'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಮಾಯಾ ಪಾತ್ರದಿಂದ ನಟಿ ರುಹಾನಿ ಶೆಟ್ಟಿ ಹೊರನಡೆದಿದ್ದು, ಅವರ ಸ್ಥಾನಕ್ಕೆ 'ಕೋಳಿ ರಮ್ಯಾ' ಖ್ಯಾತಿಯ ರಮ್ಯಾಶ್ರೀ ಬಾಲಕೃಷ್ಣ ಬಂದಿದ್ದಾರೆ. ಅಭಿಮಾನಿಗಳ ಬೇಸರಕ್ಕೆ ಪ್ರತಿಕ್ರಿಯಿಸಿರುವ ರುಹಾನಿ, ಶೀಘ್ರದಲ್ಲೇ ಅಬ್ಬರದೊಂದಿಗೆ ತೆರೆಗೆ ಮರಳುವ ಸೂಚನೆ ನೀಡಿದ್ದಾರೆ.
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ನೆಗೆಟಿವ್ ರೋಲ್ ಮಾಯಾ ಆಗಿ ಕಾಣಿಸಿಕೊಳ್ತಿದ್ದ ನಟಿ ರುಹಾನಿ ಶೆಟ್ಟಿ (Ruhani Shetty) ಹೊರ ನಡೆದಿದ್ದು, ಆ ಜಾಗಕ್ಕೆ ಕೋಳಿ ರಮ್ಯಾ ಎಂದೇ ಫೇಮಸ್ ಆಗಿರೋ ರಮ್ಯಾಶ್ರೀ ಬಾಲಕೃಷ್ಣ ಎಂಟ್ರಿ ಕೊಟ್ಟಿದ್ದಾರೆ.
26
ಬೇರೆಯವರನ್ನು ಒಪ್ಪಿಕೊಳ್ಳದ ವೀಕ್ಷಕರು
ಕೆಲ ವರ್ಷಗಳಿಂದ ಒಂದು ರೋಲ್ನಲ್ಲಿ ಒಬ್ಬರನ್ನೇ ನೋಡಿರುವ ವೀಕ್ಷಕರು ಆ ಜಾಗಕ್ಕೆ ಬೇರೆ ಯಾರೇ ಬಂದರೂ ಅವರನ್ನು ಒಪ್ಪಿಕೊಳ್ಳಲು ಸಮಯ ಹಿಡಿಯುವುದು ಇದೆ. ಅವರ ಜಾಗಕ್ಕೆ ಬಂದಿರುವವರು ಎಷ್ಟೇ ಫೇಮಸ್ ನಟ-ನಟಿಯಾಗಿದ್ದರೂ, ಎಷ್ಟೇ ಚೆನ್ನಾಗಿ ಪಾತ್ರ ನಿಭಾಯಿಸಿದರೂ, ಮೊದಲಿದ್ದವರೇ ಬೆಸ್ಟ್ ಎನ್ನುವುದು ಎಲ್ಲಾ ಸೀರಿಯಲ್ಗಳಲ್ಲಿಯೂ ಮಾಮೂಲು.
36
ನೀವೇ ಬೇಕು ಅನ್ನುತ್ತಿರೋ ಫ್ಯಾನ್ಸ್
ಅದೇ ರೀತಿ ರುಹಾನಿ ಅವರ ಜಾಗಕ್ಕೆ ಬೇರೆ ನಟಿಯನ್ನು ಸಹಿಸಿಕೊಳ್ಳಲು ಅವರ ಫ್ಯಾನ್ಸ್ಗೆ ಕಷ್ಟವಾಗುತ್ತಿದೆ. ನಮಗೆ ರುಹಾನಿನೇ ಬೇಕು ಎನ್ನುತ್ತಿದ್ದಾರೆ. ಆದರೆ ಏಕಾಏಕಿ ನಟಿ ಸೀರಿಯಲ್ನಿಂದ ಹೊರಕ್ಕೆ ಹೋಗಿದ್ದು ಯಾಕೆ ಎನ್ನುವುದು ತಿಳಿದಿರಲಿಲ್ಲ.
ಇದೀಗ ರುಹಾನಿ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಪಾತ್ರದಿಂದ ಹೊರಕ್ಕೆ ಹೋಗುತ್ತಿರುವ ಬಗ್ಗೆ ನೀವೆಲ್ಲಾ ಬೇಸರಿಸಿಕೊಂಡಿರುವುದು ನೋಡಿ, ನೀವು ಎಷ್ಟು ಪ್ರೀತಿ ಕೊಟ್ಟಿದ್ದೀರಿ ಎನ್ನುವುದು ಅರ್ಥವಾಗುತ್ತದೆ ಎಂದಿದ್ದಾರೆ. ಅದಕ್ಕೆ ನಾನು ಋಣಿ ಎಂದಿದ್ದಾರೆ.
56
ಅಬ್ಬರದೊಂದಿಗೆ ತೆರೆಯ ಮೇಲೆ
ಇದೇ ವೇಳೆ ಒಂದು ಹಿಂಟ್ ಅನ್ನೂ ಅವರು ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಅಬ್ಬರದೊಂದಿಗೆ ತೆರೆಯ ಮೇಲೆ ಬರುತ್ತಿದ್ದೇನೆ ಎಂದು ಹೇಳುವ ಮೂಲಕ ರುಹಾನಿ ಅವರು ಬೇರೆ ಸೀರಿಯಲ್ನಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ತಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ ಸದ್ಯ ನಟಿ ಈ ಬಗ್ಗೆ ಏನೂ ಹೇಳಲಿಲ್ಲ.
66
ಕೋಳಿ ರಮ್ಯಾ
ಇನ್ನು ಇವರ ಜಾಗಕ್ಕೆ ಮಾಯಾ ಆಗಿ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಖ್ಯಾತಿಯ ಕೋಳಿ ರಮ್ಯಾ ಎಂಟ್ರಿ ಕೊಟ್ಟಿದ್ದಾರೆ. ಈ ಷೋನಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಕೋಳಿ ಹಿಡಿದಿದ್ದರಿಂದ ಕೋಳಿ ರಮ್ಯಾ ಎನ್ನುವ ಹೆಸರು ಬಂದಿದೆ. ಅವರು ಹಲವಾರು ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ವಿಲನ್ ಪಾತ್ರಗಳಲ್ಲಿ ಹೆಚ್ಚು ಪರಿಚಿತರಾಗಿದ್ದಾರೆ.