ಕನ್ನಡದಲ್ಲಿ ಬರ್ತಿದೆ ಭಯಗೊಳಿಸೋ ವೆಬ್‌ ಸೀರೀಸ್‌: ಶ್ರುತಿ ನಾಯ್ಡು ನಿರ್ಮಾಣದ ಅಯ್ಯನ ಮನೆ

Published : Apr 12, 2025, 09:45 AM ISTUpdated : Apr 12, 2025, 09:50 AM IST

ರಮೇಶ್‌ ಇಂದಿರಾ ನಿರ್ದೇಶಿಸಿರುವ ಈ ವೆಬ್‌ ಸೀರೀಸ್‌ ಹೆಸರು ‘ಅಯ್ಯನ ಮನೆ’. ಏ.25ರಂದು ಜೀ5ನಲ್ಲಿ ಈ ವೆಬ್‌ ಸೀರೀಸ್‌ ಪ್ರಸಾರವಾಗಲಿದೆ.

PREV
15
ಕನ್ನಡದಲ್ಲಿ ಬರ್ತಿದೆ ಭಯಗೊಳಿಸೋ ವೆಬ್‌ ಸೀರೀಸ್‌: ಶ್ರುತಿ ನಾಯ್ಡು ನಿರ್ಮಾಣದ ಅಯ್ಯನ ಮನೆ

ಕನ್ನಡದಲ್ಲಿ ವೆಬ್‌ ಸೀರೀಸ್‌ ಭರಾಟೆ ಅಷ್ಟೇನೂ ಜೋರಿರಲಿಲ್ಲ. ಕೆಲವು ಪ್ರಯತ್ನಗಳಾಗಿದ್ದರೂ ಅಂಥಾ ಯಶಸ್ಸು ದೊರೆತಿಲ್ಲ. ಇದೀಗ ಈ ವಿಭಾಗದಲ್ಲಿ ದೊಡ್ಡ ಮಟ್ಟಿನ ಪ್ರಯತ್ನ ನಡೆದಿದೆ. 

25

ಶ್ರುತಿ ನಾಯ್ಡು ಏಳು ಎಪಿಸೋಡಿನ ವೆಬ್‌ ಸೀರೀಸ್‌ ಅನ್ನು ನಿರ್ಮಾಣ ಮಾಡಿದ್ದಾರೆ. ರಮೇಶ್‌ ಇಂದಿರಾ ನಿರ್ದೇಶಿಸಿರುವ ಈ ವೆಬ್‌ ಸೀರೀಸ್‌ ಹೆಸರು ‘ಅಯ್ಯನ ಮನೆ’. ಏ.25ರಂದು ಜೀ5ನಲ್ಲಿ ಈ ವೆಬ್‌ ಸೀರೀಸ್‌ ಪ್ರಸಾರವಾಗಲಿದೆ.

35

ತೊಂಭತ್ತರ ದಶಕದಲ್ಲಿ ಚಿಕ್ಕಮಗಳೂರಿನ ಮನೆಯೊಂದರಲ್ಲಿ ನಡೆಯುವ ಕತೆ ಇದಾಗಿದ್ದು, ಆ ಮನೆಯಲ್ಲಿ ನಿಗೂಢ ಕೊಲೆಗಳು ಸಂಭವಿಸುತ್ತಿರುತ್ತವೆ. ಆ ಕೊಲೆಯ ಹಿಂದಿನ ರಹಸ್ಯದ ಕತೆಯನ್ನು ಈ ವೆಬ್‌ ಸೀರಿಸ್‌ ಹೊಂದಿದೆ. 
 

45

ಆ ದೊಡ್ಡ ಮನೆಗೆ ಸೊಸೆಯೊಬ್ಬಳು ಪ್ರವೇಶ ಮಾಡುವಲ್ಲಿಂದ ಕತೆ ಶುರುವಾಗಲಿದೆ. ಈ ಮಹತ್ವದ ವೆಬ್‌ ಸೀರೀಸಿನಲ್ಲಿ ಖುಷಿ ರವಿ, ಅಕ್ಷಯ್‌ ನಾಯಕ್‌, ಮಾನಸಿ ಸುಧೀರ್‌, ರಮೇಶ್‌ ಇಂದಿರಾ, ಶೋಭರಾಜ್ ಪಾವೂರ್ ನಟಿಸಿದ್ದಾರೆ.
 

55

ಈ ಕುರಿತು ಹೆಚ್ಚಿಗೆ ಮಾಹಿತಿ ನೀಡಲು ನಿರಾಕರಿಸಿರುವ ನಿರ್ಮಾಪಕಿ ಶ್ರುತಿ ನಾಯ್ಡು, ‘ನಮಗೆ ಒಳ್ಳೆಯ ಪ್ಲಾಟ್‌ಫಾರ್ಮ್‌ ಸಿಕ್ಕಿದೆ. ಹಾಗಾಗಿ ಒಳ್ಳೆಯ ಒರಿಜಿನಲ್‌ ಕತೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಸಾಧ್ಯವಾಗಲಿದೆ. ಸದ್ಯ ಇದಕ್ಕಿಂತ ಹೆಚ್ಚೇನೂ ಹೇಳಲಾರೆ’ ಎಂದಿದ್ದಾರೆ.

Read more Photos on
click me!

Recommended Stories