ಅಮ್ಮನ ಕಣ್ಣಿಗೆ ಕಾಣಿಸಿಕೊಂಡ ಜಾನು; ಚಿನ್ನುಮರಿ ಆತ್ಮದೊಂದಿಗೆ ಮಾತನಾಡಲು ಹೊರಟ ಜಯಂತ್!

Published : Apr 11, 2025, 09:10 PM IST

Lakshmi Nivasa Serial: ಜಾನು ರಾತ್ರೋರಾತ್ರಿ ತವರಿಗೆ ಹಿಂತಿರುಗಿದ್ದಾಳೆ, ಆದರೆ ಅವಳು ಸತ್ತಿದ್ದಾಳೆಂದು ಎಲ್ಲರೂ ಭಾವಿಸಿದ್ದಾರೆ. ಹಾಲು-ತುಪ್ಪ ಬಿಟ್ಟ ಬಳಿಕ ಜಾನು ಬರುತ್ತಾಳೆ ಎಂದು ಜಯಂತ್ ನಂಬಿದ್ದಾನೆ, ಆದರೆ ಆಕೆ ಅತ್ತೆ-ಮಾವನ ಮನೆಗೆ ಬಂದಿರಬಹುದು ಎಂದು ಶಂಕಿಸಿದ್ದಾನೆ.

PREV
16
ಅಮ್ಮನ ಕಣ್ಣಿಗೆ ಕಾಣಿಸಿಕೊಂಡ ಜಾನು; ಚಿನ್ನುಮರಿ ಆತ್ಮದೊಂದಿಗೆ ಮಾತನಾಡಲು ಹೊರಟ ಜಯಂತ್!

ವಿಶ್ವನ ತಂದೆಯ ಆಶ್ರಯದಲ್ಲಿರುವ ಜಾನು ರಾತ್ರೋರಾತ್ರಿ ತವರಿಗೆ ಆಗಮಿಸಿದ್ದಾಳೆ. ಹಿಂಬಾಗಿಲಿನಿಂದ ಮನೆಯೊಳಗೆ ಬಂದ ಜಾನು, ಅಪ್ಪ-ಅಮ್ಮನ ಕಾಲಡಿಯಲ್ಲಿ ಕುಳಿತು ಕಣ್ಣೀರು ಹಾಕಿದ್ದಾಳೆ. ನಾನು ಸತ್ತಿದ್ದೇನೆಂದು ನೀವೆಲ್ಲರೂ ತುಂಬಾ ದುಃಖದಲ್ಲಿದ್ದೀರಿ. ಇದಕ್ಕೆಲ್ಲಾ ನಾನೇ ಕಾರಣ. ಆದಷ್ಟು ಬೇಗ ನಾನು ನಿಮ್ಮುಂದೆ ಬರುತ್ತೀನಿ ಎಂದು ಜಾನು ಹೇಳುತ್ತಿರುವಾಗ ಲಕ್ಷ್ಮೀಗೆ ನಿದ್ದೆಯಿಂದ ಎಚ್ಚರವಾಗಿದೆ. ಮಂಚದ ಕೆಳಗೆ ಕುಳಿತು ಕಣ್ಣೀರು ಹಾಕುತ್ತಿದ್ದ ಮಗಳು ಲಕ್ಷ್ಮೀಗೆ ಕಾಣಿಸಿಕೊಂಡಿರೋದನ್ನು ತೋರಿಸಲಾಗಿದೆ. ಇದು ಖಂಡಿತ ಕನಸು ಆಗಿರುತ್ತೆ ಎಂದು ವೀಕ್ಷಕರು ಊಹಿಸಿದ್ದಾರೆ. 

26

ರಾತ್ರಿಯಾದರೂ ಚಿನ್ನುಮರಿಗೆ ಮನೆಗೆ ಬಂದಿಲ್ಲ ಎಂದು ಜಯಂತ್ ಹುಚ್ಚನಂತೆ ಮಾತನಾಡುತ್ತಿದ್ದಾನೆ. ಮಧ್ಯರಾತ್ರಿ ಮಲಗಿದ್ದ ಶಾಂತಮ್ಮಳನ್ನು ಎಚ್ಚರಗೊಳಿಸಿರುವ ಜಯಂತ್, ಜಾನು ಹೋದಾಗಿನಿಂದ ನಾನು ಮಲಗೇ ಇಲ್ಲ. ಮಲಗಿದ್ರೆ ಜಾನು ಬಂದು  ಏಳ್ರೀ ಮಲಗಿ ಎಂದು ಹೇಳಿದಂತೆ ಆಗುತ್ತದೆ. ಹಾಲು-ತುಪ್ಪ ಬಿಟ್ಮೇಲೆ ರಾತ್ರಿ ಸತ್ತವರ ಆತ್ಮ ಬರುತ್ತೆ ಎಂದು  ಶಾಂತಮ್ಮ ಹೇಳಿದ್ದಳು. ಇದೀಗ ಇದನ್ನೇ ನಂಬಿರುವ ಜಯಂತ್, ಮಧ್ಯರಾತ್ರಿಯೇ ಅತ್ತೆ-ಮಾವನ ಮನೆಗೆ ಹೊರಟಿದ್ದಾನೆ. 

36

ಹಾಲು-ತುಪ್ಪ ಬಿಟ್ಟ ಬಳಿಕ ಜಾನು ಬರ್ತಾರೆ  ಅಂತ ಕಾಯ್ತಿದ್ದೆ. ಆದ್ರೆ ನಮ್ಮ ಮನೆಗೆ ಜಾನು ಬಂದಿಲ್ಲ. ಅತ್ತೆ-ಮಾವನ ಮನೆಗೆ ಬಂದಿರಬಹುದು. ಹಾಗಾಗಿ ನಾವಿಬ್ಬರೂ ಹೋಗಿ ಮಾತನಾಡೋಣ ಬನ್ನಿ ಎಂದು ಶಾಂತಮ್ಮಳನ್ನು ಕರೆದಿದ್ದಾನೆ. 

46

ನಾನೇಕೆ ಅಲ್ಲಿಗೆ ಬರಲಿ. ನೀವು ಹೋಗಿ ಬಾ ಎಂದು ಶಾಂತಮ್ಮ ಹೇಳಿದ್ದಾಳೆ. ಜಾನು ಇಲ್ಲದೇ ನಾನು ಎಷ್ಟು ಚಡಪಡಿಸಿದ್ದೇನೆ ಎಂಬುದನ್ನು ನೀವು ಜಾನುಗೆ ಹೇಳಬೇಕು. ಆದ್ದರಿಂದ ತನ್ನೊಂದಿಗೆ ಶಾಂತಮ್ಮಳನ್ನು ಸಹ ಜಯಂತ್ ಕರೆದುಕೊಂಡು ಹೋಗಿದ್ದಾನೆ. 

56

ಇತ್ತ ತನ್ನ ತಂದೆಯ ಜೀವ ಉಳಿಸಿದಾಕೆಯನ್ನು ನೋಡಬೇಕು ಎಂದು ವಿಶ್ವ ಮುಂದಾಗಿದ್ದಾನೆ. ತಾನು ಮನೆಗೆ ಕರೆದುಕೊಂಡು ಬಂದಿರುವ ಯುವತಿ, ಜಯಂತ್‌ನ ಪತ್ನಿ ಎಂದ ನರಸಿಂಹನಿಗೆ ಗೊತ್ತಿಲ್ಲ. ನರಸಿಂಹನ ಮುಂದೆ ತನ್ನ ಹೆಸರು ಚಂದನಾ, ತನ್ನೂರು ಕುಂದಾಪುರ ಎಂದು ಜಾನು ಹೇಳಿಕೊಂಡಿದ್ದಾಳೆ. 

66

ಜಾನು ಜಲಸಮಾಧಿ ಆಗಿದ್ದಾಳೆ ಎಂದು ನಂಬಿರುವ ಶ್ರೀನಿವಾಸ್ ಮತ್ತು ಲಕ್ಷ್ಮೀ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನೆರವೇರಿಸಿದ್ದಾರೆ. ಮಗಳಿಗೆ ತನ್ನಿಂದ ಹಾಲು-ತುಪ್ಪ ಬಿಡಲು ನನ್ನಿಂದ ಸಾಧ್ಯವಿಲ್ಲ ಎಂದು ಲಕ್ಷ್ಮೀ ಕಣ್ಣೀರು ಹಾಕಿದ್ದಾಳೆ.

Read more Photos on
click me!

Recommended Stories