ಹೊಸ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸ್ತಿದ್ದಾರಾ ನೇಹಾ ಗೌಡ ಪತಿ ಚಂದನ್?

Published : Apr 11, 2023, 12:34 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ ಕಿರುತೆರೆಯ ಗೊಂಬೆ ಎಂದೇ ಜನಪ್ರಿಯರಾಗಿರುವ ನೇಹಾ ಗೌಡ ಪತಿ ಚಂದನ್ ಗೌಡ ಇದೀಗಾ ಸೀರಿಯಲ್ ನಲ್ಲಿ ನಾಯಕರಾಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ. 

PREV
17
ಹೊಸ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸ್ತಿದ್ದಾರಾ ನೇಹಾ ಗೌಡ ಪತಿ ಚಂದನ್?

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿರುವ ಗೊಂಬೆ ಆಲಿಯಾಸ್ ನೇಹಾ ಗೌಡ (Neha Gowda) ಅವರ ಪತಿ ಚಂದನ್ ಗೌಡರನ್ನು ನೀವು ಈಗಾಗಲೇ ರಾಜ ರಾಣಿ ಶೋ ಮತ್ತು ಡ್ಯಾನ್ಸ್ ಶೋನಲ್ಲೂ ನೋಡಿರಬಹುದು. ಇದೀಗ ಹೊಸ ವಿಷ್ಯ ಏನಂದ್ರೆ ಇದೇ ಚಂದನ್ ಸದ್ಯದಲ್ಲೇ ಸೀರಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ತಿದ್ದಾರಂತೆ.

27

ನೇಹಾ ಗೌಡ ಪತಿ ಚಂದನ್ (Chandan Gowda( ಕಲರ್ಸ್ ವಾಹಿನಿಯ ರಾಜಾ ರಾಣಿ ಶೋನಲ್ಲಿ ಪತ್ನಿ ಜೊತೆ ಭಾಗವಹಿಸಿ, ವಿಜೇತರಾಗಿ ರಾಜ - ರಾಣಿ ಪಟ್ಟ ಕೂಡ ಪಡೆದಿದ್ದರು. ಪತ್ನಿಗಾಗಿ ವಿದೇಶದಲ್ಲಿದ್ದ ಕೆಲಸವನ್ನೇ ಬಿಟ್ಟು ಬಂದಿದ್ದ ಚಂದನ್ ಇದಾದ ಬಳಿಕ ಡ್ಯಾನ್ಸ್ ಶೋನಲ್ಲೂ ಭಾಗಿಯಾಗಿ, ಡ್ಯಾನ್ಸ್ ಮೂಲಕವೂ ತಮ್ಮ ಝಲಕ್ ತೋರಿಸಿದ್ದರು. 

37

ಇದೀಗ ಚಂದನ್ ಗೌಡ, ಸೀರಿಯಲ್ ಒಂದರಲ್ಲಿ ನಾಯಕನಾಗಿ (Hero in serial) ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಹಾಗಿದ್ರೆ ಅವರು ಯಾವ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರಾ? ಈ ಸೀರಿಯಲ್ ಯಾವ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಗೊತ್ತೆ?
 

47

ಕಲರ್ಸ್ ವಾಹಿನಿಯಲ್ಲಿ (colors kannada) ಪ್ರಸಾರವಾಗಲಿರುವ ಅಂತರಪಟ ಎನ್ನುವ ಧಾರವಾಹಿಗೆ ನಾಯಕರಾಗುತ್ತಿದ್ದಾರೆ. ಈಗಾಗಲೇ ಅಂತರಪಟ ಸೀರಿಯಲ್ ನ ಪ್ರೊಮೋ ಬಿಡುಗಡೆಯಾಗಿದ್ದು, ಅದರಲ್ಲಿ ನಾಯಕಿಯ ಪಾತ್ರದ ಪರಿಚಯ ಮಾಡಿಸಲಾಗಿದೆ. ಇದರಲ್ಲಿ ನಾಯಕಿಯಾಗಿ ತನ್ವಿಯಾ ಬಾಲರಾಜ್ ನಟಿಸುತ್ತಿದ್ದಾರೆ. ಇವರೂ ಹೊಸ ಪರಿಚಯ.

57

ಸ್ವಪ್ನ ಕೃಷ್ಣ ಅವರ ನಿರ್ಮಾಣ, ನಿರ್ದೇಶನದ ಧಾರವಾಹಿ ಅಂತರಪಟ (AntaraPata serial) ಸದ್ಯದಲ್ಲೇ ಇದು ಪ್ರಸಾರ ಆರಂಭಿಸಲಿದೆ ಎನ್ನಲಾಗುತ್ತಿದೆ. ಆದರೆ ಯಾವ ಸೀರಿಯಲ್ ಮುಗಿಯಲಿದೆ ಮತ್ತು ಯಾವಾಗ ಸೀರಿಯಲ್ ಆರಂಭವಾಗಲಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇದೇ ಸೀರಿಯಲ್ ನಲ್ಲಿ ನಾಯಕನಾಗಿ ಚಂದನ್ ನಟಿಸುತ್ತಿದ್ದಾರೆ.

67

ಸದ್ಯದಲ್ಲೇ ಚಂದನ್ ಅವರ ಪ್ರೋಮೋ ಕೂಡ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯೂ ಇದೆ. ಚಂದನ್ ಅವರಿಗೆ ನಟನೆ ಹೊಸತು. ವಿದೇಶದಲ್ಲಿ ಕೆಲಸದಲ್ಲಿದ್ದ ಚಂದನ್ ರಿಯಾಲಿಟಿ ಶೋಗಾಗಿಯೇ (reality show) ಕೆಲಸ ಬಿಟ್ಟು ಭಾರತಕ್ಕೆ ಬಂದಿದ್ರು, ಆದಾದ ಬಳಿಕ ಅವರಿಗೆ ಹೊಸ ಹೊಸ ಅವಕಾಶಗಳು ದೊರೆಯುತ್ತಿದ್ದು, ಇದೀಗ ಸೀರಿಯಲ್‌ನಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. 

77

ಪ್ರೀತಿಯಲ್ಲಿ, ಡ್ಯಾನ್ಸಿಂಗ್ ಶೋ ನಲ್ಲಿ ಸೈ ಎನಿಸಿಕೊಂಡಿರುವ ಚಂಡನ್ ಗೌಡ ನಟನೆಯಲ್ಲಿ ಪತ್ನಿಯಂತೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗ್ತಾರಾ ಅನ್ನೋದನ್ನು ಅಂತರಪಟ ಸೀರಿಯಲ್ ಬಿಡುಗಡೆಯಾದ ಮೇಲೆಯೇ ತಿಳಿಯಬೇಕು. ಅದಕ್ಕೂ ಮುನ್ನ ಪ್ರೋಮೋ ಹೇಗಿರಲಿ ಕಾದು ನೋಡಿ.. 

Read more Photos on
click me!

Recommended Stories