ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಇನ್‌ಸ್ಟಾಗ್ರಾಂನಲ್ಲಿ ಮೈಸೂರು ಸಿಲ್ಕ್ ಸೀರೆ ಧರಿಸಿ ಮಿಂಚುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
'Remember the lost and found Blue?' ಎಂದು ಬರೆದುಕೊಂಡು ಸೈಬೀರಿಯನ್ ಹಸ್ಕಿ ಎನ್ನು ಮುದ್ದಾಡುತ್ತಿರುವುದು ನೋಡಬಹುದು. ಈ ಫೋಟೋಗಳನ್ನು ತುಂಬಾ ಲೈಕ್ಸ್ ಮತ್ತು ಕಾಮೆಂಟ್ ಬಂದಿದೆ.
ದಿವ್ಯಾ ಹುಟ್ಟಿದ್ದು 1990ರಲ್ಲಿ ಮೂಲತಃ ಶಿವಮೊಗ್ಗದವರು. ಹುಲಿರಾಯ ಸಿನಿಮಾದಲ್ಲಿ ಲಚ್ಚಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2013ರಲ್ಲಿ ಕಿರುತೆರೆ ಕಾಲಿಟ್ಟರು.
ಬಿಗ್ ಬಾಸ್ ಸೀಸನ್ 8ರಲ್ಲಿ ಡಾಕರ್ ರ್ಯಾಲಿ ಅರವಿಂದ್ ಕೆಪಿ ಅವರನ್ನು ಮೊದಲು ಭೇಟಿಯಾಗಿ ಸ್ನೇಹಿತರಾಗುತ್ತಾರೆ ಆನಂತರ ಪ್ರೀತಿಸಲು ಅರಂಭಿಸುತ್ತಾರೆ. ಅಭಿಮಾನಿಗಳು ಅರ್ವಿಯಾ ಎಂದು ಹ್ಯಾಷ್‌ಟ್ಯಾಗ್ ಕ್ರಿಯೇಟ್ ಮಾಡಿದ್ದಾರೆ.
ರಾಣಿ ಪಿಂಕ್ ಮೈಸೂರು ಸಿಲ್ಕ್ ಸೀರೆಗೆ ಹಸಿರು ಬಣ್ಣದ ಬ್ಲೌಸ್ ಧರಿಸಿದ್ದಾರೆ. ಸದ್ಯಕ್ಕೆ ಟ್ರೆಂಡ್‌ನಲ್ಲಿರುವ ಮುತ್ತಿನ ಸರ ಧರಿಸಿಗೆ ಹೈ ಬನ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ.
'ಕನಸಿನಲ್ಲಿ ಕೂಡ ನನ್ನ ಕಣ್ಣುಗಳನ್ನು ಬಿಡಿಸುವ ಚಿತ್ರ ಈ ನಿಮ್ಮ ಸೌಂದರ್ಯ' ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ನೀನೆಷ್ಟೇ ಒಡವೆ ತೊಟ್ಟರು ನಗುವಿನ ಒಡವೆ ಮುಂದೆ ಏನಿಲ್ಲ ನಮಗೆ ನಿನ್ನ ನಗುವಿನ ಒಡವೆ ಸಾಕು' ಎಂದಿದ್ದಾರೆ.