ಮದುವೆ ಆದ ಕೂಡ್ಲೆ ಹುಡುಗೀರೇಕೆ ಬದಲಾಗ್ಬೇಕೆಂದ ಅಶೋಕ, ಇರೋ ಒಂದೇ ಹಾರ್ಟ್ ಎಷ್ಟು ಸಾರಿ ಕದಿತೀರಿ ಕೇಳ್ತಿದ್ದಾರೆ ಯುವತಿಯರು!

First Published | Apr 20, 2024, 4:07 PM IST

ಸದ್ಯ ಸೀತಾ ರಾಮ ಧಾರಾವಾಹಿಯಲ್ಲಿ ಅಶೋಕ್ - ಪ್ರಿಯಾ ಮದುವೆ ಮುಗಿದಿದ್ದು, ಮದುವೆಯಾದ ಮೇಲೆ ಹುಡುಗೀರು ಹೇಗಿರಬೇಕು ಅನ್ನೋದರ ಬಗ್ಗೆ ಅಶೋಕ್ ಹೇಳಿರೋ ಮಾತು ಕೇಳಿ, ವೀಕ್ಷಕರು ಹೆಂಡ್ತಿ ಪುಣ್ಯವಂತೆ ಅಂತಿದ್ದಾರೆ. 

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ ನಲ್ಲಿ ಮುದ್ದಾದ ಜೋಡಿಗಳಾದ ಅಶೋಕ್ ಮತ್ತು ಪ್ರಿಯಾ ಮದುವೆ ನಡೆದೇ ಹೋಯಿತು. ಪ್ರಬುದ್ಧ ಹುಡುಗ ಅಶೋಕ್ ಗೆ ಕೇರ್ ಫ್ರೀ ಹುಡುಗಿ ಪ್ರಿಯಾ ಜೋಡಿಯಾಗಿದ್ದು, ಇಬ್ಬರ ಜೋಡಿ ಸಖತ್ತಾಗಿದೆ. 
 

ಸೀತಾ ರಾಮ (Sita Rama) ಸೀರಿಯಲ್ ನ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಪ್ರಿಯಾ ಅಶೋಕ್ ಫಸ್ಟ್ ನೈಟ್ ಕೂಡ ಆಗೋಯ್ತು. ಮರುದಿನ ಅಶೋಕ್ ಬೆಳಗ್ಗೆ ಎದ್ದು ರೆಡಿಯಾಗಿದ್ರೆ, ಪ್ರಿಯಾ ತನಗೆ ಮದುವೆ ಆಗಿರೋದನ್ನೇ ಮರೆತು ಹೊದಿಕೆ ಹೊದ್ದು, ಆರಾಮವಾಗಿ ನಿದ್ರೆ ಮಾಡ್ತಿದ್ದಾಳೆ. ಇದನ್ನು ನೋಡಿದ ಅಶೋಕ್ ಪಾಪ ಎಷ್ಟು ಮುದ್ದಾಗಿ ಮಲಗಿದ್ದಾಳೆ, ಎಬ್ಬಿಸೋದು ಬೇಡ, ಆಮೇಲೆ ಕಾಲ್ ಮಾಡ್ತಿನಿ  ಎನ್ನುತ್ತಾ ತಾನು ಆಫೀಸಿಗೆ ರೆಡಿಯಾಗಿ ಹೊರ ಬರ್ತಾನೆ. 
 

Tap to resize

ಪ್ರಿಯಾ ಇನ್ನೂ ಎದ್ದಿಲ್ಲದ್ದನ್ನು ನೋಡಿದ ಪ್ರಿಯಾ ತಾಯಿ, ಅಯ್ಯೋ ಈ ಹುಡುಗಿ ಇನ್ನೂ ಎದ್ದಿಲ್ವಾ? ಮದುವೆ ಆದ್ಮೇಲೆ ಸುಧಾರಿಸ್ತಾಳೆ, ಮನೆ ಕೆಲ್ಸ ಎಲ್ಲಾ ಮಾಡ್ತಾಳೆ ಅಂದ್ಕೊಡ್ಡಿದೆ. ಆದ್ರೆ ಈ ಹುಡುಗಿ ಯಾವಾಗ ಬುದ್ಧಿ ಕಲಿತಾಳೋ ಎಂದು ಅಶೋಕನ ಹತ್ರ ಹೇಳ್ತಾರೆ. ಅದಕ್ಕೆ ಅಶೋಕ್ ನೀಡಿದ ಉತ್ತರ ಕೇಳಿ ವೀಕ್ಷಕರು ಫಿದಾ ಆಗಿದ್ದಾರೆ. 
 

ಅತ್ತೆ ಮಾತು ಕೇಳಿದ ಅಶೋಕ, ಅತ್ತೆ ಪ್ರಿಯಾ ಹೇಗಿದ್ದಾಳೋ ಹಾಗೇ ಇರ್ಲಿ. ಯಾಕೆ ಮದುವೆ ಆದ ತಕ್ಷಣವೇಎಲ್ಲ ಚೇಂಜ್ ಆಗ್ಬೇಕು. ನಂಗೆ ಟಿಪಿಕಲ್ ಹೆಂಡ್ತಿ ತರ ಪ್ರಿಯಾ ಬೆಳಗ್ಗೆ ಎದ್ದು ರಂಗೋಲಿ ಹಾಕ್ಬೇಕು, ತಿಂಡಿ ಮಾಡ್ಕೊಡ್ಬೇಕು, ಮನೆಯಲ್ಲೇ ಇರ್ಬೇಕು ಅಂತೇನೂ ಇಲ್ಲ. ಅವಳು ಮುಂಚೆ ಹೇಗಿದ್ಲೋ ಹಾಗೇ ಇರ್ಲಿ ಎಂದು ಹೇಳೋ ಮೂಲಕ ಎಲ್ಲಾ ಹುಡುಗಿಯರಿಗೆ ತಮ್ಮ ಭಾವಿ ಗಂಡ ಹೀಗೆ ಇರ್ಲಿಪ್ಪಾ ಎನ್ನುವಷ್ಟು ಇಷ್ಟವಾಗಿ ಬಿಟ್ಟಿದ್ದಾರೆ. 
 

ಅಶೋಕ್ ಮಾತು ಕೇಳಿ ಆಗಷ್ಟೇ ಎದ್ದ ಪ್ರಿಯಾಗೆ ಎಷ್ಟು ಸಂತೋಷವಾಗಿದೆಯೋ, ಅದಕ್ಕಿಂತ ಹೆಚ್ಚು ಖುಷಿ ನಮ್ಮ ವೀಕ್ಷಕರಿಗೆ ಆಗಿರೋ ಹಾಗಿದೆ. ಹೆಚ್ಚಾಗಿ ಹುಡುಗೀರು ಕೇಳಿರೋದು ಏನಂದ್ರೆ, ಮದುವೆಯಾದ ಕೂಡ್ಲೇ ಹುಡುಗೀರು ಬದಲಾಗಬೇಕು, ಬೆಳಗ್ಗೆ ಎದ್ದೇಳಬೇಕು, ಗಂಡನ ಆಫೀಸ್ ಹೊರಡೋ ಮುನ್ನ ಅಡುಗೆ ಮಾಡಿ ಬಡಿಸಬೇಕು, ಮನೆ ಕೆಲಸ ಕಲಿಯಬೇಕು … ಇತ್ಯಾದಿ ಇತ್ಯಾದಿ ಹೇಳ್ತಾನೆ ಇರ್ತಾರೆ. ಆದ್ರೆ ಯಾರೂ ಸಹ ಹುಡುಗಿ ಹೇಗಿದ್ದಳೋ ಹಾಗೇ ಇರ್ಲಿ ಅಂತ ಹೇಳೋದೆ ಇಲ್ಲ. 
 

ಅಶೋಕನ ಈ ಮಾತು ಕೇಳಿನೇ ಇವರೊಬ್ಬ ಮಾದರಿ ಗಂಡ ಅನ್ನೋ ಬಿರುದು ಕೊಟ್ಟಿರುವ ವೀಕ್ಷಕರು ಪ್ರಿಯ ಅಕ್ಕ ಪುಣ್ಯ ಮಾಡಿದ್ದಾರೆ. ಎಲ್ಲ ಹುಡುಗಿರಿಗೂ.. ಇದೇ ತರ ಹುಡುಗ ಸಿಗ್ಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ತರ ಹುಡುಗ ಸಿಗೋದೆ ಅಪರೂಪ. ಇಂಥ ಹುಡುಗ ನಿಜ ಜೀವನದಲ್ಲಿ ಇರೋದೇ ಇಲ್ಲ, ಇದೆಲ್ಲಾ ಸಿರಿಯಲ್ ಅಲ್ಲಿ ಮಾತ್ರ ನೋಡಬಹುದು ಎಂದು ಬರೆದುಕೊಂಡಿದ್ದಾರೆ. 
 

ಇನ್ನು ತುಂಬಾ ಜನ ನಮ್ಮ ಯಜಮಾನ್ರು ಸಹ ಅಶೋಕ್ ಥರಾನೆ ಇದ್ದಾರೆ ಎಂದರೆ, ಮತ್ತೊಬ್ಬರು ಕಾಮೆಂಟ್ ಮಾಡಿ ಅಶೋಕ್ ಸರ್ ನ ನೋಡಿಯಾದ್ರೂ ಎಲ್ಲಾ ಹುಡುಗರಿಗೆ ಬುದ್ದಿ ಬರ್ಲಿ. ಹೆಂಡ್ತಿಯನ್ನು ಹೇಗೆ ನೋಡ್ಕೋಬೇಕು ಅನ್ನೋದನ್ನು ಕಲಿಯಲಿ. ಅಶೋಕ್ ಸರ್ ನಮಗಿರೋದು ಒಂದು ಹಾರ್ಟ್ ಎಷ್ಟು ಸಲ ಅಂತ ಗೆಲ್ಲುತ್ತೀರಿ ಎಂದು ಸಹ ಹೇಳಿದ್ದಾರೆ. 
 

Latest Videos

click me!