ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ : ಮದ್ವೆ ಯಾವಾಗ ಎಂದ ಅಭಿಮಾನಿಗಳು

Published : Apr 11, 2023, 01:09 PM IST

ಬಿಗ್ ಬಾಸ್ ಜೋಡಿಗಳಾದ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವಾರು ಸಮಯದ ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಸಿಹಿ ಸುದ್ದಿ ಇದೆಯಾ ಎಂದು ಕೇಳ್ತಿದ್ದಾರೆ.

PREV
17
ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ : ಮದ್ವೆ ಯಾವಾಗ ಎಂದ ಅಭಿಮಾನಿಗಳು

ಬಿಗ್ ಬಾಸ್ (Bigg Boss) ಮನೆಯ ಜನಪ್ರಿಯ ಜೋಡಿಗಳಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ (Sanya Iyer) ಜೋಡಿಯೂ ಒಂದು. ದೊಡ್ಡ ಮನೆಯಲ್ಲಿ ಲವ್ ಬರ್ಡ್ಸ್ ಗಳಂತಿದ್ದ ಈ ಜೋಡಿ, ಹೊರಗೆ ಬಂದ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಇದರಿಂದ ಅಭಿಮಾನಿಗಳಿಗೂ ಬೇಸರವಾಗಿತ್ತು. 
 

27

ಇದೀಗ ಬಿಗ್ ಬಾಸ್ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಅವರು ಸಾನ್ಯಾ ಅಯ್ಯರ್ ಮನೆಗೆ ಭೇಟಿ ನೀಡಿ, ಸಾನ್ಯಾ ಮನೆಯವರ ಜೊತೆ ಸಮಯ ಕಳೆದಿದ್ದಾರೆ. ಅಲ್ಲದೇ ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. 

37

ಬಹಳ ಸಮಯದ ನಂತರ ನೆಚ್ಚಿನ ಜೋಡಿ ಜೊತೆಯಾಗಿ ನೋಡಿದ ಅಭಿಮಾನಿಗಳಂತೂ ತುಂಬಾನೆ ಖುಷಿಯಾಗಿದ್ದು, ಫೋಟೋಗೆ ತರಹೇವಾರಿ ಕಮೆಂಟ್ ಮಾಡಿ, ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಫೋಟೋ ನೋಡಿ ತುಂಬಾನೆ ಖುಷಿ ಆಯ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

47

ಕೆಲವು ಅಭಿಮಾನಿಗಳಂತೂ ರೂಪನ್ಯ ಜೋಡಿ ಈಗ ದೂರವಾಗಿದ್ದಾರೆ ಎಂದು ಹೇಳಿದವರಿಗೆ ಟಾಂಗ್ ನೀಡುವಂತೆ ಇವಾಗ ಮಾತಾಡೋರು ಮಾತಾಡಿ, ನೋಡೋಣ ನಮ್ಮ ರೂಪನ್ಯಾ 💕ನಮ್ಮ ಹೆಮ್ಮೆ. ನೋಡೋಕೆ 2 ಕಣ್ಣುಗಳು ಸಾಲದು.  ಎಷ್ಟು ಚಂದ ನೋಡೋಕೆ ಈ ಫೋಟೋ. ನಾವು ರೂಪನ್ಯಾ ಫ್ಯಾಮಿಲಿ ಅಂತ ಹೇಳಿಕೊಳ್ಳಕ್ಕೆ ತುಂಬಾ ಹೆಮ್ಮೆ ಆಗುತ್ತೆ. ಇವ್ರು ಯಾವಾಗಲೂ ಇದೇ ತರ ಇರಬೇಕು ಮುಂದೆಯೂ ಇರುತ್ತಾರೆ ಅನ್ನೋದು ನಮ್ಮ ಬಲವಾದ ನಂಬಿಕೆ ಎಂದು ಬರೆದುಕೊಂಡಿದ್ದಾರೆ. 
 

57

ಇನ್ನೂ ಕೆಲವರು ಒಂದೇ ಮಾತಲ್ಲಿ ಕೇಳ ಬೇಕೆಂದರೆ ಮದುವೆ ಯಾವಾಗ ಎಂದು ಎಲ್ಲಾ ಕಡೆ ಸಾಮಾನ್ಯವಾಗಿ ಕೇಳುವಂತಹ ಪ್ರಶ್ನೆಯನ್ನೇ ಮತ್ತೆ ಕೇಳಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ ಅಯ್ಯೋ, ಅಯ್ಯೋ ಯಾವಾಗ ಮೀಟ್ ಮಾಡಿರೋದು ಮರ್ರೆ. ಮನಸಿಗೆ ಖುಷಿಯಾಗಿದೇ. ಈಗೆ ಇರಿ ಆಯ್ತಾ ಜೀವನದಲ್ಲಿ ಎಂದು ಕಮೆಂಟ್ ಮಾಡಿದ್ದಾರೆ..

67

ಸದ್ಯಕ್ಕಂತೂ ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.  ಜೊತೆಗೆ ಖಾಸಗಿ ವಾಹಿನಿಯಲ್ಲಿ ಕ್ರಿಕೆಟ್ ಬಗ್ಗೆ ನಿರೂಪಣೆ ಮಾಡ್ತಿದ್ದಾರೆ. ಇನ್ನು ಈಗಾಗಲೇ ಕಲರ್ಸ್ ಕನ್ನಡದ (colors Kannada) ಸೀರಿಯಲ್ ಒಲವಿನ ನಿಲ್ದಾಣದಲ್ಲಿ ಆರ್ ಜೆ ಆಗಿ ಕೂಡ ಸ್ಪೆಷಲ್ ಎಪಿಯರೆನ್ಸ್ ಮಾಡಿದ್ದಾರೆ. 

77

ಬಹಳ ದಿನಗಳ ನಂತರ ಇಬ್ಬರು ಭೇಟಿಯಾಗಿದ್ದು, ಇಬ್ಬರ ಫೋಟೋ ಸದ್ಯ ಭಾರಿ ವೈರಲ್ ಆಗುತ್ತಿದೆ. ಇಬ್ಬರ ನಡುವೆ ಪ್ರೀತಿ ಇದೆ, ಮದ್ವೆ ಯಾವಾಗ ಎಂದೆಲ್ಲಾ ಜನ ಪ್ರಶ್ನಿಸುತ್ತಿರುತ್ತಾರೆ. ಆದರೆ ಇಬ್ಬರೂ ಮಾತ್ರ ಇಲ್ಲಿವರೆಗೆ ಈ ಬಗ್ಗೆ ಏನೂ ಮಾತನಾಡಿಲ್ಲ. 
 

Read more Photos on
click me!

Recommended Stories