42ರ ಈ ಸ್ಯಾಂಡಲ್​ವುಡ್​ ಬ್ಯೂಟಿ ಜೊತೆ Bigg Boss Winner ಕಾರ್ತಿಕ್​ ಮಹೇಶ್​ಗೆ ಡ್ಯುಯೆಟ್​ ಹಾಡೋ ಆಸೆಯಂತೆ

Published : Sep 27, 2025, 05:17 PM IST

ಬಿಗ್ ಬಾಸ್ ಕನ್ನಡ 10ರ ವಿಜೇತ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಜೊತೆಗಿನ ಸಂಬಂಧದ ಚರ್ಚೆಯ ನಡುವೆಯೇ ತಮ್ಮ ನಿಜವಾದ ಸೆಲೆಬ್ರಿಟಿ ಕ್ರಷ್ ಯಾರೆಂದು ಬಹಿರಂಗಪಡಿಸಿದ್ದಾರೆ. 42 ವರ್ಷದ ನಟಿ ಮೇಲೆ ತಮಗೆ ಕ್ರಷ್ ಇದೆ ಎಂದು ಹೇಳಿಕೊಂಡಿದ್ದು, ಅವರೊಂದಿಗೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

PREV
110
ಬಿಗ್​ಬಾಸ್​​ ವಿನ್ನರ್​ ಕಾರ್ತಿಕ್ ಹವಾ

ನಟ ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಷೋನಲ್ಲಿ ಟ್ರೋಫಿ ಗೆದ್ದವರು. ಬಿಗ್​ಬಾಸ್​​ನಿಂದ ಬಂದ ಹಣದಲ್ಲಿ ಬಿಜಿನೆಸ್​ ಕೂಡ ಶುರು ಮಾಡಿದ್ದಾರೆ. ಅಷ್ಟಕ್ಕೂ, ಬಿಗ್ ಬಾಸ್ 10ರ ಮನೆಯಲ್ಲಿ ಲವ್​ ವಿಷಯ ಬಂದಾಗ ಹೆಚ್ಚು ಸದ್ದು ಮಾಡಿದ್ದ ಜೋಡಿ ಎಂದರೆ ಅದು ಕಾರ್ತಿಕ್ ಮಹೇಶ್​ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಅವರದ್ದು. ಬಿಗ್​ಬಾಸ್ ಮನೆಯಲ್ಲಿ ಮೊದಲ ದಿನವೇ ಇಬ್ಬರ ನಡುವೆ ಬಹಳಷ್ಟು 'ಕೆಮೆಸ್ಟ್ರಿ' ಕಂಡು ಬಂದಿತ್ತು. 'ಫಸ್ಟ್ ಒಳ್ಳೇ ಇಂಪ್ರಶನ್' ಎಂಬ ಚರ್ಚೆಯಲ್ಲಿ ಕೂಡ ಸಂಗೀತಾ 'ಕಾರ್ತಿಕ್ ಮಹೇಶ್' ಹೆಸರು ಹೇಳಿದ್ದರೆ, ಕಾರ್ತಿಕ್ ಸಂಗೀತಾ ಹೆಸರನ್ನೇ ಹೇಳಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಸಾಕಷ್ಟು ಚರ್ಚೆ ಶುರುವಾಗಿತ್ತು.

210
ಸಂಗೀತಾ ಮತ್ತು ಕಾರ್ತಿಕ್ ಸಂಬಂಧ

ಅದರಲ್ಲಿಯೂ ಶುರುವಿನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧ ಒಂದು ಲೆವೆಲ್​ ಮುಂದೆಯೇ ಹೋಗಿತ್ತು. ಪ್ರೇಕ್ಷಕರು ಇವರನ್ನು ನೋಡುವ ಸ್ಟೈಲೇ ಬೇರೆಯಾಗಿತ್ತು. ಇದಕ್ಕೆ ಕಾರಣ, ಬಿಗ್​ಬಾಸ್​ ಮನೆಯಲ್ಲಿ ಇವರಿಬ್ಬರೂ ಕೇವಲ ಸ್ನೇಹಿತರಾಗಿ ಇರದೇ ಕೆಲವು ಸಲ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಂಡರು. ಇದೇ ವೇಳೆ ಒಂದು ಹಂತದಲ್ಲಿ ‘ಲವ್‌ ಗಿವ್‌ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು ಕೂಡ. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಕೆಲ ವಾರ ಇವರಿಬ್ಬರ ನಡುವಿನ ಗಾಢ ಪ್ರೀತಿಗೆ ಅದೇನಾಯಿತು. ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು.

310
ಕ್ರಷ್​ ಬಗ್ಗೆ ಕೇಳಿದಾಗ ಹೇಳಿದ್ದೇನು?

ಅವೆಲ್ಲಾ ಈಗ ಮುಗಿದ ಅಧ್ಯಾಯ. ಸದ್ಯ ಕಾರ್ತಿಕ್​ ಮಹೇಶ್​ (Bigg Boss Karthik Mahesh) ಕೂಡ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ. ಇವರಿಗೆ ಕ್ರಷ್​ ಬಗ್ಗೆ ಕೇಳಲಾಗಿದೆ. ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಕ್ರಷ್​ ಬಗ್ಗೆ ಕೇಳಿದಾಗ, ತುಂಬಾ ಇದೆ, ಪಾಪ ಎಲ್ಲರ ಹೆಸರನ್ನು ನಾನು ಹೇಳಲಾಗುವುದಿಲ್ಲವಲ್ಲ ಎಂದಿದ್ದಾರೆ. ಹಾಗಿದ್ದರೆ ಸೆಲೆಬ್ರಿಟಿ ಕ್ರಷ್​ ಯಾರು ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ನಟ ನನ್ನ ಸೆಲೆಬ್ರಿಟಿ ಕ್ರಷ್​ ರಮ್ಯಾ ಮೇಡಂ ಎಂದು ಹೇಳಿದ್ದಾರೆ.

410
42ರ ಮೋಹಕತಾರೆ ಜೊತೆ ನಟಿಸುವಾಸೆ

ಅಂದಹಾಗೆ ಕಾರ್ತಿಕ್​ ಅವರಿಗೆ ಈಗ 32 ವರ್ಷ ವಯಸ್ಸು, ಮೋಹಕತಾರೆ ರಮ್ಯಾ (Mohaka Taare Ramya- Divya Sampada) ಅವರಿಗೆ 42 ವರ್ಷ ವಯಸ್ಸು. ನಾನು ಚಿಕ್ಕಂದಿನಿಂದಲೂ ಅವರನ್ನು ನೋಡಿಕೊಂಡು ಬಂದಿದ್ದೇನೆ. ನಾವೆಲ್ಲಾ ದೊಡ್ಡವರಾದರೂ ರಮ್ಯಾ ಮಾತ್ರ ಇನ್ನೂ ಹಾಗೆಯೇ ಇದ್ದಾರೆ ಎಂದಿದ್ದಾರೆ ಕಾರ್ತಿಕ್​ ಮಹೇಶ್​. ಕೊನೆಗೆ ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಎಂದು ಪ್ರಶ್ನಿಸಿದಾಗ, ಒಹ್​ ಖಂಡಿತವಾಗಿ. ಅವರು ನಾಯಕಿ ಆದರೆ, ನಾನು ನಾಯಕ ಆಗಲು ರೆಡಿ ಎಂದಿದ್ದಾರೆ ಕಾರ್ತಿಕ್​.

510
ರಮ್ಯಾರನ್ನು ಇನ್ನೂ ನೋಡಿಲ್ಲ ಎಂದ ಕಾರ್ತಿಕ್​

ಅವರು ನನ್ನ ಕ್ರಷ್​ ಎನ್ನುವುದನ್ನು ಅವರಿಗೆ ಇನ್ನೂ ಹೇಳಿಲ್ಲ. ಅವರನ್ನು ಇನ್ನೂ ಮೀಟ್​ ಆಗಿಲ್ಲ. ಆದರೆ ನನಗೆ ಅವರೆಂದರೆ ತುಂಬಾ ಇಷ್ಟ. ಅವರ ಜೊತೆ ವರ್ಕ್​ ಮಾಡಲು ತುಂಬಾ ಖುಷಿ ಇದೆ ಎನ್ನುವ ಆಸೆಯನ್ನು ಕಾರ್ತಿಕ್​ ಮಹೇಶ್​ ವ್ಯಕ್ತಪಡಿಸಿದ್ದಾರೆ.

610
ಕಾರ್ತಿಕ್​ ಬಗ್ಗೆ ಸಂಗೀತಾ

ಈ ಹಿಂದೆ ಬಿಗ್​ಬಾಸ್​ನಲ್ಲಿ ಸ್ನೇಹಿತರಾಗಿದ್ದ ಸಂಗೀತಾ ಬಗ್ಗೆ ಹಿಂದೊಮ್ಮೆ ಸಂದರ್ಶನದಲ್ಲಿ ಪ್ರಶ್ನೆ ಮಾಡಿದ್ದಾರೆ ಸಂಗೀತಾ ಅವರು, ನಾನು ಒಬ್ಬ ಹುಡುಗನ ಜೊತೆಗೆ ಜಾಸ್ತಿ ಮಾತನಾಡಿದೆ ಎಂದ ತಕ್ಷಣ ಆತ ಬಾಯ್​ಫ್ರೆಂಡೇ ಆಗಬೇಕೆಂದೇನೂ ಇಲ್ಲ. ಬರಿ ಸ್ನೇಹಿತ ಆಗಿರಬಹುದು ಅಲ್ವಾ ಎಂದು ಪ್ರಶ್ನಿಸಿದ್ದರು.

710
ಬೇಸರಿಸಿಕೊಂಡಿದ್ದ ಸಂಗೀತಾ

ಕೆಲವೊಮ್ಮೆ ಕೆಲವೊಂದು ಸಂಬಂಧ ವರ್ಕ್​ ಆಗ್ತಾ ಇಲ್ಲ ಎಂದರೆ ಅದನ್ನು ಬಗೆಹರಿಸಲು ಮಾತನಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಒಂದು ವೇಳೆ ಅದು ಸಾಧ್ಯವೇ ಇಲ್ಲ ಎಂತಾದರೆ ಬಿಟ್ಟು ಮುಂದಕ್ಕೆ ಹೋಗಬೇಕು ಅಷ್ಟೇ. ಹಾಗೆಂದು ಲೈಫ್​ ಟೈಮ್​ ನಾವಿಬ್ಬರೂ ಮಾತನಾಡುವುದೇ ಇಲ್ಲ ಅಂತೇನೂ ಅಲ್ಲ ಎನ್ನುವ ಮೂಲಕ ತಮ್ಮಿಬ್ಬರ ಸಂಬಂಧ ಯಾವ ರೀತಿಯದ್ದು ಎಂದು ಸಂಗೀತಾ ಹೇಳಿದ್ದರು.

810
ಡಿಸಿಷನ್​ ತೆಗೆದುಕೊಳ್ಳೋ ಅಧಿಕಾರ

ಯಾರದ್ದೋ ಜೋಡಿ ತುಂಬಾ ಚೆನ್ನಾಗಿದೆ ಎಂದ ಮಾತ್ರಕ್ಕೆ ಲೈಫ್​ ಲಾಂಗ್ ಒಟ್ಟಿಗೇ ಇರಬೇಕು ಅಂತೇನೂ ಇಲ್ಲ. ನೀವಿಬ್ಬರೂ ಸಕತ್​ ಚೆನ್ನಾಗಿ ಕಾಣಿಸ್ತೀರಿ, ಹೀಗೆ ಜೊತೆಯಾಗಿ ಇರಿ ಎಂದೂ ಯಾರಾದರೂ ಹೇಳುವಲ್ಲಿಯೇ ಅರ್ಥವಿಲ್ಲ. ನಾವೆಲ್ಲರೂ ದೊಡ್ಡವರಾಗಿದ್ವಿ, ನಮ್ಮ ಡಿಸಿಜನ್​ ನಾವು ತೆಗೆದುಕೊಳ್ಳಲು ಶಕ್ಯರಾಗಿದ್ದೇವೆ. ಸಂಬಂಧಗಳ ವಿಷಯದಲ್ಲಿ ಯಾರೂ ಫೋರ್ಸ್​ ಮಾಡಬಾರದು. ಎಲ್ಲರಿಗೂ ಮೆಚುರಿಟಿ ಇರಬೇಕು. ನಮ್ಮ ಲೈಫ್​ನಲ್ಲಿ ಯಾರು ಇರಬೇಕು ಎನ್ನುವ ಡಿಸಿಷನ್​ ತೆಗೆದುಕೊಳ್ಳುವ ಕೆಪ್ಯಾಸಿಟಿ ಎಲ್ಲರಿಗೂ ಇದೆ ಎಂದಿದ್ದರು ಸಂಗೀತಾ.

910
ಇಬ್ಬರ ನಡುವೆ ಹೊಂದಾಣಿಕೆ ಆಗಿಲ್ಲ

ಈ ಹಿಂದೆ ಇದೇ ಪ್ರಶ್ನೆ ಕಾರ್ತಿಕ್​ ಅವರಿಗೂ ಎದುರಾಗಿತ್ತು. ಸಂಗೀತಾ ಮತ್ತು ನಿಮ್ಮ ನಡುವೆ ಅಷ್ಟೊಂದು ಬಾಂಡಿಂಗ್​ ಇತ್ತು. ಮೊದಲಿಗೆ ಸಿಕ್ಕಾಪಟ್ಟೆ ಸ್ನೇಹಿತರಾಗಿದ್ರಿ, ಆಮೇಲೆ ಏಕಾಏಕಿ ತುಂಬಾ ದೂರವಾದ್ರಿ. ಕಾರಣವೇನು ಎಂಬ ಪ್ರಶ್ನೆಗೆ ಕಾರ್ತಿಕ್​ ಅದು ಸಲ್ಲಿನ ಸಿಚುಯೇಷನ್​ಗೆ ಹಾಗಾಯ್ತು ಅಷ್ಟೇ. ಫ್ರೆಂಡ್​ಷಿಪ್​ ಚೆನ್ನಾಗಿಯೇ ಇತ್ತು. ಆದರೆ ಇಬ್ಬರ ಯೋಚನೆ ನಂತರ ಬೇರೆ ಬೇರೆಯಾಗಲು ಶುರುವಾಯ್ತು. ಇಬ್ಬರ ನಡುವೆ ಹೊಂದಾಣಿಕೆ ಆಗಲಿಲ್ಲ. ಅದು ದಿನ ಕಳೆದಂತೆ ಹೆಚ್ಚಾಗುತ್ತಾ ಇಬ್ಬರ ನಡುವೆ ಅಂತರ ಹೆಚ್ಚಾಯ್ತು ಎಂದಿದ್ದರು.

1010
ಫ್ರೆಂಡ್​ಷಿಪ್​ ಚೆನ್ನಾಗಿ ಇರಬೇಕು

ನಂತರ ಬಿಗ್​ಬಾಸ್​ ಮನೆಯೊಳಕ್ಕೆ ಹೀಗಾಯ್ತು, ಈಗ ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ಇಬ್ಬರೂ ಫ್ರೆಂಡ್​ಷಿಪ್​ ಮುಂದುವರೆಸುವಿರಾ ಎನ್ನುವ ಪ್ರಶ್ನೆಗೆ ಕಾರ್ತಿಕ್​, ಸರಿಯಾಗಿ ಉತ್ತರಿಸದೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದರು. ಫ್ರೆಂಡ್​ಷಿಪ್​ನಿಂದ ದೂರ ಇರುತ್ತೇನೆ ಎಂದು ಅಲ್ಲ, ಫ್ರೆಂಡ್​ಷಿಪ್​ ಚೆನ್ನಾಗಿ ಇರಬೇಕು ಎನ್ನುವುದು ನನ್ನ ಆಸೆ ಎಂದಷ್ಟೇ ಹೇಳಿದ್ದರು.

Read more Photos on
click me!

Recommended Stories