ಕೌನ್​ ಬನೇಗಾ ಕರೋರ್​ಪತಿಯಲ್ಲಿ Rishab Shetty ಗೆದ್ದ ಹಣವೆಷ್ಟು? ಎಡವಿದ್ದೆಲ್ಲಿ? ಉತ್ತರ ಗೊತ್ತಾ?

Published : Oct 18, 2025, 03:00 PM IST

ಕೌನ್​ ಬನೇಗಾ ಕರೋರ್​ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ರಿಷಬ್ ಶೆಟ್ಟಿ, 12 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ 12.50 ಲಕ್ಷ ರೂ. ಗೆದ್ದರು. ಈ ಹಣವನ್ನು ತಮ್ಮ ಫೌಂಡೇಷನ್‌ಗೆ ನೀಡುವುದಾಗಿ ಘೋಷಿಸಿದ ಅವರು, 'ಸೂಪರ್ ಸಂಧೂಕ್' ಸುತ್ತಿನಲ್ಲಿ ಸುಲಭ ಪ್ರಶ್ನೆಯೊಂದಕ್ಕೆ ತಪ್ಪು ಉತ್ತರ ನೀಡಿದರು,

PREV
18
ಕೌನ್​ ಬನೇಗಾ ಕರೋರ್​ಪತಿಯಲ್ಲಿ ರಿಷಬ್​ ಶೆಟ್ಟಿ

ಕಾಂತಾರಾ ಚಾಪ್ಟರ್​- 1 (Kantara Chapter 1) ಬಳಿಕ ರಿಷಬ್​ ಶೆಟ್ಟಿ ಅವರಿಗೆ ಈಗ ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಡಿಮಾಂಡ್​ ಹೆಚ್ಚಾಗಿದೆ. ಇದೇ ಕಾರಣಕ್ಕೆ ಇವರಿಗೆ ಬೇರೆ ಬೇರೆ ಷೋಗಳಲ್ಲಿ, ಸಂದರ್ಶನಗಳಲ್ಲಿ ಆಹ್ವಾನ ಬರುತ್ತದೆ. ಅದೇ ರೀತಿ ಅಮಿತಾಭ್​ ಬಚ್ಚನ್​ ಅವರು ನಡೆಸಿಕೊಡುವ ಕೌನ್​ ಬನೇಗಾ ಕರೋರ್​ಪತಿಯಲ್ಲಿಯೂ (Kaun Banega Crorepati- KBC 17) ಅವರಿಗೆ ಆಫರ್​ ಬಂದಿತ್ತು. ಈ ಸಮಯದಲ್ಲಿ ಇಬ್ಬರೂ ಸ್ಟಾರ್​ ನಟರು ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

28
12 ಪ್ರಶ್ನೆಗಳಿಗೆ ಉತ್ತರ

ಇದೇ ವೇಳೆ ರಿಷಬ್​ ಶೆಟ್ಟಿ (Rishab Shetty) ಅವರಿಗೆ ಸ್ಪರ್ಧೆಯಂತೆ ಪ್ರಶ್ನೆಗಳು ಎದುರಾದವು 12 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ನಟ ತುಂಬಾ ಸುಲಭ ಎಂದುಕೊಂಡಿದ್ದ ಪ್ರಶ್ನೆಗೇ ತಪ್ಪು ಉತ್ತರ ಕೊಟ್ಟುಬಿಟ್ಟರು. ಇದನ್ನು ನೋಡಿ ಅವರ ಅಭಿಮಾನಿಗಳು ಅಯ್ಯೋ ಎನ್ನುತ್ತಿದ್ದಾರೆ. ಆದರೆ ಈ ತಪ್ಪು ಪ್ರಶ್ನೆಗೆ ರಿಷಬ್​ ಶೆಟ್ಟಿ ಅವರು ಕಾರಣವನ್ನೂ ಕೊಟ್ಟಿದ್ದಾರೆ.

38
ರಿಷಬ್ ಫೌಂಡೇಷನ್

ಷೋಗೆ ಆರಂಭಕ್ಕೂ ಮುನ್ನ ರಿಷಬ್ ಶೆಟ್ಟಿ ಅವರು ಇಲ್ಲಿ ಗೆದ್ದಿರುವ ಹಣವನ್ನು ರಿಷಬ್​ ಫೌಂಡೇಷನ್​ಗೆ ಕೊಡುವುದಾಗಿ ಹೇಳಿದರು. ‘ನನ್ನ ಒಂದು ಫೌಂಡೇಷನ್ ಇದೆ. ರಿಷಬ್ ಫೌಂಡೇಷನ್. ಇದರ ಮೂಲಕ ಸರ್ಕಾರಿ ಶಾಲೆ ಹಾಗೂ ದೈವ ನರ್ತಕರಿಗೆ ಸಹಾಯ ಮಾಡಲು ಬಯಸುತ್ತೇನೆ’ ಎಂದು ರಿಷಬ್ ಹೇಳಿದರು.

48
ಗೆದ್ದ ಮೊತ್ತವೆಷ್ಟು?

ಅಂದಹಾಗೆ ರಿಷಬ್ ಶೆಟ್ಟಿ ಅವರು ಗೆದ್ದ ಮೊತ್ತವೆಷ್ಟು ಎಂದು ನೋಡುವುದಾದರೆ, ರಿಷಬ್ ಅವರು 12 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ 12.50 ಲಕ್ಷ ರೂಪಾಯಿಗಳನ್ನು ಗೆದ್ದಿದ್ದಾರೆ. ಅವರಿಗೆ ಮೊದಲ ಪ್ರಶ್ನೆ 50 ಸಾವಿರ ರೂಪಾಯಿಗೆ ಕೇಳಲಾಯಿತು. ‘ಲಾಫಿಂಗ್ ಬುದ್ಧ’ನ ಪ್ರಶ್ನೆ ಇದು. ಇದಕ್ಕೆ ಅವರು ಸರಿಯಾದ ಉತ್ತರ ಕೊಟ್ಟರು. ಕೊನೆಗೆ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟರು.

58
ಲೈಫ್​ಲೈನ್​ ಬಳಕೆ

‘ಇಂಡೋನೇಷ್ಯಾದಲ್ಲಿರುವ ಜೀವಂತ ಜ್ವಾಲಾಮುಖಿ ಕೆಳಗೆ ಹಿಂದೂ ದೇವರು ಇದೆ. ಅದು ಯಾವ ದೇವರು’ ಎಂಬ ಪ್ರಶ್ನೆಗೆ ಲೈಫ್​​ಲೈನ್ ಬಳಸಿಕೊಂಡು ‘ಗಣಪತಿ’ ಎಂದು ಹೇಳಿ 12.50 ಲಕ್ಷ ರೂಪಾಯಿ ಗೆದ್ದರು.

68
ಫೌಂಡೇಷನ್​ಗೆ ಹಲವು ಉಡುಗೊರೆ

ಇದರ ಜೊತೆಗೆ, ನಿಮ್ಮ ಫೌಂಡೇಷನ್​ಗೆ ‘ಹಿರೋ ಎಕ್ಸ್​ಟ್ರೀಮ್ 125’ ಬೈಕ್ ಕೂಡ ಸಿಗಲಿದೆ ಎಂದು ಅಮಿತಾಭ್ ಹೇಳಿದರು. ಮಾತ್ರವಲ್ಲದೇ, ರಿಷಬ್ ಖಾತೆಗೆ ಅಮಿತಾಭ್ ಬಚ್ಚನ್ ಅವರು 12.5 ಲಕ್ಷ ಹಣವನ್ನು ರಿಷಬ್ ಫೌಂಡೇಷನ್ ಖಾತೆಗೆ ವರ್ಗಾವಣೆ ಮಾಡಿದರು. ಇದಲ್ಲದೆ, 1500 ಕೆಜಿ ಅಕ್ಕಿ, 1,500 ಕೆಜಿ ಗೋಧಿ, 1500 ಕೆಜಿ ತುಪ್ಪವನ್ನು ಫೌಂಡೇಷನ್​ಗೆ ಸ್ಪಾನ್ಸರ್ ಕಡೆಯಿಂದ ನೀಡೋದಾಗಿ ಅಮಿತಾಭ್ ಘೋಷಿಸಿದರು.

78
'ಸೂಪರ್ ಸಂಧೂಕ್'ನಲ್ಲಿ ತಪ್ಪಾದ ಉತ್ತರ

ಆದರೆ ತಪ್ಪಾಗಿದ್ದು 'ಸೂಪರ್ ಸಂಧೂಕ್' ರೌಂಡ್‌ನಲ್ಲಿ. ಇದರ Rapid Fire ಪ್ರಶ್ನೆ ಕೇಳಲಾಯಿತು. 90 ಸೆಕೆಂಡ್‌ಗಳಲ್ಲಿ ಎಷ್ಟು ಪ್ರಶ್ನೆಗಳಿಗೆ ರಿಷಬ್ ಉತ್ತರ ಕೊಡುತ್ತಾರೆ ಎನ್ನುವುದು ಇದರ ಟಾಸ್ಕ್. ಭಾರತ ಪುರುಷ ಕ್ರಿಕೆಟ್ ತಂಡ ಮೊನ್ನೆ ಸೆಪ್ಟೆಂಬರ್​ನಲ್ಲಿ ಗೆದ್ದ ಟ್ರೋಫಿ ಯಾವುದು? ಎನ್ನುವ ಪ್ರಶ್ನೆ ಎದುರಾಗಿತ್ತು. A. ಏಷ್ಯಾ ಕಪ್ B. ವರ್ಲ್ಡ್ ಕಪ್ C. ಟಿ20 ವರ್ಲ್ಡ್ ಕಪ್ D. ಚಾಂಪಿಯನ್ಸ್ ಟ್ರೋಫಿ ಎಂಬ ಆಪ್ಷನ್‌ಗಳನ್ನು ಕೊಟ್ಟಿದ್ದರು. ರಿಷಬ್ ಶೆಟ್ಟಿ ವರ್ಲ್ಡ್ ಕಪ್ ಎಂದು ಗೆಸ್ ಮಾಡಿದ್ದರು. ಆದರೆ ಅದು ತಪ್ಪಾಗಿತ್ತು.

88
ಕಾರಣ ನೀಡಿದ ನಟ

ಇದಕ್ಕೆ ಕಾರಣವನ್ನೂ ರಿಷಬ್​ ಶೆಟ್ಟಿ ನೀಡಿದರು. 3 ವರ್ಷಗಳಿಂದ 'ಕಾಂತಾರ- 1' ಚಿತ್ರದಲ್ಲಿ ಅವರು ತಲ್ಲೀನರಾಗಿದ್ದಾರೆ. ಹಾಗಾಗಿ ಗೊತ್ತಾಗಲಿಲ್ಲ ಅಷ್ಟೆ. ಸಿನಿಮಾ ತೆರೆಕಂಡು 15 ದಿನ ಕಳೆದರೂ ಇನ್ನು ಪ್ರಚಾರದಲ್ಲೇ ಬ್ಯುಸಿಯಾಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Read more Photos on
click me!

Recommended Stories