ಭಾಗ್ಯಲಕ್ಷ್ಮೀ ಸೀರಿಯಲ್ ನಟ ತಾಂಡವ್ ರಿಯಲ್ ಪತ್ನಿ ಖ್ಯಾತ ನಟಿ ಅನ್ನೋದು ಗೊತ್ತಾ?

Published : Apr 10, 2023, 06:24 PM IST

ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಅಕ್ಕ ತಂಗಿಯರ ಸೀರಿಯಲ್ ನಲ್ಲಿ ಅಕ್ಕ ಭಾಗ್ಯಾಳ ಪತಿಯಾಗಿ ನಟಿಸಿರುವ ತಾಂಡವ್ ಅವರ ನಿಜವಾದ ಪತ್ನಿ ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಅನ್ನೋದು ನಿಮಗೆ ತಿಳಿದಿದ್ಯಾ? ಯಾರವರು ನೋಡಿ…. 

PREV
18
ಭಾಗ್ಯಲಕ್ಷ್ಮೀ ಸೀರಿಯಲ್ ನಟ ತಾಂಡವ್ ರಿಯಲ್ ಪತ್ನಿ ಖ್ಯಾತ ನಟಿ ಅನ್ನೋದು ಗೊತ್ತಾ?

ಕಲರ್ಸ್ ಕನ್ನಡದಲ್ಲಿ (colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಸದ್ಯ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಜನರಿಂದಲೂ ಸೀರಿಯಲ್ ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಸೀರಿಯಲ್ ನಲ್ಲಿ ಭಾಗ್ಯ - ಲಕ್ಷ್ಮೀ ಪಾತ್ರ ಎಷ್ಟು ಜನಪ್ರಿಯತೆ ಗಳಿಸಿದೆಯೋ, ಅಷ್ಟೇ ಪ್ರೀತಿ ಭಾಗ್ಯ ಗಂಡ ತಾಂಡವ್ ಸಹ ಗಳಿಸಿದ್ದಾರೆ ಅನ್ನೋದು ನಿಜಾ… 

28

ಯಾವಾಗಲೂ ಹೆಂಡತಿಯನ್ನು ಬಯ್ಯುತ್ತಿರುವ, ಹೆಂಡತಿಯನ್ನು ಕಂಡ್ರೇನೆ ಆಗದೇ ಇರೋ ಕೋಪಿಷ್ಟ ಪತಿ ತಾಂಡವ್ ಪಾತ್ರದಲ್ಲಿ ಕಾಣಿಸಿಕೊಳ್ತಾ ಇರೋದು ಸುದರ್ಶನ್ ರಂಗನಾಥ್. ಇವರು ನಟನಾ ಜಗತ್ತಿಗೆ ಬರೋ ಮೊದ್ಲು ಸ್ಟಾಂಡ್ ಅಪ್ ಕಾಮಿಡಿಯನ್ ಆಗಿದ್ದರು. ಟಿವಿ, ಶೋಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟು ಫೇಮಸ್ ಆಗಿದ್ದರು. 
 

38

ರೀಲ್ ನಲ್ಲಿ ಕೋಪಿಷ್ಟ ಗಂಡ ಆಗಿರೋ ಸುದರ್ಶನ್ ನಿಜ ಜೀವನದಲ್ಲಿ ಪರ್ಫೆಕ್ಟ್ ಹಸ್ಪೆಂಡ್. ಸುದರ್ಶನ್ ಅವರ ಪತ್ನಿ ಯಾರು ಗೊತ್ತಾ? ಇವರು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ, ತಮ್ಮ ನೈಜ್ಯ ಅಭಿನಯದ ಮೂಲಕ ಮೋಡಿ ಮಾಡಿದ ನಟಿ ಸಂಗೀತಾ ಭಟ್. 
 

48

ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ ಸಿನಿಮಾಗಳಲ್ಲಿ ನಟಿಸಿ, ಜನರಿಂದ ಮೆಚ್ಚುಗೆ ಗಳಿಸಿದ್ದ ನಟಿ, ಬಳಿಕ ಮೀಟೂ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದರು. ಇದರಿಂದ ಅವರ ಕರಿಯರ್ ಮೇಲೆ ಭಾರಿ ಪೆಟ್ಟು ಬಿದ್ದು, ಚಿತ್ರರಂಗದಿಂದಲೇ ದೂರವಿದ್ದರು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. 

58

ಇನ್ನು ಸಂಗೀತಾ (Sangeetha Bhat) ಮತ್ತು ಸುದರ್ಶನ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಇಬ್ಬರೂ ಮದ್ವೆ ಆಗಿ 7 ವರ್ಷ ಕೂಡ ಆಗಿದೆ. ಮದ್ವೆಗೂ ಮುಂಚೆ ಮೂರು ವರ್ಷ ಪ್ರೀತಿಸಿದ್ದ ಈ ಜೋಡಿಗೆ ಮನೆಯವರೇ ಬೇಗನೆ ಮದ್ವೆ ಆಗುವಂತೆ ಹೇಳಿದ್ರಂತೆ. ಮನೆಯವರ ಒಪ್ಪಿಗೆಯಂತೆ ಇಬ್ರೂ ಸಣ್ಣ ಕಾರ್ಯಕ್ರಮವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದರು.
 

68

ಸೀರಿಯಲ್ ನಲ್ಲಿ ಪತ್ನಿ ಮೇಲೆ ಮಾಡುವಂತಹ ತಾಂಡವ್ ರಿಯಲ್ ಲೈಫ್ ನಲ್ಲಿ ತುಂಬಾನೆ ತಾಳ್ಮೆಯ ವ್ಯಕ್ತಿಯಂತೆ. ಒಂದು ದಿನವೂ ಪತ್ನಿಯ ಮೇಲೆ ಕೋಪ ಮಾಡಿಕೊಂಡು ಇರುವ ಪತಿಯೇ ಅಲ್ವಂತೆ ಎಂದು ಸಂಗೀತಾ ಹೇಳಿದ್ರೆ. ಇನ್ನೂ ಸಂಗೀತ ಅಂತಹ ಪತ್ನಿ ಸಿಕ್ಕಿದ್ದೇ ನನ್ನ ಅದೃಷ್ಟ ಅಂತಾರೆ ಸುದರ್ಶನ್. 

78

ಪ್ರೀತಿ ವಿಷ್ಯಕ್ಕೆ ಬಂದ್ರೆ ನಾವಿಬ್ಬರೇ ನಮಗೆ ಮುಖ್ಯ ಎನ್ನುವ ಈ ಜೋಡಿಗಳು. ಪ್ರೊಫೆಶನ್, ಗುರಿ, ಹಣ ಎಲ್ಲಾದಕ್ಕಿಂತ ಮುಖ್ಯ ನಮಗೆ ನಮ್ಮ ಲವ್ ಎನ್ನುತ್ತಾರೆ. ಇಬ್ಬರೂ ಜೊತೆಯಾಗಿ ಇರೋವಾಗ ಇಬ್ಬರಿಗಾಗಿಯೇ ಸಮಯ ಮೀಸಲಿಡ್ತಾರೆ ಅಂತೆ, ಮೊಬೈಲ್ ಫೋನ್ ಎಲ್ಲವೂ ಸೈಡ್ ಲ್ಲಿ ಇಟ್ಟು, ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಾರಂತೆ ಈ ಜೋಡಿ. 
 

88

ಇನ್ನು ಸದ್ಯ ಸುದರ್ಶನ್ (Sudarshan Rangaprasad) ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದರೆ, ಸಂಗೀತಾ ಭಟ್ ಮತ್ತೆ ಚಿತ್ರ ರಂಗದತ್ತ ಮುಖ ಮಾಡಿದ್ದಾರೆ. ರೂಪಾಂತರ, 48 ಹವರ್ಸ್ ಸಿನಿಮಾಗಳಲ್ಲಿ ಇತ್ತೀಚಿಗೆ ನಟಿಸಿದ್ದರು, ಮತ್ತು ಸೀರಿಯಲ್ ಗಳಲ್ಲಿ ನಟಿಸಿದ್ದರು. 
 

Read more Photos on
click me!

Recommended Stories