Rani Serialಗೆ 100ರ ಸಂಭ್ರಮ: ನಟ ದಿಲೀಪ್​ ರಾಜ್​ರನ್ನು ನೆನಪು ಮಾಡಿಕೊಂಡ ಪುಟಾಣಿ ಧನ್ವಿ

Published : Jun 18, 2026, 06:55 PM IST

 'ರಾಣಿ' 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ತಂದೆಯ ಅರಿವಿಲ್ಲದೆ ಬೆಳೆಯುತ್ತಿರುವ ರಾಣಿ ಮತ್ತು ಜೈಲಿನಲ್ಲಿರುವ ತಾಯಿಯ ಭಾವನಾತ್ಮಕ ಕಥೆಯ ಈ ಸಂಭ್ರಮದ ಕ್ಷಣದಲ್ಲಿ, ರಾಣಿ ಪಾತ್ರಧಾರಿ ಧನ್ವಿ ತನ್ನನ್ನು ಕಿರುತೆರೆಗೆ ಪರಿಚಯಿಸಿದ ದಿವಂಗತ ನಟ ದಿಲೀಪ್ ರಾಜ್ ಅವರನ್ನು ಸ್ಮರಿಸಿಕೊಂಡಿದ್ದಾಳೆ.

PREV
16
ರಾಣಿಗೆ 100ರ ಸಂಭ್ರಮ

ಜೀ ಕನ್ನಡದಲ್ಲಿ ರಾಣಿ ಸೀರಿಯಲ್​ ಇದೀಗ 100 ಸಂಚಿಕೆಯನ್ನು ಪೂರ್ಣಗೊಳಿಸಿದೆ. ರಾಣಿಯ ಅಮ್ಮ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾಳೆ. ಜೈಲಿನ ನಿಯಮದ ಪ್ರಕಾರ ಒಂದಷ್ಟು ವರ್ಷ ಅಮ್ಮನ ಜೊತೆ ಇದ್ದ ಮಗಳು ರಾಣಿ, ಇದೀಗ ಹೊರಕ್ಕೆ ಬಂದಿದ್ದಾಳೆ. ಅಮ್ಮನ ಅಣ್ಣನ ಮನೆಯೇ ಅವಳಿಗೆ ಆಸರೆ.

26
ಏನಿದು ಸ್ಟೋರಿ

ರಾಣಿಯ ಮಾಮ ಆಕೆಯನ್ನು ಸ್ವಂತ ಮಗಳಂತೆಯೇ ನೋಡಿಕೊಳ್ಳುತ್ತಿದ್ದರೆ, ಉಳಿದವರಿಂದ ರಾಣಿಗೆ ನೋವೇ ನೋವು. ಆದರೂ ಬೇಸರ ಮಾಡಿಕೊಳ್ಳದ ಪುಟಾಣಿ ರಾಣಿಗೆ ಈಗ ಅಪ್ಪ ಸಿಕ್ಕಿದ್ದಾನೆ. ಆದರೆ ಅಪ್ಪ ಎನ್ನುವ ಸತ್ಯ ಗೊತ್ತಿಲ್ಲ, ಅವನಿಗೂ ಮಗಳು ಎನ್ನುವುದು ಗೊತ್ತಿಲ್ಲ. ಪತ್ನಿಯೇ ಕೊಲೆ ಮಾಡಿರುವುದಾಗಿ ನಂಬಿರೋ ಆತ, ಪತ್ನಿಯನ್ನು ಕಂಡರೆ ಸಿಡಿಮಿಡಿ. ಅದಕ್ಕಾಗಿಯೇ ಮಗಳು ಯಾವುದೇ ಕಾರಣಕ್ಕೂ ಅಪ್ಪನ ಮುಖ ನೋಡಬಾರದು ಎನ್ನೋದು ರಾಣಿ ಅಮ್ಮ ಕಾವೇರಿಯ ಹಾರೈಕೆ.

36
ಧನ್ವಿ ಅಭಿನಯಕ್ಕೆ ಮನಸೋತ ವೀಕ್ಷಕರು

ಹೀಗೆ ಸಾಗಿರೋ ಸ್ಟೋರಿಗೆ ಈಗ 100ರ ಸಂಭ್ರಮ. ರಾಣಿಯಾಗಿ ಪುಟಾಣಿ ಧನ್ವಿ ಅದ್ಭುತ ಅಭಿನಯ ನೀಡುತ್ತಿದ್ದರೆ, ಅಮ್ಮನಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಇನ್ನು ಅಪ್ಪ ಅರ್ಜುನ್​ ಆಗಿ ನಟಿಸುತ್ತಿರುವವರು ಆರವ್​ ಸೂರ್ಯ.

46
ಪುಟಾಣಿಯಲ್ಲಿ ಪರಿಚಯಿಸಿದ್ದ ದಿಲೀಪ್​ ರಾಜ್​

ಅಂದಹಾಗೆ ಬಾಲಕಿ ಧನ್ವಿ ತನ್ನ ರಾಣಿಯ ಪಾತ್ರಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾಳೆ. ಅವಳ ನಟನೆಯಂತೂ ಅತ್ಯದ್ಭುತ, ವೀಕ್ಷಕರು ಫಿದಾ ಆಗಿದ್ದಾರೆ. ಅಂದಹಾಗೆ ಈ ರಾಣಿಯನ್ನು ಕಿರುತೆರೆಗೆ ಪರಿಚಯಿಸಿದ್ದೇ ಈಚೆಗೆ ನಿಧನರಾದ ನಟ ದಿಲೀಪ್​ ರಾಜ್​ (Dilip Raj).

56
ಮಿಸ್​ ಮಾಡಿಕೊಂಡ ಧನ್ವಿ

ಹಲವರನ್ನು ಸೀರಿಯಲ್​ಗೆ ಪರಿಚಯಿಸಿರುವ ನಟ, ಎಲ್ಲರನ್ನೂ ಅಗಲಿದ್ದಾರೆ. ಅವರ ನೆನಪನ್ನು ಮಾತ್ರ ಎಲ್ಲಾ ನಟ-ನಟಿಯರೂ ಮಾಡಿಕೊಳ್ಳುತ್ತಿದ್ದು, ರಾಣಿ ಸೀರಿಯಲ್​ನ 100ರ ಸಂಭ್ರಮದಲ್ಲಿ ಧನ್ವಿ ಅವರನ್ನು ನೆನಪಿಸಿಕೊಂಡಿದ್ದಾಳೆ. statenewsind ಗೆ ನೀಡಿರುವ ಸಂದರ್ಶನದಲ್ಲಿ ಧನ್ವಿ, ದಿಲೀಪ್​  ಸರ್​ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ.

66
ವಿಶೇಷ ರೀತಿಯಲ್ಲಿ ಆಚರಣೆ

ಇದೇ ವೇಳೆ ರಾಣಿಗೆ 100 ತುಂಬಿರುವ ಹಿನ್ನೆಲೆಯಲ್ಲಿ ಅಮ್ಮ-ಮಗಳು 100ರ ಸಂಭ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದು, ಅದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories