ಅನುಪಮಾ ಗೌಡ ಜಾಗ ಸ್ವೀಕರಿಸಿದ್ದಕ್ಕೆ ಹಿಗ್ಗಾಮುಗ್ಗಾ ಬೀಪ್‌ ಪದಗಳಿಂದ ಬೈದ್ರು: ಜಾನ್ವಿ ರಾಯಲ

Published : Mar 15, 2023, 05:12 PM IST

ನಿರೂಪಣೆ ಆರಂಭದಲ್ಲಿ ಡಿಪ್ರೆಶನ್‌ಗೆ ಜಾರಿದ 'ರಾಜಾ ರಾಣಿ' ರಿಯಾಲಿಟಿ ಶೋ ನಿರೂಪಕಿ ಜಾನ್ವಿ ರಾಯಲ. 

PREV
17
ಅನುಪಮಾ ಗೌಡ ಜಾಗ ಸ್ವೀಕರಿಸಿದ್ದಕ್ಕೆ ಹಿಗ್ಗಾಮುಗ್ಗಾ ಬೀಪ್‌ ಪದಗಳಿಂದ ಬೈದ್ರು: ಜಾನ್ವಿ ರಾಯಲ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಹಾಗೂ ರಾಜಾ ರಾಣಿ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವ ಜಾನ್ವಿ ರಾಯಲ ಆರಂಭದಲ್ಲಿ ಸಾಕಷ್ಟು ಟ್ರೋಲ್‌ ಮತ್ತು ನೆಗೆಟಿವ್ ಮೆಸೇಜ್‌ಗಳನ್ನು ಎದುರಿಸಿದ್ದಾರೆ.

27

'ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳ ಬಗ್ಗೆ ಹೇಳಬೇಕು ಅಂದ್ರೆ ನಾನು ಟಿವಿ ಇಂಡಸ್ಟ್ರಿನ ಪ್ರವೇಶಿಸಿದಾಗ ಅನುಪಮಾ ಗೌಡನ ಅವರ ಸ್ಥಾನವನ್ನು ಸ್ವೀಕರಿಸಿದೆ ಅಂತ ನನಗೆ ತುಂಬಾ ಮೆಸೇಜ್‌ಗಳು ಬಂತು.' ಎಂದು ಭಾವನಾ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

37

'ಮೆಸೇಜ್ ನೋಡಿದರೆ ಬರೀ ಬೀಪ್ ಬೀಪ್ ಪದಗಳು ಇತ್ತು. ಒಂದು ಹುಡುಗಿಗೆ ಎಷ್ಟೆಲ್ಲಾ ಕೆಟ್ಟ ಪದಗಳನ್ನು ಬಳಸಬಹುದು ಅಷ್ಟು ನನಗೆ ಬಳಸಿದ್ದಾರೆ.' ಎಂದು ಜಾನ್ವಿ ಹೇಳಿದ್ದಾರೆ.

47

'ನಿರೂಪಣೆ ವಿಚಾರದಲ್ಲಿ ಅನುಪಮಾ ಗೌಡ ಒಳ್ಳೆ ಕೆಲಸ ಮಾಡಿದ್ದಾರೆ ನಾನು ಕೂಡ ಅವರ ಅಭಿಮಾನಿ ಆದರೆ ನಾನು ಕೂಡ ಹೊಸಬ್ಬಳು ನಾನು ಕೂಡ ಕಲಿಯುವುದಕ್ಕೆ ಬರುವುದು.' ಎಂದಿದ್ದಾರೆ ಜಾನ್ವಿ.

57

 'ಇಲ್ಲಿ ಎಲ್ಲರೂ 100% ಪರ್ಫೆಕ್ಟ್ ಆಗಿ ಆಂಕರಿಂಗ್ ಮಾಡಿಲ್ಲ ಎಲ್ಲರೂ ಒಂದು ಜರ್ನಿ ದಾಟಿ ಬಂದಿರುವುದ. ಪ್ರತಿಯೊಬ್ಬರೂ ಅನುಭವಗಳಿಂದ ಕಲಿಯುತ್ತಿದ್ದಾರೆ. ನೀನು ಯಾಕೆ ಬಂದಿದ್ಯಾ? ಬಿಟ್ಟು ಹೋಗು ನಿನ್ನ ವಾಯ್ಸ್‌ ನೋಡು ಕತ್ತೆ ತರ ಇದೆ ಹುಡುಗಿಗೆ ಇರಬೇಕಾದ ಯಾವುದಾದರೂ ಗುಣ ಇದ್ಯಾ?ಕೆಟ್ಟದಾಗಿ ನಗುತ್ತೀಯಾ' ಎಂದು ಜಾನ್ವಿ ಮಾತನಾಡಿದ್ದಾರೆ.

67

'ನಮಗೆ ಅನುಪಮಾ ಗೌಡ ವಾಪಸ್ ಬೇಕು ಎನ್ನುತ್ತಿದ್ದರು. ಒಂದು ಸಯಮದಲ್ಲಿ ಎಷ್ಟು ಬೇಸರ ಅಯ್ತು ಅಂದ್ರೆ ಡಿಪ್ರೆಶನ್‌ ಅನ್ನೋ ಪದ ಬಳಸುವುದಕ್ಕೆ ಇಲ್ಲ ಏಕೆಂದರೆ ಎಲ್ಲರೂ ಬಳಸುತ್ತಾರೆ ಆದರೆ ಆ ಕ್ಷಣ ಯಾಕೆ ಬಂದೆ ನಾನು ಈ ಇಂಡಸ್ಟ್ರಿಗೆ ಅನಿಸಿತ್ತು.' ಎಂದು ಹೇಳಿದ್ದಾರೆ.

77

'ಏನೇ ನೆಗೆಟಿವ್ ಇದ್ದರೂ ಚಾನೆಲ್‌ ಅವರು ನನ್ನ ಪರ ನಿಂತುಕೊಂಡರು. ನನ್ನ ವೃತ್ತಿ ಜೀವನ ನನ್ನ ಪರ್ಸನಲ್‌ ಲೈಫ್ ಚೆನ್ನಾಗಿರಬೇಕು ಅಂದ್ರೆ ನನ್ನ ಪತಿ ಸಪೋರ್ಟ್‌ ಕಾರಣ. ನನ್ನ ಪತಿ ನನಗೆ ಬಿಗ್ ಸಪೋರ್ಟ್‌ ಆಗಿದ್ದಾರೆ' ಎಂದಿದ್ದಾರೆ ಜಾನ್ವಿ.

Read more Photos on
click me!

Recommended Stories