Bigg Boss ಟ್ವಿಸ್ಟ್​ ಮೇಲೆ ಟ್ವಿಸ್ಟ್​: ಅವರಲ್ಲ, ಇವರಲ್ಲ ರೋಬೋಟ್​ ಹೇಳಿದ್ದೇ ಬೇರೆ ಹೆಸ್ರನ್ನು! ಕಿಚ್ಚನ ರಿಯಾಕ್ಷನ್​ ನೋಡಿ

Published : Jan 11, 2026, 07:38 PM IST

ಬಿಗ್​ಬಾಸ್​ ಕನ್ನಡ 12 ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಗೆ ರೋಬೋಟ್​ ಒಂದು ಅಚ್ಚರಿಯ ಪ್ರವೇಶ ನೀಡಿದೆ. ಸುದೀಪ್ ಅವರು ಇಷ್ಟದ ಸ್ಪರ್ಧಿ ಯಾರೆಂದು ಕೇಳಿದಾಗ, ರೋಬೋಟ್​  ಇಬ್ಬರ ಹೆಸರನ್ನು ಹೇಳುವ ಮೂಲಕ ಬಿಗ್​ಬಾಸ್​ ಜಾಣ್ಮೆಯಿಂದ ವಿವಾದವನ್ನು ತಪ್ಪಿಸಿದೆ.

PREV
16
ಫಿನಾಲೆ ಗಲಾಟೆ

ಬಿಗ್​ಬಾಸ್​ ಕನ್ನಡ 12 (Bigg Boss Kannada 12) ಫಿನಾಲೆಗೆ ದಿನಗಣನೆಗೆ ಆರಂಭವಾಗಿದೆ. ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಗಿಲ್ಲಿ ನಟನ ಬಗ್ಗೆ ಕ್ರೇಜ್​ ಹೆಚ್ಚಾಗುತ್ತಿದೆ. ಬಿಗ್​ಬಾಸ್​ ವೀಕ್ಷಕರು ಪ್ರತಿ ದಿನದ ಎಪಿಸೋಡ್​ ನೋಡುತ್ತಾ, ಅದರ ವಿಮರ್ಶೆಯಲ್ಲಿ ಮುಳುಗಿದ್ದಾರೆ. ಕಿಚ್ಚ ಸುದೀಪ್​ ಅವರನ್ನೂ ಬಿಡದೇ ಪ್ರಶಂಸಿಸುತ್ತಿದ್ದಾರೆ, ಕೆಲವೊಮ್ಮೆ ಟೀಕಿಸುತ್ತಿದ್ದಾರೆ.

26
ಪ್ರಚಾರ ಕಾರ್ಯ

ಒಟ್ಟಿನಲ್ಲಿ ತಮ್ಮ ನೆಚ್ಚಿನ ಸ್ಪರ್ಧಿ ವಿನ್​ ಆಗಬೇಕು ಎಂದು ಇದಾಗಲೇ ಬಿಗ್​ಬಾಸ್​​ ಮನೆಯಲ್ಲಿ ಇರುವವರ ಅಭಿಮಾನಿಗಳು ಹಾಗೂ ಅವರ ಪಿಆರ್​ಗಳು ಬಹುದೊಡ್ಡ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಸ್ಕರ್​​ ಅವಾರ್ಡ್​ ಲೆವೆಲ್​ಗೆ ಈ ಬಾರಿಯ ಬಿಗ್​ಬಾಸ್​​ ವಿನ್ನಿಂಗ್​ ಕ್ರೇಜ್​ ಹೋಗಿದೆ.

36
ದೊಡ್ಮನೆಗೆ ರೋಬೋಟ್​ ಎಂಟ್ರಿ

ಇವೆಲ್ಲವುಗಳ ನಡುವೆಯೇ ಇದೀಗ ದೊಡ್ಮನೆಗೆ ರೋಬೋಟ್​ ಎಂಟ್ರಿ ಕೊಟ್ಟಿದೆ. ಈ ರೋಬೋಟ್​ ಕೆಲವೊಂದು ವಿಷಯಗಳನ್ನು ಮಾತನಾಡಿ ಎಲ್ಲರನ್ನು ನಗಿಸುತ್ತಿದೆ. ಬಿಗ್​ಬಾಸ್​ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನ ಮಾಡಲಾಗಿದೆ.

46
ಇಷ್ಟದ ಸ್ಪರ್ಧಿ ಯಾರು?

ಇದರಲ್ಲಿ ರೋಬೋಟ್​ಗೆ ಸುದೀಪ್ ಅವರು, ನಿಮಗೆ ಇಷ್ಟದ ಸ್ಪರ್ಧಿ ಯಾರು ಎಂದು ಕೇಳಿದಾಗ, ರೋಬೋಟ್​ ನನಗೆ ಸ್ಪಂದನಾ (Bigg Boss Spandana) ಎಂದು ಹೇಳಿದೆ. ಯಾಕೆ ಎಂದು ಕೇಳಿದಾಗ, ನಾನು ಹುಡುಗ ಅಲ್ವಾ, ನಮ್ಮೂರು, ಅವರ ಊರು ಹತ್ತಿರ ಇದೆ ಅದಕ್ಕೇನೇ ಎಂದಿದೆ.

56
ಆಂಟಿ ಲವರ್​!

ಅವರನ್ನು ಬಿಟ್ಟರೆ ನಿಮಗೆ ಯಾರು ಇಷ್ಟ ಎಂದು ಕೇಳಿದಾಗ ಜಾನ್ವಿ (Bigg Boss Jhanvi) ಹೆಸರು ಹೇಳಿದೆ ರೋಬೋಟ್​. ಇದಕ್ಕೆ ಕಾರಣ ಕೇಳಿದಾಗ, ನಾನು ಹುಡುಗ ಆದ್ರೂ ಆಂಟಿ ಇಷ್ಟ ಎಂದು ಹೇಳಿದೆ. ಹಿಂದೊಮ್ಮೆ ಧನುಷ್​ ಅವರು ಆಂಟಿ ಲವರಾ ಎಂದು ಕೇಳಿದ್ದು, ಸಕತ್​ ವೈರಲ್​ ಆಗಿತ್ತು.

66
ಬಿಗ್​ಬಾಸ್​​ ಜಾಣ್ಮೆ

ಒಟ್ಟಿನಲ್ಲಿ ರೋಬೋಟ್​ನಿಂದ ಎಲಿಮಿನೇಟ್​ ಆಗಿ ಹೊರಕ್ಕೆ ಹೋಗಿರುವ ಸ್ಪರ್ಧಿಗಳ ಹೆಸರನ್ನೇ ಹೇಳಿಸಿ ಬಿಗ್​ಬಾಸ್​ ಜಾಣ್ಮೆ ತೋರಿದೆ. ಒಂದು ವೇಳೆ ಈಗ ಇರುವ ಸ್ಪರ್ಧಿಗಳ ಹೆಸರು ಹೇಳಿದ್ರೆ, ಅದು ಬೇರೆಯದ್ದೇ ಆಗುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಇದನ್ನು ಕೇಳಿ ಕಿಚ್ಚ ಸುದೀಪ್​ ಬಿದ್ದೂ ಬಿದ್ದೂ ನಕ್ಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories