ಫೇಸ್‌ಬುಕ್‌ನಲ್ಲಿ ಪರಿಚಯ; 60ನೇ ವಯಸ್ಸಿನಲ್ಲಿ ಫಸ್ಟ್‌ ಟೈಮ್‌ ಮದುವೆಯಾದ ನಟಿ; ವರನಿಗೆ 80ರ ಹರೆಯ!

Published : Jun 18, 2026, 05:46 PM IST

ಯಾವಾಗ ಮದುವೆ ಭಾಗ್ಯ ಬರಲಿದೆ, ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಗೊತ್ತಾಗೋದಿಲ್ಲ. ಈಗ 'ಲಗಾನ್' ಸಿನಿಮಾ ನಟಿ ಸುಹಾಸಿನಿ ಮುಲಾಯ್ ಅವರು 60ನೇ ವಯಸ್ಸಿಗೆ ಮದುವೆ ಆಗಿದ್ದಾರೆ. ಈಗ ಮದುವೆ ಆಗೋಕೆ ಕಾರಣ ಏನು? ವರ ಯಾರು? 

PREV
14
ಯಾಕೆ ಇಷ್ಟು ಲೇಟ್‌ ಆಯ್ತು?

'ಲಗಾನ್' ಮತ್ತು 'ಜೋಧಾ ಅಕ್ಬರ್' ಸಿನಿಮಾ ನಟಿ ಸುಹಾಸಿನಿ ಅವರು ತನಗೆ ಹೊಂದಿಕೆ ಆಗುವಂಥ ಸಂಗಾತಿ ಬೇಕು ಎಂದು ಇಷ್ಟು ವರ್ಷಗಳ ಕಾಲ ಕಾದಿದ್ದಾರೆ. ಮದುವೆಯಾಗಬೇಕು ಎಂದು ಅವರು ಯಾರನ್ನೋ ಮದುವೆ ಆಗಲು ರೆಡಿ ಇರಲಿಲ್ಲವಂತೆ.

24
ಪತಿ ಯಾರು?

"ನಾನು ನನ್ನ 60ನೇ ವಯಸ್ಸಿನಲ್ಲಿ ಫಸ್ಟ್‌ ಟೈಮ್ ಮದುವೆಯಾದೆ. ಇಲ್ಲಿಯವರೆಗೆ ನನಗೆ ಸರಿಯಾದ ಸಂಗಾತಿ ಸಿಕ್ಕಿರಲಿಲ್ಲ. ನನ್ನ ಪತಿ ಸೈಂಟಿಸ್ಟ್.‌ ವಿಜ್ಞಾನದ ಬಗ್ಗೆ ಅವರು ಮಾತನಾಡಿದರೆ ನನಗೆ ಏನೂ ಅರ್ಥ ಆಗಿರೋದಿಲ್ಲ. ಆದರೆ ಅವರೊಬ್ಬ ಅದ್ಭುತ ವ್ಯಕ್ತಿ” ಎಂದು ನಟಿ ಹೇಳಿದ್ದಾರೆ.

34
ಹೇಗೆ ಪರಿಚಯ ಆಯ್ತು?

ನಾನು ಫೇಸ್‌ಬುಕ್‌ ಅಕೌಂಟ್‌ ಮಾಡಿಕೊಂಡೆ. ಆಗ ಅತುಲ್ ಪ್ರೊಫೈಲ್ ಕಾಣಿಸಿದೆ. ಆ ವಿಜ್ಞಾನಿಯು ಭೌತವಿಜ್ಞಾನದಲ್ಲಿ ಹೆಚ್ಚು ತಿಳಿದುಕೊಂಡಿದ್ದರು. ಹೀಗಾಗಿ ಸುಹಾಸಿನಿ ಅವರು ಅತುಲ್‌ರನ್ನು ಕಾಂಟ್ಯಾಕ್ಟ್‌ ಮಾಡಿದ್ದಾರೆ. ವಿಜ್ಞಾನದ ಬಗ್ಗೆ ಒಂದು ಪ್ರಶ್ನೆ ಮಾಡಿದ್ದರು. ಇದೀಗ ಮದುವೆ ಹಂತಕ್ಕೆ ಬಂದಿದೆ.

44
ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಿದ್ರು

“ಈ ವಯಸ್ಸಿನಲ್ಲಿ ಮದುವೆ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನನಗೆ ಸಂಗಾತಿ ಬೇಕು ಎಂದು ಅತುಲ್‌ ಪರೋಕ್ಷವಾಗಿ ಹೇಳಿದ್ದರು. ಅದರಂತೆ ನಾವಿಬ್ಬರು ಒಂದಾಗಿದ್ದೇವೆ. ಸೋಶಿಯಲ್‌ ಮೀಡಿಯಾದಲ್ಲಿ ನಾವು ಯಾರನ್ನು ಭೇಟಿಯಾಗುತ್ತಿದ್ದೇವೆ ಎನ್ನೋದಕ್ಕಿಂತ ಏನನ್ನು ಭೇಟಿಯಾಗುತ್ತಿದ್ದೇವೆ ಎನ್ನುವುದು ಮುಖ್ಯ" ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories