ಈ ವಯಸ್ಸಲ್ಲಿ ನಿಮ್ಮ ಸಾಧನೆಗೆ ಹೆಮ್ಮೆ ಆಗುತ್ತೆ; ಕಾನೂನು ಪದವಿ ಪಡೆದ ತಾಯಿಗೆ ವೈಷ್ಣವಿ ಗೌಡ ಮೆಚ್ಚುಗೆ

Published : Mar 20, 2023, 10:41 AM IST

ಅಗ್ನಿಸಾಕ್ಷಿ ವೈಷ್ಣವಿ ಗೌಡ ತಾಯಿ ಈಗ ವಕೀಲೆ. ಸಾಧನೆ ಮೆಚ್ಚಿ ಸಾಲುಗಳನ್ನು ಬರೆದುಕೊಂಡ ಬಿಗ್ ಬಾಸ್ ಸ್ಪರ್ಧಿ....

PREV
17
ಈ ವಯಸ್ಸಲ್ಲಿ ನಿಮ್ಮ ಸಾಧನೆಗೆ ಹೆಮ್ಮೆ ಆಗುತ್ತೆ; ಕಾನೂನು ಪದವಿ ಪಡೆದ ತಾಯಿಗೆ ವೈಷ್ಣವಿ ಗೌಡ ಮೆಚ್ಚುಗೆ

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಈಗ ಸಾಮಾಜಿಕ ಜಾಲತಾಣದಲ್ಲಿ ತಾಯಿ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

27

ಹೌದು! ವೈಷ್ಣವಿ ಅವರ ತಾಯಿ ಭಾನು ರವಿಕುಮಾರ್ ಈಗ ಲಾ ಪದವಿ ಮುಗಿಸಿ ಕಪ್ಪು ಕೋಟ್‌ ಧರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಕೂಡ ಹಂಚಿಕೊಂಡಿದ್ದಾರೆ.

37

'ಮನೆಯಲ್ಲೀಗ ವಕೀಲರು ಇದ್ದಾರೆ. ನೀವು ಯಾವಾಗಲೂ ವಯಸ್ಸು ಕೇವಲ ನಂಬರ್‌ ಎಂದು ಕಲಿಸಿದ್ದೀರಿ. ಈ ವಯಸ್ಸಿನಲ್ಲಿ ನೀವು ಏನು ಸಾಧನೆ ಮಾಡಿದ್ದೀರ ಅದನ್ನು ನೋಡಿ ಹೆಮ್ಮೆ ಪಡುವೆ' ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.

47

ವೈಷ್ಣವಿ ಕೆಲಸದ ವಿಚಾರದಲ್ಲಿ ಅವರ ತಾಯಿ ಭಾನು ರವಿಕುಮಾರ್ ತುಂಬಾನೇ ಸಪೋರ್ಟ್ ಮಾಡುತ್ತಾರೆ. ಬೋಲ್ಡ್‌ ಆಗಿ ಯೊಚನೆ ಮಾಡುವ ಭಾನು ಅವರು ಮಗಳ ಪರವಾಗಿ ಹಲವಾರು ಸಲ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.

57

ಕೆಲವು ದಿನಗಳ ಹಿಂದೆ ವೈಷ್ಣವಿ ತಾಯಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ವಿಚಾರ ದೊಡ್ಡ ಸುದ್ದಿ ಆಗಿತ್ತು. ನನ್ನ ತಾಯಿ ಯೋಗ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಈ ಹಿಂದೆ ವೈಷ್ಣವಿ ಹೇಳಿದ್ದರು. 

67

ಇದರ ನಡುವೆ ವೈಷ್ಣವಿ ಹೊಸ ಮನೆ ಖರೀದಿಸಿ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದರು. ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳು ಭಾಗಿಯಾಗಿ ವಿಶ್ ಮಾಡಿದ್ದರು.

77

ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಸೀರಾ ರಾಮಂ ಧಾರಾವಾಹಿಯಲ್ಲಿ ವೈಷ್ಣವಿ ಅಭಿನಯಿಸುತ್ತಿದ್ದಾರೆ. ಪ್ರೋಮೋಗಳ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ. ಶೀಘ್ರದಲ್ಲಿ ಪ್ರಸಾರವಾಗಲಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories