ಜಾಲಿ ಮೂಡಲ್ಲಿ ಸಾನ್ಯಾ ಅಯ್ಯರ್…. ನೀನಿರಲು ಜೊತೆಯಲ್ಲಿ…. ಅಂದಿದ್ದು ಯಾರಿಗೆ?

First Published | Apr 20, 2024, 5:55 PM IST

ತನ್ನ ಹೊಸ ಸಿನಿಮಾ ಗೌರಿ ಬಿಡುಗಡೆಗಾಗಿ ಕಾಯುತ್ತಿರುವ ನಟಿ ಸಾನ್ಯಾ ಅಯ್ಯರ್ ಸದ್ಯ ಸಮ್ಮರ್ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡ್ತಾ ಇದ್ದಾರೆ. 
 

ಸ್ಯಾಂಡಲ್ ವುಡ್ ನಲ್ಲಿ ಮಿಂಚೋದಕ್ಕೆ ರೆಡಿಯಾಗ್ತಿರೋ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ (Saanya Iyer) ಸದ್ಯ ಸಮ್ಮರ್ ಸೀಸನ್ ನಲ್ಲಿ ಟ್ರಾವೆಲ್ ಮಾಡುತ್ತಾ, ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. 

ಇಂದ್ರಜೀತ್ ಲಂಕೇಶ್ ನಿರ್ದೇಶಿಸಿರುವ ಹೊಸ ಸಿನಿಮಾ ‘ಗೌರಿ’ ಬಿಡುಗಡೆಗಾಗಿ ಕಾಯುತ್ತಿರುವ ನಟಿ ಸಾನ್ಯಾ ಅಯ್ಯರ್, ಇದರ ಮಧ್ಯೆ ಕಳಸ, ಹೊರನಾಡಿನ ಸುತ್ತಮುತ್ತಾ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. 
 

Tap to resize

ಸಾನ್ಯಾ ಅಯ್ಯರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಅದಕ್ಕೆ ನೀನೀರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ, ನಗುತ ನೀ ಕರೆದರೆ ಮನದಿ ಸಂತೋಷ ಹಾಡಾದಂತೆ… ಎನ್ನುವ ಮ್ಯೂಸಿಕ್ ಸೇರಿಸಿದ್ದಾರೆ. ಸಾನ್ಯಾ ಈ ಹಾಡನ್ನು ಯಾರಿಗೆ ಡೆಡಿಕೇಟ್ ಮಾಡಿದ್ದು ಗೊತ್ತಾ? 
 

ಸಾನ್ಯಾ ಅಯ್ಯರ್ ಕಳಸ ಬಳಿ ಇರುವಂತಹ ಅಂಬಾ ತೀರ್ಥಕ್ಕೆ ತೆರಳಿದ್ದು, ಅಲ್ಲಿ ತಾಯಿ ದೀಪಾ ಅಯ್ಯರ್ (Deepa Iyer) ಜೊತೆ ವಿವಿಧ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ನೀನಿರಲು ಜೊತೆಯಲ್ಲಿ ಅನ್ನೋದು ಅಮ್ಮನಿಗೆ, ನಗುತ ನೀ ಕರೆದರೆ ಅಂದಿದ್ದು ನದಿಗೆ ಎಂದು ಬರೆದುಕೊಂಡಿದ್ದಾರೆ. 
 

ಸಾನ್ಯಾ ಅಯ್ಯರ್ ಕಪ್ಪು ಬಣ್ಣದ ಟೈಟ್ ಶಾರ್ಟ್ಸ್ ಜೊತೆಗೆ ಹಳದಿ ಬಣ್ಣದ ಸ್ಲೀವ್ ಲೆಸ್ ಟೀ ಶರ್ಟ್ ಧರಿಸಿದ್ದಾರೆ. ರೂಪ ಅಯ್ಯರ್, ಜಾಗಿಂಗ್ ಪ್ಯಾಂಟ್ ಟೀಶರ್ಟ್ ಧರಿಸಿದ್ದಾರೆ. ಅಮ್ಮ ಮಗಳ ಜೋಡಿ ನೋಡಿ ಜನರು ಸೂಪರ್ ಜೋಡಿ ಅಂತಿದ್ದಾರೆ. 
 

ಪುಟ್ಟ ಗೌರಿಯ ಮದುವೆ (Putta Gowri Madwe)ಸೀರಿಯಲ್ ನಲ್ಲಿ ಪುಟ್ಟಗೌರಿಯಾಗಿ ತಮ್ಮ ನಟನಾ ಜರ್ನಿ ಆರಂಭಿಸಿದ ಸಾನ್ಯಾ, ಮೊದಲ ಸಿರಿಯಲ್ ಗೆ ಬಹಳಷ್ಟು ಮೆಚ್ಚುಗೆ ಪಡೆದಿದ್ದರು. ಬಳಿಕ ಡ್ಯಾನ್ಸ್ ರಿಯಾಲಿಟಿ ಶೋ, ಆಲ್ಬಂ ಸಾಂಗ್, ಸಿನಿಮಾದಲ್ಲೂ ನಟಿಸಿದ್ದರು. ಆದರೆ ಅವರಿಗೆ ಹೆಸರು ಕೊಟ್ಟಿದ್ದು ಬಿಗ್ ಬಾಸ್ ಓಟಿಟಿ ಮತ್ತು ಸೀಸನ್ 9.

ಇನ್ನು ಸಮರ್ಜೀತ್ ಲಂಕೇಶ್ ಜೊತೆ ನಾಯಕಿಯಾಗಿ ನಟಿಸಿರುವ ಸಾನ್ಯಾ, ಸಿನಿಮಾ ಬಿಡುಗಡೆಗೆ ಕಾಯ್ತಿದ್ದಾರೆ. ಇನ್ನು ಹೆಚ್ಚಾಗಿ ತಾಯಿ ಜೊತೆ ದೇಶ, ವಿದೇಶ ಸುತ್ತೋ ಸಾನ್ಯಾ, ಈ ಬಾರಿಯೂ ಬೆಂಗಳೂರಿನ ಬಿಸಿಲಿನಿಂದ ದೂರ ಸರಿದು, ಕಳಸದ ಕಡೆ ಟ್ರಾವೆಲ್ ಮಾಡಿ ಎಂಜಾಯ್ ಮಾಡ್ತಿದ್ದಾರೆ. 

Latest Videos

click me!