Ramachari -Yajamana : ಸುಮಾರು ಒಂದು ತಿಂಗಳಿಂದ ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಹಾಗೂ ಯಜಮಾನ ಸೀರಿಯಲ್ ಮಹಾಮಿಲನ ನಡೆಯುತ್ತಿದೆ. ಆದರೆ ಕಥೆಗಳಲ್ಲಿ ಯಾವುದೇ ಅಪ್ಡೇಟ್ ಆಗದೇ ನಿಧಾನಗತಿಯಲ್ಲಿ ಸಾಗುತ್ತಿರೋದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಮತ್ತು ಯಜಮಾನ ಸೀರಿಯಲ್ ಮಹಾಸಂಗಮ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ನಡೆಯುತ್ತಿದೆ. ಆದರೆ ಎರಡೂ ಸೀರಿಯಲ್ ಕಥೆಗಳು ಮುಂದೆ ಹೋಗದೇ, ಒಂದೇ ಎಳೆಯನ್ನು ಎಳೆದುಕೊಂಡು ಹೋಗುತ್ತಿರುವ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಯಜಮಾನ ಕಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
27
ಯಜಮಾನ ಸೀರಿಯಲ್ ಕಥೆ ಏನು?
ಯಜಮಾನ ಧಾರಾವಾಹಿ ಮತ್ತೊಂದು ಗೋಳಿನ ಕಥೆಯಾಗಿ ಮುಂದುವರೆಯುತ್ತಿದೆ. ಝಾನ್ಸಿ ಮತ್ತು ರಾಘು ಮದುವೆಯ ಕಥೆಯ ಹಿಂದೆ ಮುಂದೆಯೇ ಸೀರಿಯಲ್ ಕಳೆದ ಒಂದು ಅಲ್ಲ ಹಲವು ತಿಂಗಳುಗಳಿಂದ ಸುತ್ತುತ್ತಿದೆ.
37
ರಾಘು-ಝಾನ್ಸಿ ಮದುವೆ
ಸೀರಿಯಲ್ ಆರಂಭದಲ್ಲಿ ದುರಹಂಕಾರಿ ಝಾನ್ಸಿ ದುಡ್ಡಿನ ಆಮೀಷ ಒಡ್ಡಿ ರಘು ಜೊತೆ ಕಾಂಟ್ರಾಕ್ಟ್ ಮದುವೆ ಮಾಡಿಕೊಳ್ಳುತ್ತಾಳೆ. ಇನ್ನೊಂದು ಕಡೆ ರಾಘು ಮದುವೆ ಮನೆಯವರು ತೋರಿಸಿದ ಹುಡುಗಿ ಜೊತೆ ನಡೆಯುವಾಗ, ಪ್ರೀತಿಯ ಅರಿವಾಗಿ ತನಗೆ ಈಗಾಗಲೇ ರಾಘು ಜೊತೆ ಮದುವೆಯಾಗಿದೆ ಎನ್ನುತ್ತಾಳೆ.
ಇನ್ನೇನು ರಾಘು ಮತ್ತು ಝಾನ್ಸಿ ಜೊತೆಯಾಗಿ ಬಾಳಬೇಕು ಅಂದುಕೊಳ್ಳುವಷ್ಟರಲ್ಲಿ, ಪಲ್ಲವಿ ಮತ್ತು ಅನಿತಾ ನಡೆಯಿಂದ ಇಬ್ಬರು ಡಿವೋರ್ಸ್ ತೆಗೆದುಕೊಂಡು ಬೇರೆ ಬೇರೆಯಾಗುವ ಪರಿಸ್ಥಿತಿ ಕೂಡ ಬರುತ್ತೆ. ಆದರೆ ಇಬ್ಬರ ಮನಸ್ಸಲ್ಲೂ ಪ್ರೀತಿ ಹಾಗೆ ಇರುತ್ತೆ.
57
ಅನಿತಾ -ರಾಘು ಮದುವೆ
ಇಷ್ಟು ದಿನ ರಾಘುನನ್ನು ಪಡೆದುಕೊಳ್ಳಲು ಕಿತಾಪತಿ ಮಾಡಿದ ಅನಿತಾ, ಕೊನೆಗೆ ಮದುವೆ ದಿನ ಆಕ್ಸಿಡೆಂಟ್ ಆಗಿ ತಾನು ಕಾಲಿನ ಸ್ವಾಧೀನ ಕಳೆದುಕೊಂಡಿದ್ದೇನೆ ಎಂದು ವೀಲ್ ಚೇರ್ ನಲ್ಲಿ ಬರುವ ರಾಘುನನ್ನು ನೋಡಿ ತನಗೆ ಈ ಮದುವೆಯೇ ಬೇಡ. ಇಂತ ಗಂಡನ ಜೊತೆ ನಾನು ಬದುಕಲಾರೆ ಎನ್ನುತ್ತಾಳೆ.
67
ಆಕ್ಸಿಡೆಂಟಲ್ಲಿ ನೆನಪಿನ ಶಕ್ತಿ ಕಳೆದುಕೊಂಡ ಝಾನ್ಸಿ
ಇಷ್ಟೇಲ್ಲಾ ಆಗಿ, ರಾಘು ಅನಿತಾ ಮುಖವಾಡ ಕಳಚಿ ಇನ್ನು ಮುಂದೆ ತಾನು ಝಾನ್ಸಿ ಜೊತೆಗೆ ಇರುತ್ತೇನೆ ಎನ್ನುವಷ್ಟರಲ್ಲಿ ಅನಿತಾ ಮಾಡಿದ ಆಕ್ಸಿಡೆಂಟ್ ನಿಂದಾಗಿ ಝಾನ್ಸಿ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ನೆನಪಿನ ಶಕ್ತಿಯನ್ನೆ ಕಳೆದುಕೊಂಡಿದ್ದಾಳೆ.
77
ಇದನ್ನೆಲ್ಲಾ ನೋಡಿ ಜನ ಏನ್ ಹೇಳ್ತಿದ್ದಾರೆ
ರಾಮಾಚಾರಿ-ಚಾರು ಪ್ರಾಣ ಉಳಿಸಲು ಹೋರಾಟ ಆಯ್ತು, ರಘು ಆಕ್ಸಿಡೆಂಟ್ ಆಯ್ತು, ಈಗ ಝಾನ್ಸಿ ಆಕ್ಸಿಡೆಂಟ್. ಕಥೆ ಮುಂದೆ ಹೋಗ್ತಾನೆ ಇಲ್ಲ. ಇನ್ನೇನು ಸೀರಿಯಲ್ ಮುಗಿಯುತ್ತೆ ಅಂದ್ರೆ, ಅದನ್ನೇ ಮುಂದುವರೆಸಿಕೊಂಡು ಇನ್ನೂ ಒಂದು ವರ್ಷ ಕಥೆ ನಡೆಯುವ ಹಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.