ಬಿಗ್ ಬಾಸ್ ತನಿಷಾ ಕುಪ್ಪಂದ ಎಂದು ಹೆಸರು ಮಾಡುವ ಮುನ್ನವೇ ಕನ್ನಡ ಕಿರುತೆರೆಯಲ್ಲಿ ತನಿಷಾ ಸಖತ್ ಮಿಂಚಿದ್ದರು. ಇದ್ದಕ್ಕಿದ್ದಂತೆ ಲೈಮ್ ಲೈಟ್‌ನಿಂದ ದೂರ ಉಳಿಯಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ.
211
ನಾನು ಪೀಕ್ ಕೆರಿಯರ್‌ನಲ್ಲಿ ಇದ್ದಾಗ ಪ್ರೀತಿ ಜೀವನದಲ್ಲಿ ಸಾಕಷ್ಟು misunderstanding ಆಗ್ತಿತ್ತು. ಸೀರಿಯಲ್‌ನಲ್ಲಿ ನಾವು ಏನೂ ಮಾಡಲು ಸಾಧ್ಯವಿಲ್ಲ ಆದರೆ ಆನ್‌ಸ್ಕ್ರೀನ್ ಮೇಲೆ ತೋರಿಸುತ್ತಿದ್ದ ಕ್ಲೋಸ್ ದೃಶ್ಯಗಳನ್ನು ನೋಡಿ ನನ್ನ ಬಾಯ್‌ಫ್ರೆಂಡ್ ಇಷ್ಟ ಪಡುತ್ತಿರಲಿಲ್ಲ.
311
ಯಾವುದೇ ಬಾಯ್‌ಫ್ರೆಂಡ್‌ಗೆ ಆದರೂ ಮುಜುಗರ ಅನಿಸುವುದು ಸಹಜ. ನೀನು ಮಾಡುತ್ತಿರುವ ಸೀರಿಯಲ್‌ನ ನನ್ನ ಇಡೀ ಫ್ಯಾಮಿಲಿ ನೋಡುತ್ತಿದೆ ನಾವುVIP ಫ್ಯಾಮಿಲಿಗೆ ಸೇರಿದವರು ನೀನು ನನ್ನನ್ನು ಮದುವೆ ಮಾಡಿಕೊಳ್ಳಬೇಕು ಅಂದ್ರೆ ಸೀರಿಯಲ್ ಮಾಡಬಾರದು.
411
ಆಗ ನನಗೆ ಅಷ್ಟು ಮೆಚ್ಯೂರಿಟಿ ಇರಲಿಲ್ಲ ಅವರು ಹೇಳಿದ ಮಾತುಗಳನ್ನು ಕೇಳಿ ಸೀರಿಯಲ್‌ಗಳನ್ನು ಬಿಟ್ಟೆ ಏಕೆಂದರೆ ಆ ವಯಸ್ಸಿನಲ್ಲಿ ಅವರನ್ನು ಮದುವೆ ಮಾಡಿಕೊಳ್ಳಬೇಕು ಅನ್ನೋದು ಅಷ್ಟೇ ತಲೆಯಲ್ಲಿ ಇತ್ತು.
511
ನಿನಗೆ ನಾನು ಮುಖ್ಯನಾ ನಿನ್ನ ಸೀರಿಯಲ್ ಮುಖ್ಯನಾ ಅನ್ನೋ ಪ್ರಶ್ನೆ ಇಟ್ಟರು ಆಗ ಇಲ್ಲ ನೀನೇ ನನಗೆ ಮುಖ್ಯ ಎಂದು ಹೇಳಿದೆ. ಆ ಚಾನೆಲ್‌ನಲ್ಲಿ ಎಷ್ಟು ಸೀರಿಯಲ್ ಇದೆ ಅಷ್ಟೂ ಚಾನೆಲ್‌ಗಳಿಂದ ನನಗೆ ಆಫರ್ ಬರುತ್ತಿತ್ತು.
611
ನನಗೆ ಬೇಕಿದ್ದದ್ದು ಅದೇ ಆದರೆ ಅವರಿಗೆ ಅದು ಇಷ್ಟವಿರಲಿಲ್ಲ ನೆಗೆಟಿವ್ ಪಾತ್ರ ಮಾಡಲ್ಲ ಅಂತ ಹೇಳು ಅಷ್ಟು ದೂರ ಶೂಟಿಂಗ್ ಬೇಡ ಅಂತ ಹೇಳು ಅಂತಿದ್ರು. ಒಂದು ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದೆ ಅದರಲ್ಲಿ ವೇದಿಕೆ ಮಾಡುವ ಐಟಂ ಡ್ಯಾನ್ಸರ್ ಪಾತ್ರದಲ್ಲಿ ಮಾಡಿದ್ದೆ.
711
ಈ ಸಿನಿಮಾವನ್ನು ನೋಡಿ ನೀನು ಆ ತರ ಮಾಡಿದ್ಯಾ ಈ ತರ ಮಾಡಿದ್ಯಾ ಎಂದು ಹೇಳುತ್ತಾರೆ ಅಲ್ಲಿಂದ ಸಣ್ಣ ಪುಟ್ಟ ತೊಂದರೆ ಸೃಷ್ಟಿಯಾಗುತ್ತೆ. ಸೀರಿಯಲ್ ಬಿಟ್ಟು ಬಿಡು ಎಂದು ಖಾಸಗಿ ಕಂಪನಿಯಲ್ಲಿ ಹೆಚ್‌ಆರ್ ಆಗಿ ಸುಮಾತು 7 ತಿಂಗಳ ಕಾಲ ಕೆಲಸ ಮಾಡಿದೆ.
811
ಆಫೀಸ್‌ನಲ್ಲಿ ನಾಯಕಿಯಾಗಿ ಗುರುತಿಸಿ ಬೇರೆ ಅವರು ಮಾತನಾಡಿಸಿದ್ದಾಗ ತುಂಬಾ ಜಗಳ ಮಾಡುತ್ತಿದ್ದರು. ಆ ಸಮಯದಲ್ಲಿ ಇವ್ರೇ ನನ್ನ ಲೈಫ್ ಪಾರ್ಟನರ್ ಎಂದು ಅಜೆಸ್ಟ್ ಮಾಡಿಕೊಂಡಿದ್ದೆ ಆ ಮೇಲೆ ಅನಾರೋಗ್ಯವಾಗಿತ್ತು.
911
ಅಲ್ಲಿಂದ ನಾನು ಕೆಲಸ ಬಿಟ್ಟು ರೆಸ್ಟ್ ತೆಗೆದುಕೊಂಡಾಗ ಚೈತನ್ಯಾ ಅವರಿಂದ ಕಾಲ್ ಬಂತು, ಆಡಿಷ್ ಮಾಡಿ ಎಂದು. ಅತ್ತಿಗೆ ಪಾತ್ರದಲ್ಲಿ ಮಾಡುವಾಗ ನನ್ನ ಆನ್‌ಸ್ಕ್ರೀನ್ ಗಂಡನ ಪಾತ್ರ ಮಾಡುತ್ತಿದ್ದವರನ್ನು ಅಣ್ಣ ಎಂದು ಕರೆಯಬೇಕು ಎಂದು ಒತ್ತಾಯ ಮಾಡುತ್ತಿದ್ದರು.
1011
ಸಣ್ಣ ಪುಟ್ಟ ಪ್ರಾಜೆಕ್ಟ್‌ಗಳನ್ನು ಮಾಡಲು ಶುರು ಮಾಡಿದ ಮೇಲೆ ಮತ್ತೊಮ್ಮೆ ಬಾಯ್‌ಫ್ರೆಂಡ್‌ಗೆ ಜಗಳ ಮತ್ತು ಕಷ್ಟ ಶುರುವಾಯ್ತು. ಬ್ರೇಕಪ್ ಮಾಡಿಕೊಂಡ ಮೇಲೆ ಸಿನಿಮಾ ಮಾಡಲು ಶುರು ಮಾಡಿದೆ. ಸುಮಾರು 6 ವರ್ಷಗಳ ಕಾಲ ನಾನ್ ಸ್ಟಾಪ್ ಸೀರಿಯಲ್ ಮಾಡಿದೆ.
1111
ಒಮ್ಮೆ ನನಗ ತಿಳಿಯದೆ ಸೆಟ್‌ಗೆ ಬಂದು ಚೆಕ್ ಮಾಡಿಕೊಂಡು ಹೋಗುತ್ತಿದ್ದರು, ಸೆಟ್‌ನಲ್ಲಿ ಇದ್ದವರಿಗೆ ಗೊತ್ತಿತ್ತು ಆದರೆ ನನಗೆ ಏನೂ ಗೊತ್ತಿರಲಿಲ್ಲ. ತುಂಬಾ ಪ್ರಾಮಾಣಿಕವಾಗಿ ಸಂಬಂಧದಲ್ಲಿ ಇದ್ದೆ ಎಂದು ತನಿಷಾ ಹೇಳಿದ್ದಾರೆ.