BBK 12: ಗಿಲ್ಲಿ ಅಂದ್ರೆ ಸಿಲ್ಲಿನಾ? ಮುಗಿಬಿದ್ದ ಅಶ್ವಿನಿ ಗೌಡ, ರಿಷಾ, ಧ್ರುವಂತ್? ತಪ್ಪಾಗಿದ್ದು ಯಾರಿಂದ?

Published : Nov 07, 2025, 09:33 AM IST

ಗಿಲ್ಲಿ ನಟ ತಮ್ಮ ಅಣಕು ಮಾತುಗಳಿಂದ ನೋವುಂಟು ಮಾಡುತ್ತಿದ್ದಾರೆಂದು ಅಶ್ವಿನಿ ಗೌಡ, ರಿಷಾ ಮತ್ತು ಧ್ರುವಂತ್ ಆರೋಪಿಸಿದ್ದಾರೆ. ಆದರೆ, ತಮ್ಮ ನೇರ ನುಡಿಗೆ ಸ್ಪಷ್ಟನೆ ನೀಡಿರುವ ಗಿಲ್ಲಿ ನಟ, ಅವರ ಆರೋಪಗಳಿಗೆ ತಿರುಗೇಟು ನೀಡಿದ್ದು, ವೀಕೆಂಡ್ ಸಂಚಿಕೆ ಕುತೂಹಲ ಹೆಚ್ಚಿದೆ.

PREV
15
ಮಾತುಗಳಿಗೆ ಗಿಲ್ಲಿ ನಟ ಸ್ಪಷ್ಟನೆ

ಗಿಲ್ಲಿ ನಟ ತಮ್ಮ ಅಣಕು ಮಾತುಗಳಿಂದ ಬೇರೆಯವರ ಮನಸ್ಸು ನೋಯಿಸುತ್ತಾರೆ ಅನ್ನೋದು ಅಶ್ವಿನಿ ಗೌಡ, ರಿಷಾ, ಧ್ರುವಂತ್ ಸೇರಿದಂತೆ ಹಲವರು ಹೇಳಿಕೊಂಡಿದ್ದಾರೆ. ಇರೋದನ್ನು ನೇರವಾಗಿ ಹೇಳುವ ಕಾರಣ ನಿಮಗೆ ಬೇಸರವುಂಟಾಗಬಹುದು ತಮ್ಮ ಮಾತುಗಳಿಗೆ ಗಿಲ್ಲಿ ನಟ ಸ್ಪಷ್ಟನೆ ನೀಡಿದ್ದರು.

25
ಒಂದೊಂದು ಗ್ರೂಪ್

ಈ ಬಾರಿ ಬಿಗ್‌ಬಾಸ್‌ನಲ್ಲಿ ಪ್ರತಿ ವಾರ ಒಂದೊಂದು ಗ್ರೂಪ್ ರಚನೆಯಾಗೋದನ್ನು ಕಾಣಬಹುದು. ಪ್ರತಿ ವಾರ ರಚನೆಯಾಗುವ ಆ ಗುಂಪಿನಲ್ಲಿ ಅಶ್ವಿನಿ ಗೌಡ ಕಾಣಿಸುತ್ತಾರೆ. ಈ ಬಾರಿ ಧ್ರುವಂತ್, ರಿಷಾ ಮತ್ತು ಅಶ್ವಿನಿ ಗೌಡ ಜೊತೆಯಾಗಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಮೂವರು ಜೊತೆಯಾಗಿ ಗಿಲ್ಲಿ ನಟನ ಮೇಲೆ ಮುಗಿಬಿದ್ದಿದ್ದಾರೆ.

35
ವೀಕೆಂಡ್ ಸಂಚಿಕೆ

ಮೂವರು ಒಂದಾಗಿ ದಾಳಿ ನಡೆಸಿದ್ರೂ ಗಿಲ್ಲಿ ನಟ ಮಾತ್ರ ತಮ್ಮದೇ ಶೈಲಿಯಲ್ಲಿ ಅವರದ್ದೇ ಮಾತುಗಳ ಮೂಲಕ ತಿರುಗೇಟು ನೀಡಿದ್ದಾರೆ. ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ನಾಲ್ವರಲ್ಲಿ ಯಾರು ಸರಿ ಮತ್ತು ತಪ್ಪು ಅನ್ನೋದನ್ನು ಸ್ಪಷ್ಟಪಡಿಸಬೇಕು. ಕಳೆದ ವಾರದ ಸಂಚಿಕೆಯಂತೆ ವೀಕ್ಷಕರನ್ನು ಗೊಂದಲದಲ್ಲಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

45
ಗಿಲ್ಲಿ ಗಿಲ್ಲಿ

ಅದೇನು ಎಲ್ಲದಕ್ಕೂ ಗಿಲ್ಲಿ ಗಿಲ್ಲಿ ಅಂತೀರಿ ಎಂದು ಅಶ್ವಿನಿ ಗೌಡ ಪ್ರಶ್ನೆ ಮಾಡ್ತಾರೆ. ನಯ, ನಾಜೂಕು ಅನ್ನೋದನ್ನು ಕಲಿತುಕೋ ಎಂದ ರಿಷಾ, ಅದು ನಿನ್ನಲ್ಲಿಯೇ ಇಲ್ಲ ಎಂದು ಗಿಲ್ಲಿ ತಿರುಗೇಟು ನೀಡಿದ್ದಾರೆ. ಮತ್ತೊಂದೆಡೆ ಧ್ರುವಂತ್, ಕಾಮಿಡಿ ಮಾಡೋದು ಬೇರೆ. ಆದ್ರೆ ಇದೇ ಕಾಮಿಡಿ ಮೂಲಕ ಬೇರೆಯವರನ್ನು ಚೀಪ್ ಮಾಡೋದು ಬೇರೆ. ಯಾರಾದ್ರೂ ನಿನ್ನ ಒಂದು ಒಳ್ಳೆಯದನ್ನು ಮಾತಾಡ್ತಾರಾ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ನಿನ್ನ ಬಗ್ಗೆ ತುಂಬಾ ಒಳ್ಳೆದು ಮಾತಾಡ್ತಾರಾ ಎಂದು ಅಲ್ಲೇ ತಿರುಗೇಟು ನೀಡುತ್ತಾರೆ.

ಇದನ್ನೂ ಓದಿ: ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ Bigg Boss ರಕ್ಷಿತಾ ಶೆಟ್ಟಿ ಸ್ಯಾರಿ ಪಿನ್​: ಏನಿದು ವಿಷ್ಯ?

55
ಮತ್ತೇನು ಮಾಡಿದ್ದೀಯಾ?

ಬೇರೆಯವರ ಕಾಲೆಳೆಯುವುದನ್ನು ಬಿಟ್ಟು ಮತ್ತೇನು ಮಾಡಿದ್ದೀಯಾ? ನನ್ನ ಬಗ್ಗೆ ನೀನು ಏನು ಮಾತನಾಡಬಾರದು ಎಂದು ಗಿಲ್ಲಿಗೆ ಧ್ರುವಂತ್ ಎಚ್ಚರಿಸಿದ್ದಾರೆ. ಈ ಬಾರಿ ಟಾಸ್ಕ್ ಗಳಿಲ್ಲದ ಕಾರಣ ಸ್ಪರ್ಧಿಗಳ ಮಾತು, ನಡವಳಿಕೆ ಎಲ್ಲವೂ ಗಣನೆಗೆ ಬರಲಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್, ಬಿಗ್ ಬಾಸ್‌ನಲ್ಲಿ ಫೈರ್: ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್‌ ಸಂಗತಿಗಳು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories