ಇತ್ತೀಚೆಗಷ್ಟೆ ಸತ್ಯ ಸೀರಿಯಲ್ ನಾಯಕ ನಟ ಸಾಗರ್ ಬಿಳಿಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅದೇ ಸೀರಿಯಲ್ ನ ಇನ್ನೊಬ್ಬ ನಟ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಬೇರ್ಯಾರು ಅಲ್ಲ ಸೀರುಂಡೆ ರಘು. ಇವರ ಮದುವೆ ಸಂಭ್ರಮದ ಫೋಟೋಗಳು ಇಲ್ಲಿವೆ.
'ಸತ್ಯ' ಧಾರಾವಾಹಿ ನಟ ಹಾಗೂ ಕಾಮಿಡಿ ಕಿಲಾಡಿ ಸ್ಪರ್ಧಿಯಾಗಿದ್ದ (comedy kiladigalu) ಸೀರುಂಡೆ ರಘು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಫೋಟೋವನ್ನು ಹಂಚಿಕೊಂಡಿರುವ ರಘು, ನಾನು ಕಂಡ ಕನಸು ರಾಯರ ಆಶೀರ್ವಾದದಿಂದ ನನಸು ಎಂದು ಬರೆದುಕೊಂಡಿದ್ದಾರೆ.
26
ರಘು (Seerunde Raghu) ಅವರ ಮದುವೆಗೆ 'ಕಾಮಿಡಿ ಕಿಲಾಡಿಗಳು' ಸ್ಪರ್ಧಿಗಳಾದ ಮಡೆನೂರು ಮನು, ಮಿಂಚು ಆಗಮಿಸಿ, ಶುಭ ಹಾರೈಸಿದ್ದಾರೆ. ರಘು ಅವರು ರಂಜಿತಾ ಎನ್ನುವವರನ್ನು ಮದುವೆಯಾಗಿದ್ದು, ತಾಳಿ ಕಟ್ಟುವ ವೇಳೆ ಆನಂದದಿಂದ ರಘು ಕಣ್ಣಂಚು ಒದ್ದೆಯಾಗಿದ್ದು, ತಮ್ಮ ಕನಸು ನನಸಾದ ಖುಷಿಯಲ್ಲಿದ್ದಾರೆ.
36
ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ರಂಜಿತರನ್ನು ಸರಳ ಸಮಾರಂಭದ ಮೂಲಕ ವಿವಾಹವಾದರು. ಕಾಮಿಡಿ ಕಿಲಾಡಿ ಖ್ಯಾತಿಯ ಮಂಥನ,ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಸದಾ ಸೇರಿದಂತೆ ನೂರಾರು ಕಲಾವಿದರು ಹಿತೈಷಿಗಳು ಭಾಗವಹಿಸಿ ಶುಭ ಹಾರೈಸಿದರು.
46
ರಘು ಅವರು 'ಕಾಮಿಡಿ ಕಿಲಾಡಿಗಳು ಸೀಸನ್ 2' ಶೋನಲ್ಲಿ ಭಾಗವಹಿಸಿದ್ದರು. ಅದಾದ ನಂತರ ಅವರು 'ಸತ್ಯ' ಧಾರಾವಾಹಿಯಲ್ಲಿ (satya serial) ನಟಿಸುವ ಅವಕಾಶ ಪಡೆದರು. ಸತ್ಯ ಸೀರಿಯಲ್ ನಲ್ಲಿ ನಾಯಕನ ಭಾಮೈದನಾಗಿ ಅಭಿನಯಿಸಿ, ತಮ್ಮ ಹಾಸ್ಯದ ಮೂಲಕ ಜನ ಮನ ಗೆದ್ದಿದ್ದರು.
56
ನಟನೆಗೆ ಬರುವ ಮುನ್ನ ರಘು ವಿಧ ವಿಧವಾದ ಕೆಲಸ ಮಾಡಿದ್ದರಂತೆ. ಮೊದ ಮೊದಲಿಗೆ ಮಿಮಿಕ್ರಿ ಮಾಡುತ್ತಿದ್ದರಂತೆ, ಬಳಿಕ ರಾಜ್ ಮ್ಯೂಸಿಕ್ ನಲ್ಲಿ ಸಿಕ್ರೆ ಸೀರುಂಡೆ, ಕಸ್ತೂರಿಯಲ್ಲಿ ಟೋಪಿವಾಲ ಎಂಬ ಎರಡು ಬಕ್ರಾ ಶೋ ನಡೆಸಿಕೊಟ್ಟಿದ್ರು. ನಂತರ ಹಲವು ವರ್ಷಗಳ ಬಳಿಕ ಮಜಾ ಭಾರತದಲ್ಲೂ ನಟಿಸಿ ಜನರನ್ನು ನಗಿಸಿದ್ರು ರಘು.
66
ಮೊದಮೊದಲಿಗೆ ಕಷ್ಟಗಳ ದಿನವನ್ನೇ ನೋಡಿರೋ ರಘು ಅವರಿಗೆ ಅದೃಷ್ಟ ಕೊಟ್ಟದ್ದೆ ಝಿ ಕನ್ನಡ ವಾಹಿನಿಯ (Zee Kannada) ಕಾಮಿಡಿ ಕಿಲಾಡಿಗಳು. ಅಲ್ಲಿಂದ ಅವರನ್ನು ಇಡೀ ಕರ್ನಾಟಕವೇ ಗುರುತಿಸುವಂತಾಯಿತು. ತಾನು ನಗುತ್ತಾ, ಜನರನ್ನು ಯಾವಾಗಲೂ ನಗಿಸುತ್ತಾ ಇರುವ ಸೀರುಂಡೆ ರಘು ಅವರ ವೈವಾಹಿಕ ಜೀವನವೂ (married life) ಸಂತೋಷದಿಂದ ಕೂಡಿರಲಿ ಎಂದು ಅಭಿಮಾನಿಗಳ ಹಾರೈಕೆ.