Bigg Bossನಲ್ಲಿ ರಕ್ಷಿತಾ ಶೆಟ್ಟಿ ಮಾತಾಡಿದ್ದೇ ಈಗ Rap Song! ಅಬ್ಬಬ್ಬಾ ಎನ್ನೋ ಪರ್ಫಾಮೆನ್ಸ್​ ನೋಡಿ

Published : Oct 28, 2025, 06:06 PM IST

ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ವಿಶಿಷ್ಟ ಭಾಷಾ ಶೈಲಿಯ ಡೈಲಾಗ್ ಒಂದು ಸಖತ್ ಫೇಮಸ್ ಆಗಿದೆ. ಇದೀಗ ಇದೇ ಡೈಲಾಗ್‌ ಅನ್ನು ಬಳಸಿ ಗ್ರಾವಿಟಿ ಡಾನ್ಸ್ ಅಕಾಡೆಮಿ ಸದಸ್ಯರು ಒಂದು ರ‍್ಯಾಪ್ ಹಾಡನ್ನು ಸೃಷ್ಟಿಸಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

PREV
16
ರಕ್ಷಿತಾ ಹವಾ

ಕನ್ನಡ, ತುಳು, ಹಿಂದಿ, ಇಂಗ್ಲಿಷ್​ ಎಲ್ಲವೂ ಮಿಕ್ಸ್​ ಮಾಡಿ ಮಾತನಾಡುವ ಮೂಲಕವೇ ಫೇಮಸ್​ ಆದವರು ಬಿಗ್​ಬಾಸ್​ನಲ್ಲಿ (Bigg Boss 12) ಸದ್ಯ ರಕ್ಷಿತಾ ಶೆಟ್ಟಿ. ಸದ್ಯ ಇವರ ಹವಾ ಜೋರಾಗಿಯೇ ನಡೆಯುತ್ತಿದೆ. ಇವರ ಅಭಿಮಾನಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೇನೇ ಬಿಗ್​ಬಾಸ್​ ಸ್ಪರ್ಧಿಗಳಿಗೆ ಸುಲಭದಲ್ಲಿ ಆಹಾರ ಆಗ್ತಿರೋದು ಕೂಡ ಇದೇ ರಕ್ಷಿತಾ. ಇವರ ವಿರುದ್ಧ ಮಾತನಾಡಿ ಸುದೀಪ್​ ಅವರಿಂದ ಬೈಸಿಕೊಂಡವರು ಅನೇಕರಿದ್ದಾರೆ.

26
ರಕ್ಷಿತಾ ಶೆಟ್ಟಿ ಡೈಲಾಗ್​

ನೀವು ನ್ಯಾಯ ಕೊಡಬೇಕಿತ್ತು. ನೀವು ಎಂಥ ಮಾಡಿದ್ರಿ? ... ನನ್ನ ಫೇಸ್​ನಲ್ಲಿ.... ನೀವು ಇದೇ ಆಗ್ತೀರಾ ಎನ್ನುವ ಮಾತನ್ನು ರಕ್ಷಿತಾ ಶೆಟ್ಟಿ ಗರಂ ಆಗಿ ಹೇಳಿದ್ರೆ, ಮಂಜು ಭಾಷಿಣಿ (Manju Bhashini) ಅವರು ಅಷ್ಟೇ ಕೂಲಾಗಿ ನಾನು ಅದೇ ಆಗ್ತೀನಿ ಎಂದಿದ್ದರು. ಈ ಡೈಲಾಗ್​ ಈಗ ಸಕತ್​ ಫೇಮಸ್​ ಆಗಿದೆ.

36
ಎಲ್ಲಾ ಭಾಷೆ ಮಿಕ್ಸ್​

ಅಷ್ಟಕ್ಕೂ ರಕ್ಷಿತಾ ಶೆಟ್ಟಿ (Rakshtha Shetty) ಮಂಗಳೂರಿನವರಾದರೂ, ಅವರ ಹೆಚ್ಚಿನ ಜೀವನ ನಡೆದದ್ದು ಮುಂಬೈನಲ್ಲಿ. ಮಾತೃಭಾಷೆ ತುಳು ಆಗಿರೋ ಕಾರಣ ಕನ್ನಡವನ್ನು ಕಷ್ಟಪಟ್ಟು ಕಲಿತಿದ್ದಾರೆ. ಆಗಿರುತ್ತದೆ. ಒಂದರ್ಥದಲ್ಲಿ ಇದರಿಂದಲೇ ಅವರು ಫೇಮಸ್​ ಕೂಡ ಆಗಿರುವುದು.

46
Rap song

ಇದೀಗ ಇವರ ಇದೇ ಡೈಲಾಗ್​ನಿಂದ Rap song ಕೂಡ ಮಾಡಲಾಗಿದೆ. ಅಬ್ಬಬ್ಬಾ ಎನ್ನುವಂಥ ಪರ್ಫಾಮೆನ್ಸ್​ ಕೊಟ್ಟಿದ್ದಾರೆ ಗ್ರಾವಿಟಿ ಡಾನ್ಸ್​ ಅಕಾಡೆಮಿಯ ಸದಸ್ಯರು. ಇದೀಗ ಭಾರಿ ವೈರಲ್​ ಆಗಿದೆ. ಒಂದು ಡೈಲಾಗ್​ ಅನ್ನು ಹೇಗೆ Rap ಮಾಡಬಹುದು ಎನ್ನುವುದನ್ನು ಇಲ್ಲಿನ ಮಕ್ಕಳು ತೋರಿಸಿಕೊಟ್ಟಿದ್ದಾರೆ. (ವಿಡಿಯೋ ಲಿಂಕ್​ ಸುದ್ದಿಯ ಕೊನೆಯಲ್ಲಿದೆ)

56
ಭಾಷೆಯಿಂದಲೇ ಅಭಿಮಾನಿಗಳ ಹೆಚ್ಚಳ

ಇನ್ನು ರಕ್ಷಿತಾ ಶೆಟ್ಟಿ ಅವರು, ಕನ್ನಡದ ಮಾತಿನಿಂದಲೇ ಇನ್​ಸ್ಟಾಗ್ರಾಮ್​ನಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನು ಹುಟ್ಟುಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ಬಿಗ್​ಬಾಸ್​ನಲ್ಲಿಯೂ ಅವರಿಗೆ ಅವಕಾಶ ಸಿಕ್ಕಿರೋದು. ಬಿಗ್​ಬಾಸ್​ ಮನೆಯಲ್ಲಿಯೂ ಇವರ ಕನ್ನಡದಿಂದಲೇ ವೀಕ್ಷಕರು ಇವರ ಬಗ್ಗೆ ಖುಷಿ ಪಡುವುದು ಇದೆ.

66
ಬಿಗ್​ಬಾಸ್​​ ಮೀಮ್ಸ್​

ಬಿಗ್​ಬಾಸ್​​ನ ಈ ಸೀಸನ್​ನಲ್ಲಿ ಮೀಮ್ಸ್​, ಜೋಕ್ಸ್​ ಹೆಚ್ಚಾಗ್ತಿರೋದು ರಕ್ಷಿತಾ ಶೆಟ್ಟಿ ಅವರ ಕನ್ನಡದಿಂದಲೇ. ಇದೇ ಕಾರಣಕ್ಕೆ ಇವರ ಕನ್ನಡದ ಮಾತನ್ನು ಇಟ್ಟುಕೊಂಡೇ ಹಲವರು ರೀಲ್ಸ್​ ಮಾಡುವುದು ಇದೆ. ಕೆಲ ದಿನಗಳ ಹಿಂದೆ ಪುಟ್ಟಕ್ಕನ ಮಕ್ಕಳು (Puttakkana Makkalu) ಸ್ನೇಹಾ ಪಾತ್ರಧಾರಿ ವಿದ್ಯಾ ರಾಜ್​ ಹಾಗೂ ಬಂಗಾರಮ್ಮನ ಮಗಳು ವಸು ಪಾತ್ರ ನಿರ್ವಹಿಸುತ್ತಿದ್ದ ಸೌಮ್ಯಾ ಮೆಂಡನ್​ ಅವರು ರಕ್ಷಿತಾ ಶೆಟ್ಟಿ ಅವರ ಡೈಲಾಗ್​ನ ರೀಲ್ಸ್​ ಮಾಡಿದ್ದರು.

Rap Song ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

Read more Photos on
click me!

Recommended Stories