ಲೈಸೆನ್ಸ್ ಇಲ್ಲ ಏನ್ ಇಲ್ಲ 44 ಲಕ್ಷ ರೂಪಾಯಿ ಕಾರು ಬೇಕಾ?; ಕಿರುತೆರೆ ಛತ್ರಿವಾಲಿ ನಟಿ ಕಾಲೆಳೆದ ನೆಟ್ಟಿಗರು

Published : Mar 20, 2023, 03:26 PM IST

ತಾಯಿಯಿಂದ 44 ಲಕ್ಷ ರೂಪಾಯಿ ಬೆಲೆಯ ಕಾರನ್ನು ಗಿಫ್ಟ್‌ ಅಗಿ ಪಡೆದ ರಿವಾ ಅರೋರಾ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್...

PREV
16
ಲೈಸೆನ್ಸ್ ಇಲ್ಲ ಏನ್ ಇಲ್ಲ 44 ಲಕ್ಷ ರೂಪಾಯಿ ಕಾರು ಬೇಕಾ?; ಕಿರುತೆರೆ ಛತ್ರಿವಾಲಿ ನಟಿ ಕಾಲೆಳೆದ ನೆಟ್ಟಿಗರು

ರಕುಲ್ ಪ್ರೀತ್ ಸಿಂಗ್ ನಟಿಸಿರುವ ಛತ್ರಿವಾಲಿ ಸಿನಿಮಾದಲ್ಲಿ ಅಭಿನಯಿಸಿರುವ ರಿವಾ ಅರೋರಾ 44 ಲಕ್ಷ ರೂಪಾಯಿ ಬೆಲೆಯ ಕಾರಿನ ಮುಂದೆ ನಿಂತು ಪೋಸ್ ಕೊಟ್ಟಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

26

16 ವರ್ಷದ ನಟಿ ರಿವಾ ಅರೋರಾ ಇನ್‌ಸ್ಟಾಗ್ರಾಂನಲ್ಲಿ 10 ಮಿಲಿಯನ್ ಅಂದ್ರೆ 100 ಕೋಟಿ ಫಾಲೋವರ್ಸ್‌ನ ಪಡೆದುಕೊಂಡಿದ್ದಾರೆ. ಇದೇ ಖುಷಿಗೆ ಹೊಸ ಕಾರನ್ನು ಗಿಫ್ಟ್‌ ಆಗಿ ಪಡೆದಿರುವುದಕ್ಕೆ ಖುಷಿ ವ್ಯಕ್ತ ಪಡಿಸಿದ್ದಾರೆ. 

36

'ನಾನು ತಡವಾಗಿ ಬರೆಯುತ್ತಿರುವೆ. 10 ಮಿಲಿಯನ್ ಇನ್‌ಸ್ಟಾಗ್ರಾಂನ ಫಾಲೋವರ್ಸ್‌ನ ಸಂಭ್ರಮಿಸುತ್ತಿರುವೆ. ಇದೇ ವೇಳೆ ಹೊಸ ಅಡಿ ಕಾರನ್ನು ಪೋಷಕರು ಗಿಫ್ಟ್‌ ಮಾಡಿದ್ದಾರೆ. ಪದಗಳಲ್ಲಿ ನನ್ನ ಸಂತೋಷವನ್ನು ವರ್ಣಿಸಲು ಆಗಲ್ಲ' ಎಂದು ರಿವಾ ಬರೆದುಕೊಂಡಿದ್ದಾರೆ.

46

'ಸದ್ಯಕ್ಕೆ 10.6 ಮಿಲಿಯನ್ ಫಾಲೋವರ್ಸ್‌ನ ಹೊಂದಿರುವೆ. ನಿಮ್ಮ ಪ್ರೀತಿ ಮತ್ತು ಸಹಾಯದಿಂದ ಇದೆಲ್ಲಾ ಸಾಧ್ಯವಾಗಿದ್ದು. ಮುಂಬೈನಲ್ಲಿರುವ ಆಡಿ ಕಾರಿನವರು ನನ್ನ ದೊಡ್ಡ ಸರ್ಪ್ರೈಸ್ ಕೊಟ್ಟರು. ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣವನ್ನು ಕ್ರಿಯೇಟ್ ಮಾಡಿ ಕೊಟ್ಟರು' ಎಂದಿದ್ದಾರೆ ರಿವಾ.

56

ಲೈಸೆನ್ಸ್‌ ಇಲ್ಲದೆ ಇಷ್ಟೊಂದು ದುಬಾರಿ ಕಾರನ್ನು ಖರೀದಿಸಿದ್ದಾರೆ. ಮೊದಲು LL ಪಡೆಯುವ ಶಕ್ತಿ ಇದ್ಯಾ ನೋಡಿಕೋ ಆಮೇಲೆ ಗಾಡಿ ಓಡಿಸುವುದರ ಬಗ್ಗೆ ಚಿಂತೆ ಮಾಡು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

66

'ಜನರು ನನಗೆ 16 ವರ್ಷ ಇಷ್ಟು ಹಣ ಸಾಧನೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ನಾನು ಉತ್ತರ ಕೊಡುವ ಅಗತ್ಯವೇ ಇಲ್ಲ. ಅಪಾರ ಪ್ರೀತಿ ಕೊಡುತ್ತಿರುವ ಜನರೇ ಸಾಕು ನನಗೆ. ಈ ಪ್ರೀತಿಯಿಂದ ನೆಗೆಟಿವ್ ಎನರ್ಜಿಯನ್ನು ದೂರ ಮಾಡುತ್ತಿರುವೆ. ನನ್ನ ಗುರಿ ಮೇಲೆ ಹೆಚ್ಚುಗೆ ಗಮನ ಕೊಡುತ್ತಿರುವೆ' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. 

Read more Photos on
click me!

Recommended Stories