡೈಸಿ ಷಾ  (Daisy Shah) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಖತ್ರೋನ್ ಕೆ ಖಿಲಾಡಿ 13 ತಾರೆಗಳು  ಇಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ಎಲ್ಲರಲ್ಲೂ ಕೂತುಹಲ ಮೂಡಿಸಿದೆ. ಇದರ ಬಗ್ಗೆ ನಟಿ ಡೈಸಿ ಶಾ ಏನು ಹೇಳಿದ್ದಾರೆ ನೋಡಿ.

Daisy Shah

ಡೈಸಿ ಶಾ ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ಜೈ ಹೋ ಮತ್ತು ರೇಸ್ 3 ನಂತಹ ಚಿತ್ರಗಳಲ್ಲಿನ ಪ್ರಭಾವಶಾಲಿ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ತನ್ನ ಖತ್ರೋನ್ ಕೆ ಖಿಲಾಡಿ 13 ಸಹ-ಸ್ಪರ್ಧಿ ಶಿವ್ ಠಾಕರೆ ಅವರೊಂದಿಗಿನ ಬಂಧವು ಹಿಂದೆಂದಿಗಿಂತಲೂ ಸ್ಟ್ರಾಂಗ್ ಆಗಿದೆ ಎಂದು ಡೈಸಿ ಶಾ ಹೇಳುತ್ತಾರೆ.

Tap to resize

ಇತ್ತೀಚಿನ ಸಂದರ್ಶನವೊಂದರಲ್ಲಿ, ಡೈಸಿ ಬಿಗ್ ಬಾಸ್ 16 ರ ರನ್ನರ್ ಅಪ್ ಜೊತೆಗಿನ ತನ್ನ ಡೇಟಿಂಗ್ ವದಂತಿ ಹುಟ್ಟಿಕೊಂಡಿತ್ತು. ಅವರೀಗ ಕೇವಲ ಸ್ನೇಹಿತರೆಂದು ಹೇಳುತ್ತಿದ್ದಾರೆ. 

'ಅವರು ದಂಪತಿ ಎಂದು  ಅಧಿಕೃತವಾಗಿ ಘೋಷಿಸುವವರೆಗೂ ಯಾರೂ ತಮ್ಮ ಸಂಬಂಧವನ್ನು ಜಡ್ಜ್‌ ಮಾಡುವುದನ್ನು  ಬಯಸುವುದಿಲ್ಲ' ಎಂದಿದ್ದಾರೆ. 'ಶಿವ್ ಠಾಕರೆ ಜೊತೆಗಿನ ಲಿಂಕ್ ವದಂತಿಗಳು ನಮ್ಮ ಸ್ನೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದೂ ಡೈಸಿ  ಹೇಳಿದರು.

'ನಾವು ಪರಸ್ಪರ ಡೇಟಿಂಗ್ ಮಾಡುತ್ತಿದ್ದೇವೆ ಎಂದು ನಾವು ಘೋಷಿಸುವ ಕ್ಷಣದವರೆಗೂ ನಾವು ವಿಷಯಗಳನ್ನು ನಮ್ಮ ರೀತಿಯಲ್ಲಿ ನಿಭಾಯಿಸಲು ಪ್ರಯತ್ನಿಸುತ್ತೇವೆ. ಅಲ್ಲಿಯವರೆಗೆ, ಮಾಧ್ಯಮಗಳು, ಜನರು ಅಥವಾ ಅಭಿಮಾನಿಗಳು ನಾವು  ಕಪಲ್‌ ಅಥವಾ ಡೇಟಿಂಗ್‌ ಮಾಡುತ್ತಿದ್ದೇವಾ ಎಂದು ನಿರ್ಣಯಿಸಲು ಬಯಸುವುದಿಲ್ಲ, ನಾವೇ ಹೇಳುತ್ತೇವೆ. ಈಗ ನಾವು ಸದ್ಯಕ್ಕೆ ಫ್ರೆಂಡ್ಸ್‌' ಎಂದಿದ್ದಾರೆ ನಟಿ.  

ಅದೇ ಸಮಯದಲ್ಲಿ ಶಿವ್ ಠಾಕರೆ ಅವರೊಂದಿಗಿನ ಬಂಧ ಎಂದಿಗಿಂತಲೂ ಹೆಚ್ಚು ಸ್ನೇಹಪರವಾಗಿದೆ ಎಂದು ಡೈಸಿ ಬಹಿರಂಗಪಡಿಸಿದರು ಮತ್ತು ಯಾವುದೇ ವದಂತಿಯು ಅವರ ಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹಂಚಿಕೊಂಡರು.

'ನಾವು ಮೊದಲಿಗಿಂತ ಹೆಚ್ಚು ಸ್ನೇಹಿತರಾಗಿದ್ದೇವೆ. ಅದು ಉತ್ತಮವಾಗಿದೆ. ನಾವು ನಮ್ಮ ವೈಯಕ್ತಿಕ ಜೀವನವನ್ನು ನಮ್ಮಲ್ಲಿಯೇ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಅದನ್ನು ಜಗತ್ತಿಗೆ ಪ್ರದರ್ಶಿಸಲು ಇಷ್ಟಪಡುವುದಿಲ್ಲ. ನೀವು ನಿಮ್ಮ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಪ್ರಪಂಚಕ್ಕೆ ಹೇಳುತ್ತೀರಿ. ಆಗ ಅವರು ವಿಷಯಗಳನ್ನು ಪರಿಶೀಲಿಸುತ್ತಾರೆ. ಎಂದು ಡೈಸಿ ಅಭಿಪ್ರಾಯಪಟ್ಟಿದ್ದಾರೆ
 

Latest Videos

click me!